ಚೇತರಿಕೆಯ ಆಶಾಭಾವ; 24 ಗಂಟೆಗಳಲ್ಲಿ ಸೋಂಕಿತರಿಗಿಂತ ಗುಣಮುಖರೇ ಹೆಚ್ಚು
Team Udayavani, Jun 11, 2020, 6:10 AM IST
ಹೊಸದಿಲ್ಲಿ: ದೇಶದಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಬುಧವಾರ ಬೆಳಗ್ಗೆ 8ರ ಅವಧಿಯಲ್ಲಿ ಕೋವಿಡ್-19 ಸೋಂಕು ಪೀಡಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದ್ದು, ಆಶಾಕಿರಣ ಮೂಡಿದಂತಾಗಿದೆ. ಗುಣಮುಖರಾದವರ ಸಂಖ್ಯೆ ಅಧಿಕವಾಗಿದ್ದು ಇದೇ ಮೊದಲು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಮಂಗಳವಾರ – ಬುಧವಾರದ 24 ಗಂಟೆಗಳ ಅವಧಿಯಲ್ಲಿ ಭಾರತ ದಲ್ಲಿ ಒಟ್ಟು 9,985 ಸೋಂಕು ಪೀಡಿತರು ದಾಖಲಾಗಿದ್ದರು. ಅಲ್ಲಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,33,632ಕ್ಕೇರಿದರೆ, ಗುಣಮುಖರಾದ ವರ ಸಂಖ್ಯೆ 1,35,206ಕ್ಕೆ ಬಂದು ನಿಂತಿತು. ಇದರಿಂದ ಗುಣಮುಖ ರಾದವರ ಪ್ರಮಾಣ ಶೇ. 48.99ಕ್ಕೇರಿತು.
ಈ ಕುರಿತು ದಿಲ್ಲಿಯ ಸಫರ್‌ಜಂಗ್ ಆಸ್ಪತ್ರೆಯ ವೈದ್ಯ ಡಾ| ನೀರಜ್‌ಗುಪ್ತಾ ವಿವರಣೆ ನೀಡಿ, “ದೇಶದಲ್ಲಿ ಕೋವಿಡ್-19ದಿಂದ ಗುಣಮುಖರಾ ಗುವವರ ಸಂಖ್ಯೆ ಗಣನೀಯ ಹೆಚ್ಚಿದೆ.
ಶೇ. 80 ರೋಗ ಲಕ್ಷಣಗಳಿರುವವರು ಶೇ. 100ರಷ್ಟು ಗುಣ ಮುಖ ರಾಗುತ್ತಿದ್ದಾರೆ. ಇದರಿಂದ ಸೋಂಕು ತಗಲಿದರೆ ಸಾಕು ಸಾವು ಖಚಿತ ಎಂಬ ಭೀತಿ ಕ್ರಮೇಣ ಜನರಿಂದ ದೂರವಾ ಗಲಿದೆ’ ಎಂದರು.
ಆದರೆ ಕೋವಿಡ್-19ದಿಂದ ಗುಣಮುಖರಾಗುತ್ತೇವೆ ಎಂಬ ಭಾವನೆಯಿಂದ ಜನತೆ ಸೋಂಕಿಗೆ ಒಡ್ಡಿಕೊಳ್ಳುವಂತೆ ಎಚ್ಚರ ತಪ್ಪಿ ನಡೆಯಬಾರದು ಎಂಬ ಕಿವಿಮಾತನ್ನೂ ಹೇಳಿದರು.
“ವಿಶ್ವ ಮಟ್ಟದಲ್ಲಿಯೂ ಶೇ. 80 ಕೋವಿಡ್-19 ರೋಗಿಗಳಲ್ಲಿ ಸೌಮ್ಯ ಗುಣಲಕ್ಷಣಗಳು ಕಾಣಿಸಿಕೊಂಡಿದೆ. ಉಳಿದ ಶೇ. 20 ಮಂದಿಯಲ್ಲಿ ಮಾತ್ರ ಕೋವಿಡ್-19 ಗಾಢವಾಗಿದ್ದು ಅಂಥವರನ್ನು ಆಸ್ಪತ್ರೆಗೆ ಸೇರಿಸುವುದು ಅನಿವಾರ್ಯ ಎಂದೆನಿಸಿದೆ. ಹಾಗೆ ಆಸ್ಪತ್ರೆ ಸೇರುವವರಲ್ಲಿ ಶೇ. 5ರಷ್ಟು ಜನರಿಗೆ ಮಾತ್ರ ವೆಂಟಿಲೇಟರ್ ಆವಶ್ಯಕವಾಗಿರುತ್ತದೆ’ ಎಂದರು.
2.76 ಲಕ್ಷ ದಾಟಿದ ಪ್ರಕರಣ
ಮಂಗಳವಾರ ಬೆಳಗ್ಗೆ 8ರಿಂದ ಬುಧವಾರ ಬೆಳಗ್ಗೆ 8 ಗಂಟೆಯೊಳಗೆ ದೇಶದಲ್ಲಿ 9,500ಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2,76,583 ಲಕ್ಷಕ್ಕೇರಿತು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಅದೇಅವಧಿಯಲ್ಲಿ ಸಾವಿಗೀಡಾದ ವರ ಸಂಖ್ಯೆ 279. ಸೋಂಕು ಖಚಿತವಾದವರಲ್ಲಿ ವಿದೇಶಿಗರೂ ಇದ್ದಾರೆ.
ವುಹಾನ್‌ಗೆ ಸಡ್ಡು
ಚೀನದ ವುಹಾನ್‌ನಲ್ಲಿ ಇದುವರೆಗೆ ದಾಖಲಾದ ಸೋಂಕಿತರ ಸಂಖ್ಯೆ 50,340. ಕೋವಿಡ್-19 ಜನ್ಮಭೂಮಿಯ ಈ ಸಂಖ್ಯೆಯನ್ನು ಮುಂಬಯಿ ಬುಧವಾರ ಹಿಂದಿಕ್ಕಿದೆ. ಪ್ರಸ್ತುತ ಮಹಾನಗರದಲ್ಲಿ 26 ಸಾವಿರ ಸಕ್ರಿಯ ಪ್ರಕರಣಗಳಿವೆ.
ಧಾರಾವಿ ಹೊಡೆತ
ಏಷ್ಯಾದ ಅತಿದೊಡ್ಡ ಕೊಳೆಗೇರಿ ಧಾರಾವಿಯಲ್ಲಿ ಸೋಂಕಿತರನ್ನು ನಿಯಂತ್ರಿಸುವುದೇ ಮುಂಬಯಿ ಮಹಾನಗರ ಪಾಲಿಕೆಗೆ ದೊಡ್ಡ ತಲೆನೋವಾಗಿದೆ.
ರಾಜ್ಯದಲ್ಲೂ ಚೇತರಿಕೆ ಹೆಚ್ಚು
ಬೆಂಗಳೂರು: ರಾಜ್ಯದಲ್ಲೂ ಬುಧವಾರ ಸೋಂಕಿಗಿಂತ ಚೇತರಿಕೆ ಪ್ರಕರಣ ದುಪ್ಪಟ್ಟು ವರದಿಯಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6 ಸಾವಿರ ದಾಟಿದೆ. ಧಾರವಾಡದಲ್ಲಿ ಒಬ್ಬ, ಬೆಂಗಳೂರಿ ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬುಧವಾರ 120 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದ್ದು, 257 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.