ಮಂಗಳೂರಿನಲ್ಲಿ ನಮ್ಮ ಶಕ್ತಿ ಕಡಿಮೆ, ಅಲ್ಲಿಂದಲೇ ಪಕ್ಷ ಸಂಘಟನೆ: ಹೆಚ್ .ಡಿ.ದೇವೇಗೌಡ
ಹಿಜಾಬ್ ವಿವಾದ : ನ್ಯಾಯಾಲಯ ತೀರ್ಪು ಕೊಟ್ಟರೆ ಮತ್ತೆ ನಾವು ಪ್ರಶ್ನೆ ಮಾಡಬಾರದು
Team Udayavani, Feb 14, 2022, 4:30 PM IST
ಬೆಂಗಳೂರು: ಮಂಗಳೂರಿನಲ್ಲಿ ಜೆಡಿಎಸ್ ಶಕ್ತಿ ಕಡಿಮೆ ಇದೆ , ಅಲ್ಲಿಂದಲೇ ಪಕ್ಷ ಸಂಘಟನೆ ಮಾಡಲಾಗುತ್ತದೆ ಎಂದು ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸೋಮವಾರ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚರತ್ನ, ಜಲಧಾರೆ ಕಾರ್ಯಕ್ರಮ ಮಾಡ್ತಿದ್ದೇವೆ. ತಿಂಗಳಲ್ಲಿ ಕನಿಷ್ಟ ಎರಡು ಜಿಲ್ಲೆಗಳಲ್ಲಿ ಪ್ರವಾಸ ಮಾಡಲು ತೀರ್ಮಾನ ಮಾಡಿದ್ದೇವೆ , ಅನೇಕ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಇದೆ , ಆದರೆ ಕಾರ್ಯೋನ್ಮುಖರಾಗಿ ಕೆಲಸ ಮಾಡುವಲ್ಲಿ ಹಿಂದೆ ಬಿದ್ದಿದಾರೆ ಎಂದರು.
ಮಂಗಳೂರು ನಲ್ಲಿ ಫಾರುಕ್ ಕೆಲಸ ಮಾಡುತ್ತಿದ್ದಾರೆ. ನಾನು ಮಂಗಳೂರಿಗೆ ಹೋದ ಮೇಲೆ ಕನಿಷ್ಠ ನೂರಾರು ಜನ ಕಾರ್ಯಕರ್ತರು ಲವಲವಿಕೆಯಿಂದ ಸೇರಿದ್ದರು.ಕೇವಲ 123 ಅಂತಾ ಬೋರ್ಡ್ ಹಾಕಿಕೊಂಡರೆ ಆಗಲ್ಲ.ಕೆಲಸ ಮಾಡಬೇಕು. ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರ ಸಭೆಗಳನ್ನು ಮಾಡ್ತಿದಾರೆ. ಜಲಧಾರೆ ಕಾರ್ಯಕ್ರಮ ಮಾಡ್ತಿದಾರೆ ಎಂದರು.
ಹಾಸನದಲ್ಲಿ ಕಾರ್ಯಕ್ರಮ ಮಾಡಿದಾಗ ಶಿವಲಿಂಗೇ ಗೌಡ ಬಂದಿರಲಿಲ್ಲ ಎ. ಟಿ. ರಾಮಸ್ವಾಮಿ ಕೂಡಾ ಕಾರ್ಯನಿಮಿತ್ತ ಕಾರ್ಯಕ್ರಮಕ್ಕೆ ಬಂದಿರಲಿಲ್ಲ ರಾಮಸ್ವಾಮಿ ಪಕ್ಷದಲ್ಲಿ ಇರಲು ಆಗಲ್ಲ ಅಂದ್ರೆ ಹೋಗಬಹುದು ಎಂದಿದ್ದೇನೆ ಎಂದು ಪತ್ರಿಕೆ ಯೊಂದರಲ್ಲಿ ಬಂದಿದೆ.ಅದ್ಯಾಕೆ ಈ ರೀತಿ ಬರೆದರೋ ಗೊತ್ತಿಲ್ಲ ಎಂದರು.
ಪಕ್ಷ ಬಿಟ್ಟು ಹೋಗಲು ಮನಸು ಮಾಡಿರುವವರಿಗೆ ಈಗಲೂ ಮನವಿ ಮಾಡ್ತೀನಿ ಐಕ್ಯತೆ ಯಿಂದ ಕೆಲಸ ಮಾಡೋಣ ಬನ್ನಿ. ಈಗಲೂ ಕಾಲ ಮಿಂಚಿಲ್ಲ ಜೆಡಿಎಸ್ ಪಕ್ಷ ತೊರೆಯುವ ಚಿಂತನೆಯಲ್ಲಿ ಇದ್ದವರಿಗೆ ಮನವಿ ಮಾಡುತ್ತೇನೆ ಎಂದರು.
