![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Apr 11, 2021, 11:51 PM IST
ಉಳ್ಳಾಲ: ಉಳ್ಳಾಲ ಸೇರಿದಂತೆ, ಹರೇಕಳ, ಪಾವೂರು, ಎಲಿಯಾರ್ ಬಳಿ ಭಾನುವಾರ ರಾತ್ರಿ ಅಕಾಲಿಕ ಗುಡುಗು ಗಾಳಿ ಸಹಿತ ಮಳೆಯಿಂದಾಗಿ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ರಸ್ತೆ ಸಂಪರ್ಕ ವ್ಯತ್ಯವಾಗಿದ್ದು ಸ್ಥಳೀಯರು ಸೇರಿದಂತೆ ಮೆಸ್ಕಾಂನ ಸಿಬಂದಿಗಳು ತಡರಾತ್ರಿವರೆಗೂ ತೆರವು ಕಾರ್ಯ ನಡೆಸಿದರು.
ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲಯಾರ್ – ನ್ಯೂಪಡ್ಪು ಸಂಪರ್ಕಿಸುವ ಐಕು ಬಳಿ ಮುಖ್ಯ ರಸ್ತೆಗೆ ಮರ ಉರುಳಿಬಿದ್ದು ಸುಮಾರು 6ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನಡು ರಸ್ತೆಗೆ ಉರುಳಿ ಬಿದ್ದಿದ್ದು, ಈ ಸಂದರ್ಭದಲ್ಲಿ ವಾಹನ ಸಂಚಾರ ಇಲ್ಲದ ಕಾರಣ ದೊಡ್ಡ ಅವಘಡ ತಪ್ಪಿದಂತಾಗಿದೆ.
ಉಲ್ಲಾಸ್ ನಗರ ವ್ಯಾಪ್ತಿಯಲ್ಲಿ ಒಂದೆರಡು ಮನೆಗಳಿಗೆ ಸಣ್ಣ ಪುಟ್ಟ ಹಾನಿಯಾಗಿದ್ದು, ಒಂದು ಮನೆಗೆ ಭಾಗಷ ಹಾನಿಯನ್ನು ಉಂಟುಮಾಡಿದೆ.
ಸ್ಥಳದಲ್ಲಿ ಸಾರ್ವಜನಿಕರಿಂದ ತ್ವರಿತ ಶ್ರಮದಾನ ಕಾರ್ಯವು ನಡೆಯುತ್ತಿದೆ.
ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಿ ಅಬ್ದುಲ್ ಬಶೀರ್ ಎಸ್.ಎಂ ಅವರ ನೇತೃತ್ವದಲ್ಲಿ ಯುವಕರು ತೆರವು ಕಾರ್ಯವನ್ಬು ನಡೆಸಿದರು. ನ್ಯೂ ಪಡ್ಪುವಿನಿಂದ ಪಾವೂರು ಕಡವಿನ ಬಳು ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಸ್ಥಳೀಯರು ತೆರವುಗೊಳಿಸಿದರು. ಪಾವೂರು ಗ್ರಾಮದ ಇನೋಳಿ ಬಳಿಯೂ ಮರ ಉರುಳಿ ಅನೇಕ ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿದ್ದು, ಕೊಣಾಜೆ ವಲಯದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
ಮೆಸ್ಕಾಂ ಹಿರಿಯ ಅಭಿಯಂತರ ದಯಾನಂದ್ ನೇತೃತ್ವದಲ್ಲಿಮೆಸ್ಕಾಂ ಸಿಬಂದಿಗಳು ತೆರವು ಕಾರ್ಯದಲ್ಲಿ ತೊಡಗಿದ್ದಾರೆ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.