ಹೆದ್ದಾರಿ ಬದಿಗಳಾಗುತ್ತಿವೆ ತಿಪ್ಪೆಗುಂಡಿ!

ತ್ಯಾಜ್ಯ ಮುಕ್ತ ಹೆದ್ದಾರಿ ಸಂಕಲ್ಪಕ್ಕೆ ಬೇಕು ಕಾನೂನಿನ ಬಲ

Team Udayavani, Mar 29, 2021, 1:30 AM IST

ಹೆದ್ದಾರಿ ಬದಿಗಳಾಗುತ್ತಿವೆ ತಿಪ್ಪೆಗುಂಡಿ!

ಕಾರ್ಕಳ: ಸ್ವಚ್ಛತೆ ಕುರಿತು ಯಾರು ಏನೇ ಹೇಳಿದರೂ, ಎಷ್ಟೇ ಜಾಗೃತಿ ಮೂಡಿಸಿದರೂ ರಸ್ತೆ ಬದಿ, ತ್ಯಾಜ್ಯ ಸುರಿಯುವುದು, ಕಸ ಎಸೆಯುವುದು ಇನ್ನೂ ಕಡಿಮೆಯಾಗಿಲ್ಲ. ಪರಿಸರ ಸ್ವತ್ಛತೆ ಹೇಳಿಕೆಗಷ್ಟೆ ಸೀಮಿತವಾಗಿದ್ದು, ಹೆದ್ದಾರಿ ಬದಿಗಳಲ್ಲಿ ಮಾಲಿನ್ಯ ಹೆಚ್ಚುತ್ತಲೇ ಇದೆ.

ನಗರ ವ್ಯಾಪ್ತಿಯಿಂದ ಹೊರ ಬರುತ್ತಿದ್ದಂತೆ ಬಹುತೇಕ ರಸ್ತೆ ಬದಿ ತ್ಯಾಜ್ಯಗಳ ರಾಶಿ ಕಾಣಿಸುತ್ತದೆ.

ಮಿಯ್ಯಾರು- ಕಡಾರಿ ಹೆದ್ದಾರಿ, ಬೈಲೂರು- ಜೋಡುರಸ್ತೆ, ಸಾಣೂರು ಹೆದ್ದಾರಿ, ಮಠದ ಕೆರೆಯಿಂದ ನಿಟ್ಟೆ ತೆರಳುವ ಹೆದ್ದಾರಿ, ಕಾರ್ಕಳ ಬಜಗೋಳಿ ಹೆದ್ದಾರಿಯುದ್ದಕ್ಕೂ ರಸ್ತೆ ಬದಿಗಳು ಕಸದ ಕೊಂಪೆಯೇ ಆಗಿವೆ. ಪಾನೀಯ, ನೀರು ಕುಡಿದವರು ಪ್ಲಾಸ್ಟಿಕ್‌ ಬಾಟಲಿ ರಸ್ತೆ ಬದಿಗಳಲ್ಲಿ ಎಸೆಯುತ್ತಿದ್ದಾರೆ. ತ್ಯಾಜ್ಯಗಳನ್ನೂ ತಂದು ಸುರಿಯಲಾಗುತ್ತಿದೆ.

ಮೂಗಿಗೆ ಬಡಿಯುತ್ತಿದೆ ವಾಸನೆ
ಕೊಳೆತ ಆಹಾರ ಪದಾರ್ಥಗಳು, ಮಕ್ಕಳಿಗೆ ಹಾಕುವ ಪ್ಯಾಂಪರ್ಸ್‌, ಮೊಟ್ಟೆ ಹೊರ ಕವಚ, ಕೋಳಿ ಮಾಂಸದ ಉಳಿಕೆ, ಮದ್ಯದ ಖಾಲಿ ಬಾಟಲಿಗಳು, ಆಹಾರ ಪೊಟ್ಟಣಗಳು ಹೀಗೆ ಎಲ್ಲವನ್ನೂ ಚೀಲದಲ್ಲಿ ತಂದು ಎಸೆಯಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಇವುಗಳಿಂದ ವಾಸನೆ ಬರಲಾರಂಭಿಸಿ, ರಸ್ತೆಯಲ್ಲಿ ತೆರಳುವವರಿಗೆ ಯಾತನೆಯಾಗುತ್ತಿದೆ. ಕೆಲವು ಕಡೆ ಸ್ಥಳೀಯರು ತ್ಯಾಜ್ಯಕ್ಕೆ ಬೆಂಕಿ ಹಾಕುವುದರಿಂದ ಮತ್ತಷ್ಟು ಮಾಲಿನ್ಯ ಉಂಟಾಗುತ್ತಿದೆ.

