![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Feb 22, 2023, 5:12 PM IST
ಹನೂರು: ಮಹಿಳೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಆತನು ಕೂಡ ನೇಣಿಗೆ ಶರಣಾಗಿರುವ ದುರ್ಘಟನೆ ನಾಗಮಲೆ ಗ್ರಾಮದಲ್ಲಿ ಜರುಗಿದೆ.
ತಮಿಳುನಾಡು ರಾಜ್ಯದ ಧರ್ಮಪುರಿ ಚೆಕ್ ಪೋಸ್ಟ್ ನಿವಾಸಿ ಲಕ್ಷ್ಮಿ ಕೊಲೆಯಾದ ದುರ್ದೈವಿಯಾಗಿದ್ದು, ಧರ್ಮಪುರಿ ಜಿಲ್ಲೆಯ ಎರಭಯ್ಯನಹಳ್ಳಿಯ ಮುನಿರಾಜು ಕೊಲೆ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ .
ಘಟನೆಗೆ ಕಾರಣ
ಧರ್ಮಪುರಿ ಜಿಲ್ಲೆಯ ಎರಭಯ್ಯನಹಳ್ಳಿಯ ಮುನಿರಾಜು ಜೊತೆ ಲಕ್ಷ್ಮೀ ಕಳೆದ ಹಲವು ವರ್ಷಗಳಿಂದ ವಾಸವಾಗಿದ್ದಳು. ಬಳಿಕ ಆತನನ್ನು ತೊರೆದು ಕಳೆದ ಏಳು ತಿಂಗಳ ಹಿಂದೆ ಆಕೆಯ ಸಂಬಂಧಿಕ ರಮೇಶ ಎಂಬಾತನ ಜೊತೆ ಕಳೆದ ಏಳು ತಿಂಗಳಿನಿಂದ ಧರ್ಮಪುರಿಯಲ್ಲಿದ್ದು ಬಳಿ ಕಳೆದ ಒಂದು ತಿಂಗಳಿನಿಂದ ನಾಗಮಲೆಯಲ್ಲಿ ವಾಸವಿದ್ದಳು.
ಈ ವಿಚಾರ ತಿಳಿದ ಮುನಿರಾಜು ಮಂಗಳವಾರ ಬೆಳಿಗ್ಗೆಲಕ್ಷ್ಮೀಯನ್ನು ನೋಡಲು ಬಂದು ಆಕೆ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಸ್ವಲ್ಪ ದೂರದಲ್ಲಿಯೇ ಬೇವಿನ ಮರ ಒಂದಕ್ಕೆ ಆತನು ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ರಮೇಶ ನೀಡಿದ ದೂರಿನ ಅನ್ವಯ ಮಹದೇಶ್ವರ ಬೆಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.