ದೇಶದಲ್ಲೇ ಅತೀ ಹೆಚ್ಚು ಗುಜರಿ ವಾಹನ ಇರುವ ರಾಜ್ಯ ಕರ್ನಾಟಕ :ಇಲ್ಲಿವೆ 70 ಲಕ್ಷ ಹಳೆಯ ವಾಹನಗಳು
Team Udayavani, Mar 29, 2021, 8:50 PM IST
ನವದೆಹಲಿ: ದೇಶದಲ್ಲೇ ಅತಿ ಹೆಚ್ಚು ಗುಜರಿ ವಾಹನಗಳಿರುವುದು ಯಾವ ರಾಜ್ಯದಲ್ಲಿ ಗೊತ್ತಾ? ಕರ್ನಾಟಕದಲ್ಲಿ! ಹಳೆಯ ಹಾಗೂ ದೋಷಪೂರಿತ ವಾಹನಗಳನ್ನು ಗುಜರಿಗೆ ಹಾಕಿ, ವಾಯುಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಗುಜರಿ ನೀತಿ ಘೋಷಿಸಿದ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ. ಕರ್ನಾಟಕದ ರಸ್ತೆಗಳಲ್ಲಿ ಬರೋಬ್ಬರಿ 70 ಲಕ್ಷಗಳಷ್ಟು ಹಳೆಯ ವಾಹನಗಳು ಸಂಚರಿಸುತ್ತಿವೆ. ಈ ಪೈಕಿ, 31.9 ಲಕ್ಷ ವಾಹನಗಳು 15-20 ವರ್ಷಗಳಷ್ಟು ಹಳೆಯದಾದರೆ, 38.1 ಲಕ್ಷ ವಾಹನಗಳು 20 ವರ್ಷಗಳಷ್ಟು ಹಳೆಯದು.
“ವಾಹನ್-4′ ಡಿಜಿಟಲೀಕೃತ ವಾಹನಗಳ ದಾಖಲೆಗಳಿಂದ ಈ ವಿಷಯ ತಿಳಿದುಬಂದಿದೆ. 15 ವರ್ಷಗಳಷ್ಟು ಹಳೆಯದಾದ 4 ಕೋಟಿ ವಾಹನಗಳು ದೇಶಾದ್ಯಂತ ಸಂಚರಿಸುತ್ತಿದ್ದು, ಈ ಪೈಕಿ 2 ಕೋಟಿ ವಾಹನಗಳು 20 ವರ್ಷಗಳಷ್ಟು ಹಳೆಯದ್ದು ಎಂದೂ ತಿಳಿದುಬಂದಿದೆ.
ಇನ್ನು ಉತ್ತರಪ್ರದೇಶದಲ್ಲಿ 56.5 ಲಕ್ಷ, ದೆಹಲಿಯಲ್ಲಿ 49.9 ಲಕ್ಷ, ಕೇರಳದಲ್ಲಿ 34.6 ಲಕ್ಷ ಮತ್ತು ತಮಿಳುನಾಡಿನಲ್ಲಿ 33.4 ಲಕ್ಷ ಹಳೆಯ ವಾಹನಗಳು ಸಂಚರಿಸುತ್ತಿವೆ ಎಂದು ದತ್ತಾಂಶಗಳು ಹೇಳಿವೆ.
ಇದನ್ನೂ ಓದಿ :ಕರುಣೆ ಮರೆತ ಖಾಕಿ : ತುಂಬು ಗರ್ಭಿಣಿಯನ್ನು 3 ಕಿ.ಮೀ ನಡೆಸಿದ ಮಹಿಳಾ ಪೊಲೀಸ್
ಸರ್ಕಾರದ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ 15 ವರ್ಷ ದಾಟಿರುವ ವಾಹನಗಳನ್ನು ಗುಜರಿಗೆ ಹಾಕುವ ಪ್ರಕ್ರಿಯೆಯು 2022ರ ಏ.1ರಿಂದ ಆರಂಭವಾಗಲಿದೆ. ಭಾರೀ ಗಾತ್ರದ ವಾಹನಗಳ ಕಡ್ಡಾಯ ಫಿಟೆ°ಸ್ ಪರೀಕ್ಷೆ ನಿಯಮವು 2023ರ ಏ.1ರಿಂದ, ಇತರೆ ವಾಹನಗಳಿಗೆ ಈ ನಿಯಮವು 2024ರ ಜೂ.1ರಿಂದ ಜಾರಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.