Ayodhya ಕಾವಲಿಗೆ ಹೈಟೆಕ್‌ ಭದ್ರತಾ ಕವಚ್‌: ವ್ಯವಸ್ಥೆಯಲ್ಲಿ ಏನೆಲ್ಲ ಇರಲಿದೆ?

ಮಂದಿರದ ಸುತ್ತ 24*7 ಸರ್ಪಗಾವಲು...  6 ತಿಂಗಳಿಗೊಮ್ಮೆ ವ್ಯವಸ್ಥೆ ಪರಿಶೀಲನೆ..

Team Udayavani, Jan 6, 2024, 6:45 AM IST

ayodhye ram mandir

ಹೊಸದಿಲ್ಲಿ: ರಾಮ ಜನ್ಮಭೂಮಿಯಲ್ಲಿ ನಿರ್ಮಾಣ­ಗೊಂಡಿರುವ ಐತಿಹಾಸಿಕ ರಾಮ ಮಂದಿರದ ಭದ್ರತೆಗಾಗಿ ಅತ್ಯಾಧುನಿಕ ಮತ್ತು ಅತ್ಯಂತ ಪರಿಣಾಮ­ಕಾರಿ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದ್ದು, 90 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿರುವ ಈ ಭದ್ರತಾ ಮೂಲಸೌಕರ್ಯಗಳು ಮಂದಿರದ ಕವಚದಂತೆ ಕಾರ್ಯ­ನಿರ್ವಹಿಸಲಿವೆ. ಉತ್ತರ ಪ್ರದೇಶ ರಾಜಕೀಯ ನಿರ್ಮಾಣ ನಿಗಮವು (ಯುಪಿಆರ್‌ಎನ್‌ಎನ್‌) 247 ಅವಧಿಯಲ್ಲೂ ಕಾರ್ಯ­ನಿರ್ವಹಿಸುವ ಭದ್ರತಾ ವ್ಯವಸ್ಥೆಯ ಅಳವಡಿಕೆಯಲ್ಲಿ ತೊಡಗಿದ್ದು, ರಾಮಲಲ್ಲಾ ಪ್ರಾಣ­ಪ್ರತಿಷ್ಠೆಗೂ ಮುನ್ನವೇ ಈ ಸೌಲಭ್ಯಗಳ ಕಾರ್ಯಾರಂಭವಾಗಲಿದೆ. ಅಳವಡಿಕೆಯ ಬಳಿಕ ಪ್ರತೀ 6 ತಿಂಗಳಿಗೊಮ್ಮೆ ಭದ್ರತಾ ಸೌಲಭ್ಯಗಳ ಪರಿಶೀಲನೆ ನಡೆಸಿ ಅಗತ್ಯ ವಿರುವ ಅಭಿವೃದ್ಧಿಗಳನ್ನು ಮಾಡಲಾಗುತ್ತದೆ ಎಂದು ಉತ್ತರ ಪ್ರದೇಶ ಪೊಲೀಸ್‌ ಮಹಾನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಅಲ್ಲದೆ ಸರಯೂ ನದಿಯ ಘಾಟ್‌ಗಳ ಬಳಿ ಯಾತ್ರಾ ರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆ, ತೊಂದರೆಗಳು ಆಗದಂತೆ ತಡೆಯುವ ನಿಟ್ಟಿನಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಇದಕ್ಕಾ ಗಿ 2.48 ಕೋಟಿ ರೂ.ಗಳ ವರೆಗಿನ ಉಪಕರಣಗಳನ್ನು ಖರೀದಿಸಲಾಗಿದೆ. ಇದರಲ್ಲಿ 4 ಹಡಗುಗಳು, 10 ಥ್ರೋ ಬಾಲ್‌, 10 ಲೈಫ್ ರಿಂಗ್ಸ್‌, 15 ಲೈಫ್ ಜಾಕೆಟ್ಸ್‌, 10 ರೆಸ್ಕೂé ಟ್ಯೂಬ್ಸ್, 2 ಡ್ರ್ಯಾಗನ್‌ ಲೈಟ್‌ಗಳೂ ಸೇರಿವೆ.

