ಹೇಳಿದ್ದು 66 ಕಿ.ಮೀ.; ಗುತ್ತಿಗೆ 48 ಕಿ.ಮೀ.ಗೆ ಉಳಿದದ್ದು ಯಾವಾಗ ?
Team Udayavani, Mar 25, 2021, 5:50 AM IST
ಯಾವುದೇ ಯೋಜನೆ ಆರಂಭಿಸುವಾಗ ಸಮರ್ಪಕವಾದ ಸಿದ್ಧತೆ ಮತ್ತು ಬದ್ಧತೆ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಐದು ವರ್ಷಗಳ ಹಿಂದೆ ಯೋಜನೆಯನ್ನು ಸರಿಯಾಗಿ ರೂಪಿಸಿದ್ದರೆ ಈಗ ಉತ್ತಮವಾದ ರಸ್ತೆಯಾಗುತ್ತಿತ್ತು.
ಬಂಟ್ವಾಳ: ಸರಿಸುಮಾರು 5 ವರ್ಷಗಳ ಹಿಂದೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ. ರೋಡಿನಿಂದ 66 ಕಿ.ಮೀ. ಹೆದ್ದಾರಿಯನ್ನು ಚತುಷ್ಪಥ ಗೊಳಿಸುವ ಕಾಮಗಾರಿ ಆರಂಭಿಸಲಾಗಿತ್ತು. ಅನಂತರ ಅದು ಸ್ಥಗಿತಗೊಂಡಿತ್ತು. ಆದರೆ ಈಗ ಹೊಸದಾಗಿ ಗುತ್ತಿಗೆ ನೀಡುವ ವೇಳೆ ಅದು 48 ಕಿ.ಮೀ.ಗಳಿಗೆ ಇಳಿದಿದ್ದು, ಉಳಿದ 18 ಕಿ.ಮೀ. ಏನಾಯಿತು, ಈಗ 48 ಎಂದವರು, ಕಾಮಗಾರಿ ಆರಂಭದ ವೇಳೆ ಅದನ್ನು ಮತ್ತೂ ಇಳಿಸುತ್ತಾರೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿದೆ.
ಒಂದು ಹೆದ್ದಾರಿಯ ಕಾಮಗಾರಿ ಪ್ರಾರಂಭಗೊಂಡು 5 ವರ್ಷ ಕಳೆದರೂ ಅದರ ಕೆಲಸ ಸರಿಯಾಗಿ ನಡೆಯಲೇ ಇಲ್ಲ. ಹೀಗಾಗಿ ಜನತೆ ಈ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವರೆಗೆ ಎಲ್ಲಿಯವರೆಗೆ ಅಭಿವೃದ್ಧಿ ಯಾಗು
ತ್ತದೆ ಎಂಬುದನ್ನು ನಂಬಲು ಸಿದ್ಧ ರಿಲ್ಲ. ಜತೆಗೆ ಹೆದ್ದಾರಿ ಅಭಿವೃದ್ಧಿಯ ಅಂತರವನ್ನೂ ಕಡಿಮೆ ಮಾಡುತ್ತಿರುವು ದರಿಂದ ಮುಂದೆ ಇನ್ನಷ್ಟು ಕಡಿಮೆ ಯಾಗಿ ಮುಂದೆ ಬಿ.ಸಿ.ರೋಡ್‌ನಿಂದ ಉಪ್ಪಿನಂಗಡಿಯವರೆಗೆ ಮಾತ್ರ ಅಭಿವೃದ್ಧಿ ಎಂದು ಹೇಳುತ್ತಾರೆಯೇ ಎಂಬ ಸಂಶಯ ಕೂಡ ಕಾಡುತ್ತಿದೆ.
ಪ್ರಸ್ತುತ ಬಿ.ಸಿ. ರೋಡಿನಿಂದ ಪೆರಿಯಶಾಂತಿವರೆಗಿನ 48 ಕಿ.ಮೀ. ಹೆದ್ದಾರಿ ಕಾಮಗಾರಿಯನ್ನು ಕೆಎನ್‌ಆರ್ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಚತುಷ್ಪಥ ಹೆದ್ದಾರಿ ಸಹಿತ ಕಲ್ಲಡ್ಕದಲ್ಲಿ 6 ಲೇನ್‌ಗಳ ಫ್ಲೆ$çಓವರ್ ನಿರ್ಮಾಣಗೊಳ್ಳಲಿದೆ. ಈ ಹಿಂದೆ ಬಿ.ಸಿ.ರೋಡಿನಿಂದ ಅಡ್ಡ ಹೊಳೆವರೆಗಿನ ರಸ್ತೆಯನ್ನು ಎಲ್‌ಆ್ಯಂಡ್‌ಟಿ ಕಂಪೆನಿಗೆ 821 ಕೋ.ರೂ.ಗಳಿಗೆ ಗುತ್ತಿಗೆ ನೀಡಲಾಗಿತ್ತು. ಪ್ರಸ್ತುತ ಹೆದ್ದಾರಿ ಅನುಷ್ಠಾನ ವೆಚ್ಚ ಗಣನೀಯ ಏರಿಕೆಯಾಗಿದ್ದು, ಈಗ 1,100.88 ಕೋ.ರೂ.ಗಳಿಗೆ ಗುತ್ತಿಗೆ ನೀಡ ಲಾಗಿದೆ. ಹೀಗಾಗಿ ಕಾಮಗಾರಿ ವಿಳಂಬ ವಾದಷ್ಟು ಸರಕಾರಕ್ಕೆ ಹೊರೆ ಯಾಗುತ್ತಲೇ ಇದೆ.
