ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಾರ್ವಜನಿಕರೊಂದಿಗೆ ಬೆರೆತ ವ್ಯಕ್ತಿಯ ವಿರುದ್ಧ ಪ್ರಕರಣ
Team Udayavani, Jul 14, 2020, 10:53 PM IST
ಬಂಟ್ವಾಳ : ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡಿದ ಹಿನ್ನೆಲೆಯಲ್ಲಿ ವ್ಯಕ್ತಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಕಾಣೆಮಾರ್ ನಿವಾಸಿಯೊಬ್ಬರನ್ನು ಜುಲೈ 9ರಿಂದ ಜುಲೈ 23ರ ವರೆಗೆ ಹೋಮ್ ಕಾರಂಟೈನ್ ನಲ್ಲಿ ಇರುವಂತೆ ತುಂಬೆ ಗ್ರಾಮ ಪಂಚಾಯತ್ ನೋಟೀಸ್ ಜಾರಿ ಮಾಡಿತ್ತು ಅದರಂತೆ ಬಂಟ್ವಾಳ ಠಾಣಾ ಸಿಬ್ಬಂದಿ ಇಂದು ಪರಿಶೀಲನೆಗಾಗಿ ವ್ಯಕ್ತಿಯ ಮನೆಗೆ ಭೇಟಿ ನೀಡಿದ ಸಂದರ್ಭ ವ್ಯಕ್ತಿ ಮನೆಯಲ್ಲಿ ಇರಲಿಲ್ಲ, ಈ ಕುರಿತು ಮನೆಯವರಲ್ಲಿ ವಿಚಾರಿಸಿದಾಗ ವ್ಯಕ್ತಿ ನಿಯಮ ಉಲ್ಲಂಘಿಸಿ ಹೊರಹೋಗಿದ್ದು ಸಾರ್ವಜನಿಕರ ಜೊತೆ ಬೆರೆತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ನಿಯಮ ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕಲಂ : 269,270, 271 ಐಪಿಸಿ ಮತ್ತು ಕಲಂ 5(1) ಕರ್ನಾಟಕ ಎಪಿಡೆಮಿಕ್ ಡಿಸೀಸ್ ಆರ್ಡಿನೆನ್ಸ್ ಕಾಯ್ದೆ 2020 ಯಂತೆ ಪ್ರಕರಣ ದಾಖಲಾಗಿರುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.