ಭದ್ರತಾ ವ್ಯವಸ್ಥೆಯಲ್ಲಿ ಏನೆಲ್ಲ ಇರಲಿದೆ?
ಅತ್ಯಾಧುನಿಕ ಕ್ರ್ಯಾಶ್‌ ರೇಟೆಡ್‌ ಬೊಲ್ಲಾರ್ಡ್ಸ್‌
ಮಂದಿರ ಸಂಕೀರ್ಣದ ಸುತ್ತಾ ಕ್ರ್ಯಾಶ್‌ ರೇಟೆಡ್‌ ಬೊಲ್ಲಾರ್ಡ್ಸ್‌ಗಳನ್ನು ಅಳವಡಿಸಲಾಗುತ್ತಿದ್ದು, ಇದು ಸಂಕೀರ್ಣದ ಗೋಡೆಗಳಿಗೆ ವಾಹನಗ­ಳಿಂದಾಗುವ ಹಾನಿ ಯನ್ನು ತಪ್ಪಿಸು ತ್ತದೆ. ಅಲ್ಲದೇ ಜನ್ಮಭೂಮಿ ಪಥದ ಮಾರ್ಗ ವಾಗಿ ಚಲಿಸುವ ಎಲ್ಲ ವಾಹನಗಳನ್ನು ಸ್ಕ್ಯಾನ್‌ ಮಾಡಲಿದೆ. ಸಂಕೀರ್ಣದ ಕಟ್ಟಡಕ್ಕೆ ಗಾಡಿ ಢಿಕ್ಕಿ ಹೊಡೆಯುವ ಪರಿಸ್ಥಿತಿ ಬಂದರೆ ಕೇವಲ 3 ಸೆಕೆಂಡ್‌ಗಳಲ್ಲಿ ನೆಲದಲ್ಲಿ ಹುದುಗಿರುವ ಬೊಲ್ಲಾರ್ಡ್ಸ್‌ಗಳು ಮೇಲೆದ್ದು ಗಾಡಿಯನ್ನು ಅಡ್ಡಗಟ್ಟಲಿವೆ ಅದರ ಜತೆಗೆ ಟೈಯರ್‌ ಕಿಲ್ಲರ್ಸ್‌ ಭದ್ರತೆಯೂ ಇದ್ದು, ಇದು ವಾಹನಗಳ ಟೈರ್‌ಗಳನ್ನೇ
ಪಂಕ್ಚರ್‌ ಮಾಡಲಿದೆ.

ವಿಶೇಷ ಕಾರ್ಯಪಡೆ ತಂಡ ನಿಯುಕ್ತಿ
ಅಯೋಧ್ಯೆ ಕಟ್ಟಡದ ಕಾವಲಿಗಾಗಿಯೇ 135 ಸಿಬಂದಿಯನ್ನೊಳಗೊಂಡ ವಿಶೇಷ ಕಾರ್ಯಪಡೆ ನಿಯೋಜಿಸಲಾಗುತ್ತಿದ್ದು, ಇದಕ್ಕಾಗಿ 5 ಕೋಟಿ ರೂ.ಗಳನ್ನು ರಾಜ್ಯಸರಕಾರ ವ್ಯಯಿಸಿದೆ. ಸಿಬಂದಿ ಸದಾ ಬುಲೆಟ್‌ ಪ್ರೋಫ್ ಜಾಕೆಟ್‌ಗಳನ್ನು ಧರಿಸಿಕೊಂಡು ಶಸ್ತ್ರ ಸಜ್ಜಿತರಾಗಿ ಇರಲಿದ್ದಾರೆ. ಭದ್ರತಾ ಸಿಬಂದಿಯ ವಾಹನಗಳಿಗಾಗಿಯೇ 1.02 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಹಿದೆ. ಇನ್ನು ಮಂದಿರದ ಒಳಗಿನ ಅಗ್ನಿ ಅವಘಡಗಳನ್ನು ತಡೆಯುವ ವ್ಯವಸ್ಥೆಗಾಗಿಯೇ 1.44 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ.

ಸಿಸಿಟಿವಿ, ನೈಟ್‌ವಿಷನ್‌ ಕಣ್ಗಾವಲು ವ್ಯವಸ್ಥೆ
11 ಕೋಟಿ ವೆಚ್ಚದಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸ ಲಾಗುತ್ತಿದ್ದು, ಇದಕ್ಕಾಗಿ 8.56 ಕೋಟಿ ರೂ.ವೆಚ್ಚದಲ್ಲಿ ನಿಯಂತ್ರಣ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸ­ಲಾಗಿದೆ. ಇದರೊಂದಿಗೆ ರಾತ್ರಿ ವೇಳೆ ಮಂದಿರ ಸಂಕೀರ್ಣದ ಕಾವಲಿಗೆ ಅಗತ್ಯವಾಗಿರುವಂಥ ಇರುಳು ಗೋಚರತೆ ಭದ್ರತಾ ವ್ಯವಸ್ಥೆ(ನೈಟ್‌ ವಿಷನ್‌ ಸಿಸ್ಟಮ್‌ ), ಡ್ರೋನ್‌ ನಿಗ್ರಹ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

1-a-shaina

Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.