ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಹಿಜಾಬ್ ವಿವಾದ: ಸಿದ್ದರಾಮಯ್ಯ

ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ಹ್ಯಾರಿಸ್ ನಲಪಾಡ್ ಪ್ರಮಾಣ ವಚನ ಸ್ವೀಕಾರ

Team Udayavani, Feb 10, 2022, 2:42 PM IST

1-dsdsd

ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಭಾವಿಸಿಯೇ ಹಿಜಾಬ್ ನಂತಹ ಭಾವನಾತ್ಮಕ ವಿಷಯಗಳನ್ನ ತಂದಿದ್ದಾರೆ ಎಂದು ವಿಪಕ್ಷ ನಾಯಕ‌ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ಹ್ಯಾರಿಸ್ ನಲಪಾಡ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಲಪಾಡ್ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ,ಪಕ್ಷ ಸಂಘಟನೆ ಮಾಡಲು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ನಲಪಾಡ್ ಹಾಗೂ ಯುವ ಪಡೆಗೆ ಅಭಿನಂದನೆಗಳು. ಇಂದು ದೇಶ ಬಹಳ ಬಿಕ್ಕಟ್ಟನ್ನ ಎದುರಿಸುತ್ತಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ನಂತರ ಶೋಷಣೆ, ಮಹಿಳೆಯರಿಗೆ, ಬಡವರಿಗೆ, ಕಾರ್ಮಿಕರಿಗೆ ತೊಂದರೆಯಾಗಿದೆ. ಹೀಗಾಗಿ ಕಾಂಗ್ರೆಸ್ ಮುಂದೆ ದೊಡ್ಡ ಸವಾಲು ಇದೆ. ದೇಶ ಉಳಿಸಬೇಕಾಗಿದೆ, ಸಂವಿಧಾನ ಉಳಿಸಬೇಕಾಗಿದೆ. ದೇಶ ಆರ್ಥಿಕವಾಗಿ ದಿವಾಳಿಯಾಗ್ತಾ ಇದೆ. ಯುವಕರು ಭವಿಷ್ಯದ ನಾಯಕರಾಗುವಂಥವರು. ಭವಿಷ್ಯವನ್ನ ರೂಪಿಸುವಂಥವರು, ರಾಷ್ಟ್ರ ನಿರ್ಮಾಣ ಮಾಡುವಂಥವರು. ನಿಮ್ಮ ಜವಾಬ್ದಾರಿ ಹೆಚ್ಚಿದೆ ಎಂದು ನಿಮಗೆ ಅರ್ಥವಾಗಿರಬೇಕು‌ ಎಂದರು.

ಬಿಜೆಪಿ ಏಳೆಂಟು ವರ್ಷದಲ್ಲಿ ಜನಪರ ಕೆಲಸ ಮಾಡಿಲ್ಲ. ನುಡಿದಂತೆ ನಡೆಯಲಿಲ್ಲ, ಸುಳ್ಳು ಹೇಳಿದ್ದಾರೆ. ಭಾವನಾತ್ಮಕ ವಿಷಯಗಳನ್ನ ಜನರ ಮುಂದೆ ಇಟ್ಟು ಧರ್ಮ ನಶೆ ಏರಿಸಿದ್ದಾರೆ. ರಾಜ್ಯ ಸರ್ಕಾರ ಕಳೆದ ಎರಡು ವರ್ಷದಿಂದ ಏನೂ ಮಾಡಿಲ್ಲ‌. ಭ್ರಷ್ಟಾಚಾರ ಮುಗಿಲುಮುಟ್ಟಿದೆ. ರಾಜ್ಯವನ್ನ ಲೂಟಿ ಮಾಡ್ತಾಯಿದ್ದಾರೆ. ಇದನ್ನ ಮುಚ್ಚಿಸುವ ಸಲುವಾಗಿ ಭಾವನಾತ್ಮಕ ವಿಷಯಗಳನ್ನ ಮುಂದಿಟ್ಟು ಜನರನ್ನ ಹಾದಿ ತಪ್ಪಿಸುತ್ತಿದ್ದಾರೆ ಎಂದರು.

