![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jun 27, 2023, 5:12 AM IST
ಬೆಳ್ತಂಗಡಿ: ಲಾಯಿಲ ನಿವಾಸಿ, ಎಲೆಕ್ಟ್ರೀಷಿಯನ್ ತಾಜ್ ಬಾವುಂಞಿ(57) ಅವರು ಮಂಗಳೂರಿನಿಂದ ವಾಪಸಾಗುತ್ತಿದ್ದ ವೇಳೆ ಸರಕಾರಿ ಬಸ್ಸಿನಲ್ಲೇ ಹೃದಯಾಘಾತಕ್ಕೊಳಗಾಗಿ ನಿಧನರಾದ ಘಟನೆ ಜೂ. 26ರಂದು ಸಂಜೆ ವೇಳೆ ನಡೆದಿದೆ.
ಬಸ್ಸು ಪಡೀಲ್ ತಲುಪುತ್ತಿದ್ದಂತೆ ನಿರ್ವಾಹಕ ಟಿಕೆಟ್ ನೀಡುವುದಕ್ಕಾಗಿ ಕರೆದರೂ ಅವರು ಪ್ರತಿಕ್ರಿಯಿಸಿರಲಿಲ್ಲ. ಸಂದೇಹದಿಂದ ಆಸ್ಪತ್ರೆಗೆ ಬಸ್ಸು ಕೊಂಡೊಯ್ದು ವೈದ್ಯರು ಬಂದು ಪರಿಶೀಲಿಸಿದಾಗ ಅವರು ಮರಣವನ್ನಪ್ಪಿರುವುದು ಖಚಿತಗೊಂಡಿತು.
ಮೃತರು ಲಾಯಿಲ ಮಸೀದಿಯ ಕಾರ್ಯವ್ಯಾಪ್ತಿಗೆ ಬರುವ ನೂರುಲ್ ಹುದಾ ಎಜುಕೇಶನ್ ಹಾಗೂ ಚಾರಿಟೇಬಲ್ ಟ್ರಸ್ಟ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರನ್ನು ಆಗಲಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.