ಭೂ ಸ್ವಾಧೀನದ ತೊಡಕು?
ಬಿ.ಸಿ. ರೋಡ್‌ನಿಂದ ಅಡ್ಡಹೊಳೆವರೆಗೆ ಅಭಿವೃದ್ಧಿಗೊಳ್ಳಬೇಕಾದ ಹೆದ್ದಾರಿ ಸದ್ಯಕ್ಕೆ ಪೆರಿಯ ಶಾಂತಿ ವರೆಗೆ ಮಾತ್ರ ಅಭಿವೃದಿ œಗೊಳ್ಳುತ್ತಿದ್ದು, ಪೆರಿಯ ಶಾಂತಿ-ಅಡ್ಡಹೊಳೆ ಹೆದ್ದಾರಿಯ ಅಭಿವೃದ್ಧಿಯನ್ನು ಸದ್ಯದ ಟೆಂಡರ್‌ನಲ್ಲಿ ಕೈ ಬಿಡಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಕೈ ಪೂರ್ಣಗೊಳ್ಳದೆ ಇರುವುದರಿಂದ ಉಳಿದ ಭಾಗವನ್ನು ಕೈ ಬಿಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಅಂದರೆ ಪೆರಿಯಶಾಂತಿ ಬಳಿಕ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಭೂ ಪ್ರದೇಶವೇ ಇದ್ದು, ಹೀಗಾಗಿ ಅಲ್ಲಿಂದ ಕ್ಲೀಯರೆನ್ಸ್ ಸಿಕ್ಕಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಈ ವಿಚಾರ ಖಚಿತವಾಗಿಲ್ಲ. ಹೀಗಾಗಿ ಯಾವ ಕಾರಣಕ್ಕೆ ಕೈ ಬಿಡಲಾಗಿದೆ ಎಂಬುದನ್ನು ಸಂಬಂಧಪಟ್ಟ ಜನಪ್ರತಿನಿಧಿಗಳು, ಎನ್‌ಎಚ್‌ಎಐ ಅಧಿಕಾರಿ ವರ್ಗವೇ ಖಚಿತ ಪಡಿಸಬೇಕಿದೆ.
ಹೆದ್ದಾರಿ ಇಲಾಖೆಯ ಭೂ ಸ್ವಾಧೀನ ಪ್ರಕ್ರಿಯೆಯ ಕುರಿತು ಜಾಗದ ಮಾಲಕರಿಗೆ ಸಾಕಷ್ಟು ಅಸಮಧಾನವಿದ್ದು, ನಮ್ಮ ಜಾಗದಲ್ಲಿ ಇಷ್ಟು ಹೋಗುತ್ತದೆ ಎಂದು ಹೇಳಿದ್ದಾರೆ. ಆದರೆ ದಾಖಲೆಗಳನ್ನು ಖಚಿತ ಪಡಿಸಿ ನಮಗೆ ಅವಾರ್ಡ್ ನೀಡಿಲ್ಲ(ಹಣ ಕೊಡುವ ಪ್ರಕ್ರಿಯೆ). ಹೀಗಾಗಿ ಬೇರೆ ಜಾಗ ತೆಗೆಯುವಂತಿಲ್ಲ. ಮತ್ತೂಂದೆಡೆ ಭೂಸ್ವಾಧೀನದ ಬಳಿಕ ಭೂಭಾಗದಲ್ಲಿ ಕಟ್ಟಡವನ್ನು ಕಟ್ಟುವುದಕ್ಕೂ ಹೆದರಿಕೆಯಾಗುತ್ತಿದೆ. ಅಂದರೆ ಕಟ್ಟಡ ಕಟ್ಟಿದ ಬಳಿಕ ಇನ್ನೂ ಒಂದಷ್ಟು ಭೂಮಿ ಬೇಕು ಎಂದು ಕೇಳಿದರೆ, ನಾವು ಮತ್ತೆ ಹೊಸ ಕಟ್ಟಡವನ್ನು ತೆಗೆಯುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಜಾಗದ ಮಾಲಕ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ವಾಹನ ದಟ್ಟಣೆ ಇಳಿಕೆ
ದ.ಕ. ಜಿಲ್ಲಾ ಕೇಂದ್ರ ಮಂಗಳೂರಿನಿಂದ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಬಿ.ಸಿ.ರೋಡಿನಿಂದ ಅಡ್ಡ ಹೊಳೆ ಪ್ರದೇಶ ಪ್ರಮುಖ ಭಾಗ ವಾಗಿದ್ದು, ಇಲ್ಲೇ ಹೆಚ್ಚಿನ ವಾಹನದೊತ್ತಡ ಇರುತ್ತದೆ. ಮುಖ್ಯವಾಗಿ ಪೆರಿಯಶಾಂತಿಯಲ್ಲಿ ಕೊಕ್ಕಡ-ಧರ್ಮಸ್ಥಳ ಕ್ರಾಸ್ ಇದೆ. ಹೀಗಾಗಿ ಅಲ್ಲಿಯ ವರೆಗೆ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಹೀಗಾಗಿ ಸದ್ಯಕ್ಕೆ ಅರ್ಧಂ ಬರ್ಧ ಕಾಮಗಾರಿ ನಡೆದಿರುವ ಬಿ.ಸಿ.ರೋಡು- ಪೆರಿಯಶಾಂತಿ ವರೆಗೆ ಕಾಮಗಾರಿ ನಡೆದರೂ ಪ್ರಮುಖ ವಾದ ವಾಹನ ದಟ್ಟಣೆ ಸಾಕಷ್ಟು ಕಡಿಮೆಯಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.