ಹಿಜಾಬ್ ಇದೊಂದು ವಿಷಯವೇ ಅಲ್ಲ

ಹಿಜಾಬ್ ಬಹಳ ವರ್ಷಗಳಿಂದ ಮುಸ್ಲಿಂ ಯುವತಿಯವರು ಧರಿಸುತ್ತಿದ್ದಾರೆ. ಈಗ ಇದ್ದಕ್ಕಿದ್ದಂತೆ ಇದನ್ನ ವಿವಾದ ಮಾಡಿಬಿಟ್ಟರು ಹಿಂದುತ್ವ, ಹಾಗೂ‌ ಮತ ಕ್ರೋಢಿಕರಣಕ್ಕಾಗಿ ಈ ರೀ‌ತಿ‌ಮಾಡ್ತಾಯಿದ್ದಾರೆ. ನಾನು ಶಾಲಾ ದಿನಗಳಲ್ಲಿ ಕೇಸರಿ ಶಾಲು ನೋಡಿರಲಿಲ್ಲ. ಕೇಸರಿ ಶಾಲು ಹಾಕ್ಕೊಂಡು ಯಾರೂ ಬರ್ತಾಯಿರಲಿಲ್ಲ. ಸಂಘ ಪರಿವಾರದವರು ಕೇಸರಿ ಶಾಲು ಖರೀದಿಸಿ ವಿದ್ಯಾರ್ಥಿಗಳಿಗೆ ಹಂಚಿದ್ದಾರೆ . ರಾಜ್ಯದಲ್ಲಿ ಬೆಂಕಿ ಹಚ್ಚಿದ್ದಾರೆ. ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿ ಕಳುಹಿಸಿದವರು ಅವರೇ , ಬೇರೇಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗ್ತಿದೆ. ತನಿಖೆಯಾಗಲಿ, ಕೇಸರಿ ಶಾಲು ಹಾಕಿಸಿದವರು ಯಾರು ಎಂದರು.

ಹಿಜಾಬ್ ಅವರ ಧರ್ಮದ ಪ್ರಕಾರ ನಡೆದುಕೊಳ್ಳುತ್ತಿದ್ದಾರೆ. ಅವರ ಕುರಾನ್ ನ ಸಂಪ್ರದಾಯಯಂತೆ ಧರಿಸುತ್ತಿದ್ದಾರೆ. ಹಿಜಾಬ್ ಧರಿಸಿದರೆ ಏನು ತೊಂದರೆ, ಕಾಲೇಜಿನ ಪ್ರಿನ್ಸಿಪಲ್ ಅವರನ್ನ ಹೊರಗಡೆ ಹಾಕಿಸಿದ್ದಾರೆ. ಅವರನ್ನ ಕೂಡಲೇ ಅಮಾನತು ಮಾಡಬೇಕಿತ್ತು. ಮಕ್ಕಳಲ್ಲಿ ಧರ್ಮ, ಜಾತಿ ತುಂಬಿ, ಹಾಳು ಮಾಡುತ್ತಿರುವುದು ಬಿಜೆಪಿ, ಆರ್ ಎಸ್ ಎಸ್ ಇದು ದೇಶಕ್ಕೆ ಯಾವ ರೀತಿ ಅಪಾಯ ಆಗುತ್ತೆ ಎಂದು ಊಹಿಸಿಲ್ಲ
ರಾಷ್ಟ್ರ ಧ್ವಜ ಇಳಿಸಿ ಈ ಕೇಸರಿ ಧ್ವಜ ಹಾರಿಸಿದ್ದಾರೆ. ಓರ್ವ ಮಂತ್ರಿ, ಆ ಮಂತ್ರಿ ನಾಲಾಯಕ್ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸ್ತೀನಿ ಅಂತ ಹೇಳಿದ್ದಾರೆ. ಇವರು ಸಾರ್ವಜನಿಕ ವಲಯದಲ್ಲಿ ಇರಲು ಯೋಗ್ಯರಲ್ಲ, ಇದನ್ನ ತೀವ್ರವಾಗಿ ಖಂಡಿಸುತ್ತೇನೆ. ಪ್ರತಿಯೊಬ್ಬರು ಸಂವಿಧಾನ ಓದಬೇಕು ಎಂದರು.