ಸಿಎಂ ಇಬ್ರಾಹಿಂ ಪಕ್ಷ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಈಗ ಒಬ್ಬರು ರಾಜ್ಯಾಧ್ಯಕ್ಷ ರಾಗಿ ಇದ್ದಾರೆ. ಅವರು ಆರು ಸಲ ಗೆದ್ದವರು. ಅವರನ್ನು ನಾಳೆ ಬೆಳಿಗ್ಗೆಯೇ ಅಧಿಕಾರದಿಂದ ಇಳಿಸಲು ಆಗುತ್ತಾ? ಸಿಎಂ ಇಬ್ರಾಹಿಂ ಅವರಿಗೆ ಇಷ್ಟೇ ಹೇಳಿದ್ದೇವೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ವೇಳೆ ನಿಮ್ಮನ್ನು ಗಣನೆಗೆ ತೆಗೆದುಕೊಳ್ತೀವಿ ಅಂತಾ ಭರವಸೆ ಕೊಟ್ಟಿದ್ದೇವೆ ಎಂದರು.
ಕುಮಾರಸ್ವಾಮಿ ಅವರು ಯಾಕೆ ಚಾಮುಂಡೇಶ್ವರಿ ಯಿಂದ ಸ್ಪರ್ಧೆ ಮಾಡಬೇಕು. ರಾಮನಗರ, ಚನ್ನಪಟ್ಟಣ ಬಿಟ್ಟು ಬೇರೆ ಕಡೆ ಯಾಕೆ ಹೋಗಬೇಕು ಹೇಳಿ. ಕುಮಾರಸ್ವಾಮಿ ಎಲ್ಲಿ ಸ್ಪರ್ಧೆ ಮಾಡಬೇಕು ಅನ್ನುವುದಕ್ಕೆ ದೈವದ ಆಟ ನಿರ್ಧಾರ ಮಾಡುತ್ತದೆ. ಚನ್ನಪಟ್ಟಣ ದಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದಾರೆ. ಅಲ್ಲಿಂದಲೇ ಸಿಎಂ ಕೂಡಾ ಆಗಿದ್ದಾರೆ. ಹಾಗಾಗಿ ಮತ್ತೆ ಅಲ್ಲಿಂದಲೇ ಸ್ಪರ್ಧೆ ಮಾಡಲಿ ಅನ್ನುವುದೂ ನನ್ನ ಅಭಿಪ್ರಾಯ ಎಂದರು.
ನಿಖಿಲ್ ಈಗ ಸಿನಿಮಾ ಜಗತ್ತಿನಲ್ಲಿ ಇದ್ದಾರೆ. ಯುವ ಜನತಾದಳದ ಅಧ್ಯಕ್ಷ ಆಗಿದ್ದಾರೆ. ಸಿನಿಮಾ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ. ಅಂತಿಮವಾಗಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೋ, ಅಥವಾ ಸಿನಿಮಾ ದಲ್ಲಿ ಮುಂದುವರೆಯಬೇಕೋ ಎಂಬ ವಿಚಾರ ಕುಮಾರಸ್ವಾಮಿ ತೀರ್ಮಾನ ಮಾಡಲಿದ್ದಾರೆ ಎಂದರು.
ರಾಜ್ಯದಲ್ಲಿ ಹಿಜಾಬ್ ವಿಚಾರದಲ್ಲಿ ಸಂಘರ್ಷ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಚಾರ ಆರಂಭ ಆಗ್ತಾ ಇದ್ದ ಹಾಗೇ ಅದನ್ನು ಚಿವುಟಿ ಹಾಕುವ ಕೆಲಸ ಮಾಡಬೇಕಿತ್ತು. ಅದನ್ನು ಎರಡೂ ರಾಷ್ಟ್ರೀಯ ಪಕ್ಷಗಳೂ ಮಾಡಬೇಕಿತ್ತು.ಕೋರ್ಟ್ ಏನು ತೀರ್ಪು ಕೊಡುತ್ತೋ ಅದನ್ನು ಒಪ್ಪಬೇಕು. ಹೈಕೋರ್ಟ್ ನಲ್ಲಿ ಏನೂ ತೀರ್ಮಾನವಾಗುತ್ತದೆ ಆ ಬಗ್ಗೆ ನಾನೇನೂ ಮಾತನಾಡುವುದಿಲ್ಲ ಒಂದು ಬಾರಿ ನ್ಯಾಯಾಲಯ ತೀರ್ಪು ಕೊಟ್ಟರೆ ಮತ್ತೆ ನಾವು ಪ್ರಶ್ನೆ ಮಾಡಬಾರದು ಎಂದು ಮಾಜಿ ಪ್ರಧಾನ ಮಂತ್ರಿ ಅಭಿಪ್ರಾಯ ಪಟ್ಟರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.