ಅಜ್ಜ-ಅಜ್ಜಿಯ ನೆನಪಿಗಾಗಿ 2 ಬಸ್ ತಂಗುದಾಣ ನಿರ್ಮಿಸಿದ ಮೊಮ್ಮಗ
Team Udayavani, Apr 10, 2021, 3:45 AM IST
ಕೋಟ: ಉದಯವಾಣಿಯ ಪತ್ರಿಕಾ ಏಜೆಂಟ್ ಸಾಸ್ತಾನ ಪಾಂಡೇಶ್ವರದ ನಿವಾಸಿ ಚಂದ್ರಶೇಖರ್ ಮಯ್ಯ ಅವರು ಪತ್ರಿಕಾ ವಿತರಣೆ ಯನ್ನೇ ಜೀವನವಾಗಿಸಿಕೊಂಡವರು.
ಇವರು ತನ್ನ ಅಜ್ಜ-ಅಜ್ಜಿಯ ನೆನಪಿಗಾಗಿ 6 ಲಕ್ಷ ರೂ. ಸ್ವಂತ ಹಣವನ್ನು ವಿನಿಯೋಗಿಸಿ ಎರಡು ಸುಸಜ್ಜಿತ ಬಸ್ ತಂಗುದಾಣಗಳನ್ನು ನಿರ್ಮಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಜ್ಜ-ಅಜ್ಜಿಯ ಪ್ರೇರಣೆ
ಚಂದ್ರಶೇಖರ್ ಮಯ್ಯ ಅವರ ಅಜ್ಜ ನರಸಿಂಹ ತುಂಗ ಹಾಗೂ ಅಜ್ಜಿ ನಾಗವೇಣಿಯಮ್ಮ ಪರೋಪ ಕಾರಿಯಾಗಿ ಗುರುತಿಸಿಕೊಂಡಿದ್ದರು. ಸುಮಾರು ಒಂದು ದಶಕದ ಹಿಂದೆ ರಾಷ್ಟ್ರೀಯ ಹೆದ್ದಾರಿಯು ಚಿಕ್ಕ ರಸ್ತೆಯಾಗಿದ್ದ ಸಂದರ್ಭ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದವರಿಗೆ ಬಾಯಾರಿಕೆ ನೀಗಲು ತನ್ನ ಮನೆಯ ಮುಂದೆ ಬೆಲ್ಲ-ನೀರು ಹಾಗೂ ಕುಳಿತು ವಿಶ್ರಮಿಸಲು ಜಗಲಿಯ ವ್ಯವಸ್ಥೆ ಮಾಡಿದ್ದರು. ಹೀಗಾಗಿ ಅಜ್ಜನ ಆದರ್ಶವನ್ನು ಪ್ರೇರಣೆಯಾಗಿಸಿಕೊಂಡ ಮೊಮ್ಮಗ ಚಂದ್ರಶೇಖರ ಮಯ್ಯ ಅವರು ಅವರ ರೀತಿಯಲ್ಲೇ ನಾನು ಏನಾದರೂ ಸಮಾಜ ಸೇವೆ ಮಾಡಬೇಕು ಎನ್ನುವ ಸಂಕಲ್ಪ ತೊಟ್ಟು ಒಂದು ವರ್ಷದ ಹಿಂದೆ ಉಡುಪಿ-ಕುಂದಾಪುರ ಮಾರ್ಗದಲ್ಲಿ ಪಾಂಡೇಶ್ವರ ಈಶ್ವರಮಠದ ಎದುರು ಸುಮಾರು 2.5 ಲಕ್ಷ ರೂ. ವೆಚ್ಚದಲ್ಲಿ ದಿ| ನರಸಿಂಹ ತುಂಗ ಸ್ಮರಣಾರ್ಥ ಬಸ್‌ತಂಗುದಾಣ ನಿರ್ಮಿಸಿದರು.
ಇದೀಗ ಅದರ ಎದುರುಗಡೆ ಕುಂದಾಪುರ- ಉಡುಪಿ ಮಾರ್ಗದಲ್ಲಿ ಚರ್ಚ್ ಶಾಲೆಯ ಪಕ್ಕದಲ್ಲಿ ಸುಮಾರು 3.5 ಲಕ್ಷ ವೆಚ್ಚದಲ್ಲಿ ಸಾಂಪ್ರದಾಯಿಕ ಶೈಲಿಯ, ಪರಿಸರ ಸ್ನೇಹಿ ಇನ್ನೊಂದು ಬಸ್‌ತಂಗುದಾಣ ನಿರ್ಮಿಸಿದ್ದು ಎ. 16ಕ್ಕೆ ಇದರ ಉದ್ಘಾಟನೆ ನಡೆಯಲಿದೆ. ಈ ತಂಗುದಾಣಕ್ಕೆ ಅಜ್ಜಿ ದಿ| ನಾಗವೇಣಿಯಮ್ಮ ಅವರ ಹೆಸರಿಟ್ಟಿದ್ದಾರೆ.
ಮಾದರಿ ಕಾರ್ಯ
ಚಂದ್ರಶೇಖರ್ ಮಯ್ಯ ಅವರು 21 ವರ್ಷದಿಂದ ಉದಯವಾಣಿಯ ಪತ್ರಿಕಾ ಏಜೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 10 ವರ್ಷದ ಹಿಂದೆ ತ್ರಿಡಿ ಆ್ಯನಿಮೇಟರ್ ಎಂಜಿನಿಯರಿಂಗ್ ವಿಭಾಗದಲ್ಲಿ ಉಪನ್ಯಾಸಕ ಹುದ್ದೆಯ ಅವಕಾಶ ಸಿಕ್ಕಿದ್ದರೂ ಅದನ್ನು ತ್ಯಜಿಸಿ ಹುಟ್ಟೂರಿಗೆ ಏನಾದರೂ ಸೇವೆ ಸಲ್ಲಿಸಬೇಕು ಎನ್ನುವುದು ಇವರ ಅದಮ್ಯ ಬಯಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.