ಮೋದಿ ಹುಟ್ಟಿದ್ದೇ ಸ್ವಾತಂತ್ರ್ಯ ಬಂದ ನಂತರ, ಮೋದಿಗೆ ಇನ್ನೂ75  ವರ್ಷ ಆಗಿಲ್ಲ. ಅವರು ನೆಹರೂ ಕುಟುಂಬದ ಬಗ್ಗೆ ಮಾತನಾಡ್ತಾರೆ. ನೆಹರೂ ಒಂಬತ್ತು ವರ್ಷ ಜೈಲಿನಲ್ಲಿದ್ದರು. ದೇಶಕ್ಕಾಗಿ ಜೈಲಿಗೆ ಹೋದವರು ನೆಹರೂ. ಅಂಥವರ ಬಗ್ಗೆ ಇವರು ಲಘುವಾಗಿ‌ ಮಾತನಾಡ್ತಾರೆ. ಇವರು ಸ್ವಾತಂತ್ರ್ಯ ಕ್ಕಾಗಿ ಬಲಿಯಾಗಿದ್ದಾರಾ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವುದು ಗಾಂಧಿ ನೇತೃತ್ವದ ಕಾಂಗ್ರೆಸ್ ದೇಶ ಇಂದು ಅಭಿವೃದ್ಧಿ ಆಗಿದ್ದರೆ ಅದಕ್ಕೆ ಕಾರಣ ಕಾಂಗ್ರೆಸ್ , ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ, ನಿನ್ನೆ ಮೋದಿ ಎಲ್ಲಾ ಸಂದರ್ಶನದಲ್ಲಿ ಎಲ್ಲೂ ಕೂಡ ದೇಶಕ್ಕಾಗಿ ಏನ್ ಮಾಡಿದ್ದೇವೆ ಎಂದು ಹೇಳಲಿಲ್ಲ. ಅವರು ಕಾಂಗ್ರೆಸ್ ಬಗ್ಗೆ ಹಾಗೂ ನೆಹರೂ ಕುಟುಂಬವನ್ನ ಟೀಕೆ ಮಾಡೋದಷ್ಟೆ ಮಾಡಿದ್ದಾರೆ. ಬರೀ ಸುಳ್ಳು ಹೇಳಿದ್ದಾರೆ ಎಂದರು.

