ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಹೆಚ್ಚಿಸಿದ ರಷ್ಯಾ: 7 ಮಂದಿ ಗಾಯ
Team Udayavani, Feb 11, 2023, 12:53 AM IST
ಕೀವ್: ಉಕ್ರೇನ್ ಮೇಲಿನ ರಷ್ಯಾದಾಳಿ ಆರಂಭಗೊಂಡು ಫೆ.24ಕ್ಕೆ ಒಂದು ವರ್ಷ ಪೂರ್ತಿಯಾಗಲಿರುವಂತೆಯೇ ಶುಕ್ರವಾರ ಉಕ್ರೇನ್ ಮೇಲೆ ಮತ್ತೆ ಭಾರೀ ಪ್ರಮಾಣದ ಬಾಂಬ್ ಹಾಗೂ ರಾಕೆಟ್ ದಾಳಿ ನಡೆಸಿದೆ.
ಉಕ್ರೇನ್ನ ಪೂರ್ವಭಾಗದ ಕೈಗಾರಿಕ ಪ್ರಾಂತವಾದ ಡಾನ್ಬಾಸ್, ಲುಗಾನ್ಸ್, ಡಾನೆಸ್ಕ್ ಮೇಲೆ ರಷ್ಯಾ ದಾಳಿ ಹೆಚ್ಚಿಸಿದೆ. ಅತ್ಯಾಧುನಿಕ ಬಾಂಬರ್, ಡ್ರೋನ್ಸ್ ಹಾಗೂ ರಾಕೆಟ್ಗಳ ಬಳಕೆಯ ಮೂಲಕ ದಾಳಿಯ ತೀವ್ರತೆಯನ್ನ ಹೆಚ್ಚಿಸಿದೆ ಎನ್ನಲಾಗಿದೆ.
ಇದರ ಜತೆಗೆ ಉಕ್ರೇನಿನ ಎರಡನೇ ಅತೀ ದೊಡ್ಡ ನಗರವಾದ ಖಾರ್ಕಿವ್ನಲ್ಲಿನ ಮೂಲಸೌಕರ್ಯಗಳನ್ನೂ ಗುರಿಯಾಗಿಸಿ, ದಾಳಿ ನಡೆಸಲಾಗಿದ್ದು, 7 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಷ್ಯಾ ದಾಳಿಗೆ ಉಕ್ರೇನ್ ಕೂಡ ತಿರುಗೇಟು ನೀಡುತ್ತಿದ್ದು, 5 ಕಲಿಬರ್ ಕ್ಷಿಪಣಿಗಳು ಹಾಗೂ 5 ಇರಾನ್ ನಿರ್ಮಿತ ಡ್ರೋನ್ಗಳನ್ನು ವಾಯುಪಡೆ ಹೊಡೆದುರುಳಿಸುವುದಾಗಿ ತಿಳಿಸಿದೆ. ಪ್ರಬಲ ಪ್ರತ್ಯುತ್ತರ ನೀಡುವ ನಿಟ್ಟಿನಲ್ಲಿ ನೆದರ್ಲ್ಯಾಂಡ್ಗೆ ಎಫ್-16 ಯುದ್ಧ ವಿಮಾನಗಳನ್ನು ನೀಡುವಂತೆ ಉಕ್ರೇನ್ ಮನವಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕದನ ವಿರಾಮ: 3 ಒತ್ತೆಯಾಳುಗಳ ಬಿಡುಗಡೆ ಬೆನ್ನಲ್ಲೇ 90 ಕೈದಿಗಳನ್ನು ಬಿಡುಗಡೆ ಮಾಡಿದ ಇಸ್ರೇಲ್
Israel-Hamas;ಅಂತೂ ಕದನ ವಿರಾಮ ಜಾರಿ: ಮೂವರು ಇಸ್ರೇಲಿಗರ ಬಿಡುಗಡೆ
Davos; ಇಂದು ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ಆರಂಭ
Donald Trump ಪ್ರಮಾಣವಚನ: ಭೋಜನಕೂಟದಲ್ಲಿ ಮುಖೇಶ್ ಮತ್ತು ನೀತಾ ಅಂಬಾನಿ
America: ಟ್ರಂಪ್ ಪ್ರಮಾಣದ ಬೆನ್ನಲ್ಲೇ ಅಕ್ರಮ ವಲಸಿಗರು ಹೊರಕ್ಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.