ಮಾಜಿ CM ಗಳ ವಲಸೆ ಹಿಂದೆ ಫಲ ನೀಡಿತ್ತೇ?
Team Udayavani, Apr 17, 2023, 7:59 AM IST
ಬೆಂಗಳೂರು: ವರಿಷ್ಠರ ಜತೆಗಿನ ವೈಮನಸ್ಯಕ್ಕಾಗಿ ಪಕ್ಷ ತೊರೆದ ಹಾಗೂ ಹೊಸ ಪಕ್ಷ ಕಟ್ಟುವ ಸಾಹಸಕ್ಕೆ ಕೈ ಹಾಕಿದ ಯಾವುದೇ ಮಾಜಿ ಮುಖ್ಯಮಂತ್ರಿಗಳು ರಾಜಕೀಯವಾಗಿ ಯಶಸ್ವಿಯಾದ ಉದಾಹರಣೆ ಕರ್ನಾಟಕದ ರಾಜಕಾರಣದಲ್ಲಿ ಇದುವರೆಗೆ ಇಲ್ಲ.
ಹಿಂದುಳಿದ ವರ್ಗದ ಹರಿಕಾರ ಎಂದೇ ರಾಜ್ಯ ರಾಜಕಾರಣದಲ್ಲಿ ಖ್ಯಾತರಾಗಿದ್ದ ವರ್ಚಸ್ವಿ ನಾಯಕ ದಿ| ದೇವರಾಜ್ ಅರಸು ಅವರಿಂದ ಮೊದಲ್ಗೊಂಡು ಬಿ.ಎಸ್.ಯಡಿಯೂರಪ್ಪನವರವರೆಗೂ ಈ ವೈಫಲ್ಯದ ಸಾಲೇ ನಮ್ಮ ಕಣ್ಣ ಮುಂದಿದೆ. ಹೀಗಾಗಿ ವರಿಷ್ಠರ ವಿರುದ್ಧ ಸೆಡ್ಡು ಹೊಡೆದು ಕಾಂಗ್ರೆಸ್‌ನತ್ತ ಮುಖ ಮಾಡಿರುವ ಜಗದೀಶ್ ಶೆಟ್ಟರ್ ಯಶಸ್ವಿಯಾಗಬಹುದೇ? ಅಥವಾ ತಮ್ಮನ್ನು ನಿರ್ಲಕ್ಷಿಸಿದ ವರಿಷ್ಠರಿಗೆ ಸೋಲುಣಿಸುವುದಕ್ಕಾದರೂ ಅವರ ಬಂಡಾಯದ ಬಿಸಿ ಸಫಲವಾಗಬಹುದೇ ಎಂಬ ಚರ್ಚೆ ಈಗ ಪ್ರಾರಂಭವಾಗಿದೆ.
ಡಿ.ದೇವರಾಜ ಅರಸು
ವರಿಷ್ಠರ ವಿರುದ್ಧ ಸೆಟೆದು ನಿಂತು ಪ್ರತ್ಯೇಕ ಪಕ್ಷ ಕಟ್ಟಿಯೂ ಸಫಲರಾಗದ ನಾಯಕರ ಪೈಕಿ ದಿ| ದೇವರಾಜ್ ಅರಸು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ರಾಜ್ಯದಲ್ಲಿ ಸತತ ಎರಡು ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೂ, ಹಿಂದುಳಿದ ವರ್ಗದ ರಾಜಕಾರಣಕ್ಕೆ ಹೊಸ ಆಯಾಮವನ್ನೇ ಕೊಟ್ಟು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದರೂ ಇಂದಿರಾ ಗಾಂಧಿ ಹಾಗೂ ಕಾಂಗ್ರೆಸ್ ಅಲೆಯ ವಿರುದ್ಧ ಈಜಿ ರಾಜಕೀಯವಾಗಿ ಸಫಲತೆ ಕಾಣುವುದಕ್ಕೆ ಅರಸು ಅವರಿಗೆ ಸಾಧ್ಯವಾಗಲೇ ಇಲ್ಲ.