ಎರಡು ಕೋಟಿ ಉದ್ಯೋಗ ಕೊಡ್ತೀವಿ ಅಂತ ಹೇಳಿದ್ದರು, ನೋಟ್ ಬ್ಯಾನ್ ಮಾಡಿದ್ದು, ಕಪ್ಪು ಹಣ ಹೋಗಲಾಡಿಸುವೆ ಎಂದು ಹೇಳಿದ್ದು,ಇವುಗಳ ಬಗ್ಗೆ ಮೋದಿ ಮಾತನಾಡಬೇಕಿತ್ತು ಆದರೆ ಇವುಗಳ ಬಗ್ಗೆ ಚಕಾರ ಎತ್ತಿಲ್ಲ‌. ದೇಶ ವಿನಾಶದ ಕಡೆ ಸಾಗುತ್ತಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ ಇದೇನಾ ಸಬ್ ಕಾ ವಿಕಾಸ್ ಅಂದ್ರೆ. ದೇಶದಲ್ಲಿ ಅತ್ಯಹತ್ಯೆಗಳು ಹೆಚ್ಚಾಗುತ್ತಿವೆ. ಆತ್ಮಹತ್ಯೆ ಹೆಚ್ಚಾಗುತ್ತಿರುವುದು ಯಾಕೆ ಅಂತ ಉತ್ತರ ಕೊಡಬೇಕು ಅಲ್ಲವೇ. ದೇಶದ ಮೇಲೆ ಇಂದು ಸಾಲ ಹೆಚ್ಚಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶ ೫೩ ಲಕ್ಷದ ೧೧ ಸಾವಿರ ಕೋಟಿ ಸಾಲ ಇತ್ತು . ಮೋದಿ ನಂತರ ೧೩೫ ಲಕ್ಷದ ೮೭ ಸಾವಿರ ಕೋಟಿ ಸಾಲ ಇದೆ. ಮೋದಿ ದೇಶವನ್ನ ಹಾಳು ಮಾಡಿಬಿಟ್ಟರು. ನೀವಾಗಿ ನೀವೇ ರಾಜೀನಾಮೇ ಕೊಟ್ಟು ತೊಲಗಬೇಕು‌ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ತೊಲಗಲೇ ಬೇಕು
ಇದನ್ನೆಲ್ಲಾ ಯುವಕರು ಅರ್ಥ ಮಾಡಿಕೊಳ್ಳಬೇಕು. ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಮೋಸ ಮಾಡಿದ್ದಾರೆ. ಸರಿಯಾಗಿ ಯಾರಿಗೂ ಪರಿಹಾರ ನೀಡಿಲ್ಲ. ರೈತರ ವಿರುದ್ಧದ ಮೂರು ಕಾಯ್ದೆಗಳನ್ನ ತಂದರು. ಒಂದು ವರ್ಷ ರೈತರು ಹೋರಾಟ ಮಾಡಿದ್ರು ವಾಪಾಸ್ ಪಡೆಯಲಿಲ್ಲ.ಐದು ರಾಜ್ಯಗಳ ಚುನಾವಣೆ ಕಾರಣಕ್ಕೆ ಕಾಯ್ದೆಗಳನ್ನ ವಾಪಾಸ್ ಪಡೆದರು ಎಂದು ಕಿಡಿ ಕಾರಿದರು.

ಚುನಾವಣೆ ಸನಿಹದಲ್ಲಿದ್ದಾಗ ಹಿಜಾಬ್ ವಿಚಾರ ಎತ್ತಿದ್ದಾರೆ. ಯುವಕ, ಯುವತಿಯರ ಮಧ್ಯೆ ವಿಷ ಬೀಜ ಬಿತ್ತಿದ್ದಾರೆ. ಪ್ರಕರಣ ಕೋರ್ಟ್ ನಲ್ಲಿದೆ, ಹೆಚ್ಚಾಗಿ ಮಾತನಾಡುವುದಿಲ್ಲ.ಗುತ್ತಿಗೆದಾರರು ಮೋದಿಗೆ ಪತ್ರ ಬರೆಯುತ್ತಾರೆ. ೪೦% ಕಮೀಷನ್ ವಿಚಾರವಾಗಿ ಪತ್ರ ಬರೆಯುತ್ತಾರೆ. ಪತ್ರ ಬರೆದು ಆರು ತಿಂಗಳಾಗಿದೆ ಆದ್ರೆ ಇಲ್ಲಿಯವರೆಗೆ ಉತ್ತರ ಇಲ್ಲ‌. ನಾವು ತಿನ್ನಲ್ಲ, ತಿನ್ನೋರ್ನಾ ಬಿಡಲ್ಲ ಅಂತಾರೆ, ಬರೀ ಸುಳ್ಳು ಜಾತಿಯತೆ ಅನ್ನೋದು ಭ್ರಷ್ಟಾಚಾರಕ್ಕಿಂತ ಹೆಚ್ಚು ಅಪಾಯಕಾರಿ ಎಂದರು.

ಟಾಪ್ ನ್ಯೂಸ್

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.