ವಿದ್ಯಾವಂತರೇ ತಪ್ಪೆಸಗುತ್ತಿದ್ದಾರೆ
ರಸ್ತೆಗೆ ಕಸ ಎಸೆಯುವವರಲ್ಲಿ ಬಹುತೇಕರು ಕಾರು, ಬೈಕ್‌, ಸ್ಕೂಟರ್‌ಗಳಲ್ಲಿ ಹೋಗುವಾಗ ರಸ್ತೆ ಬದಿ ಎಸೆದು ಹೋಗುತ್ತಾರೆ. ಕೆಲವರು ತಮ್ಮ ಜತೆ ಮಕ್ಕಳನ್ನು ಕರೆತಂದು ಅವರೆದುರೇ ತ್ಯಾಜ್ಯ ಎಸೆಯುತ್ತಾರೆ. ಇದರಿಂದ ಮಕ್ಕಳೂ ಅದನ್ನೇ
ಕಲಿಯುವಂತಾಗಿದೆ.

ಜಾನುವಾರುಗಳಲ್ಲಿ ರೋಗ ಭೀತಿ
ರಸ್ತೆ ಬದಿಗಳಲ್ಲಿ ಬಿಸಾಕಿದ ತ್ಯಾಜ್ಯ, ವಿಷಯುಕ್ತ ಆಹಾರಗಳನ್ನು ಜಾನುವಾರುಗಳು ತಿನ್ನುತ್ತವೆ. ಬಿಸಿಲ ಬೇಗೆಗೆ ಆಹಾರ ಅರಸಿಕೊಂಡು ಬರುವ ಗೋವುಗಳು ರಸ್ತೆ ಬದಿಯ ಪ್ಲಾಸ್ಟಿಕ್‌, ಹಳಸಿದ ಆಹಾರ ಇತ್ಯಾದಿಗಳನ್ನು ತಿನ್ನುವುದರಿಂದ ಬೇಸಗೆಯ ಈ ಅವಧಿಯಲ್ಲಿ ಅವುಗಳು ಜೀರ್ಣವಾಗದೆ ಜಾನುವಾರುಗಳು ಕೂಡ ಅನಾರೋಗ್ಯಕ್ಕೆ ಒಳಗಾಗುತ್ತಿವೆ.

ಸಾಮಾಜಿಕ ಅಪರಾಧವಾಗಿ ಪರಿಗಣಿಸಬೇಕು
ಸ್ವತ್ಛತೆ ಕಾಪಾಡುವುದು ಎಲ್ಲರ ಕರ್ತವ್ಯ. ಆದರೂ ಕೂಡ ಇದು ಕಟ್ಟುನಿಟ್ಟಾಗಿ ಪಾಲನೆ ಯಾಗುತ್ತಿಲ್ಲ. ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಕಸ ಎಸೆಯುವುದು ಸಾಮಾಜಿಕ ಅಪರಾಧವಾಗಿ ಪರಿಗಣಿಸಿ ಕ್ರಿಮಿನಲ್‌ ಪ್ರಕರಣ ದಾಖಲಿಸ ಲಾಗುತ್ತದೆ. ಅದೇ ರೀತಿ ಇಲ್ಲೂ ಮಾಡುವುದು ಅನಿವಾರ್ಯವಾಗಿದೆ.

ನಾಮಫ‌ಲಕ ಲೆಕ್ಕಕ್ಕೆ ಮಾತ್ರ
ಹೆದ್ದಾರಿ ಹಾದುಹೋಗುವ ಆಯಾ ಪಂಚಾಯತ್‌, ಸ್ಥಳೀಯಾಡಳಿತಗಳು ತ್ಯಾಜ್ಯ ಸುರಿಯಬಾರದು ಎಂದು ಬೋರ್ಡ್‌ ಅಳವಡಿಸಿದ್ದರೂ, ಅದರ ಬುಡದಲ್ಲೇ ಕಸ ತಂದು ಸುರಿಯ ಲಾಗುತ್ತಿದೆ. ನಗರಸಭೆ, ಪುರಸಭೆ, ಸ್ಥಳಿಯಾಡಳಿತ ಮಟ್ಟದಲ್ಲಿ ಸಾರ್ವಜನಿಕ ರಲ್ಲಿ ಸ್ವತ್ಛತಾ ಜಾಗೃತಿ ಮೂಡಿಸಲಾಗುತ್ತಿದೆ. ಸಂಘ ಸಂಸ್ಥೆಗಳೂ ಕಸ ಸ್ವತ್ಛಗೊಳಿಸುವ ಕೆಲಸ ಮಾಡುತ್ತಿವೆ.

ಟಾಪ್ ನ್ಯೂಸ್

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.