ಎಸ್.ಬಂಗಾರಪ್ಪ
ಅದಾದ ಬಳಿಕ ಹಿಂದುಳಿದ ವರ್ಗಕ್ಕೆ ಸೇರಿದ ಇನ್ನೊಬ್ಬ ಜನಪ್ರಿಯ ನಾಯಕ ಎಸ್.ಬಂಗಾರಪ್ಪ ಕೂಡಾ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಪ್ರತ್ಯೇಕ ಪಕ್ಷ ಸ್ಥಾಪಿಸಿದರು. ತಮಗಿದ್ದ ಜನಪ್ರಿಯತೆಯ ಬಲದಿಂದ ಕಾಂಗ್ರೆಸ್‌ನ್ನು ಅಧಿಕಾರದಿಂದ ದೂರ ಇಡುವಲ್ಲಿ ಬಂಗಾರಪ್ಪ ಸ್ಥಾಪಿಸಿದ ಹೊಸ ಪಕ್ಷ ಯಶ ಕಂಡಿತ್ತಾದರೂ ಆ ಬಳಿಕ ಅಧಿಕಾರದ ಮೊಗಸಾಲೆಗೆ ಬರುವುದಕ್ಕೆ ಬಂಗಾರಪ್ಪ ಸಫಲರಾಗಲಿಲ್ಲ. ಸಾಲು ಸಾಲು ಪಕ್ಷಾಂತರದ ಮೂಲಕ ಅವರು ತಮ್ಮ ಅಸ್ಥಿತ್ವ ಉಳಿಸಿಕೊಂಡರೇ ಹೊರತು ಕಾಂಗ್ರೆಸ್ ಶ್ರೀರಕ್ಷೆಯಿಂದ ಆಚೆ ಬಂದು ಬಲಾಡ್ಯ ರಾಜಕೀಯ ಶಕ್ತಿಯಾಗುವ ಬಂಗಾರಪ್ಪ ನವರ ಕನಸು ಕೊನೆಯವರೆಗೂ ಈಡೇರಲಿಲ್ಲ.
ಬಿ.ಎಸ್.ಯಡಿಯೂರಪ್ಪ
ಇದೇ ಹಾದಿಯಲ್ಲಿ ಸಾಗಿದ ಮತ್ತೂಬ್ಬ ನಾಯಕ ಬಿ.ಎಸ್.ಯಡಿಯೂರಪ್ಪ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗಲೇ ತಮ್ಮ ಅಪಾರ ಬೆಂಬಲಿಗರ ಜತೆಗೆ ಪಕ್ಷ ತೊರೆದು ಕೆಜೆಪಿ ಕಟ್ಟಿದ ಯಡಿಯೂರಪ್ಪ ಕೂಡಾ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಲ್ಲಿ ಸಫಲರಾದರೂ ವೈಯಕ್ತಿಕವಾಗಿ ಯಾವುದೇ ಲಾಭ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಇಲ್ಲದ ಬಿಜೆಪಿ, ಬಿಜೆಪಿ ಇಲ್ಲದ ಯಡಿಯೂರಪ್ಪ ಶೂನ್ಯ ಎಂಬ ಚರ್ಚೆ ಆಗಲೇ ಹುಟ್ಟಿಕೊಂಡಿತು. ಹೀಗಾಗಿ ಮರಳಿ ಪಕ್ಷ ಸೇರಿದ ಯಡಿಯೂರಪ್ಪ ಮತ್ತೂಮ್ಮೆ ಪಕ್ಷವನ್ನು ಅಧಿಕಾರಕ್ಕೆ ತಂದು ಮತ್ತೂಮ್ಮೆ ಮುಖ್ಯಮಂತ್ರಿಯಾದರು.
ಎಸ್.ಎಂ.ಕೃಷ್ಣ
ಇನ್ನು ಕಾಂಗ್ರೆಸ್‌ನ ಇನ್ನೊಬ್ಬ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕೂಡ ವರಿಷ್ಠರ ವಿರುದ್ಧ ಬೇಸರ ಗೊಂಡು ಬಿಜೆಪಿ ಸೇರ್ಪಡೆ ಯಾದರೂ ರಾಜಕೀಯವಾಗಿ ನೇಪಥ್ಯಕ್ಕೆ ಸರಿದು ಹೋದರು. ಈ ಪಟ್ಟಿಯಲ್ಲಿ ಈಗ ಜಗದೀಶ್ ಶೆಟ್ಟರ್ ಸೇರ್ಪಡೆಗೊಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.