Karnataka: 28ರ ಪಟ್ಟಿ 8ಕ್ಕೆ ಇಳಿದಿದ್ದು ಹೇಗೆ?

ದಿಲ್ಲಿಯಲ್ಲಿ ಮಧ್ಯರಾತ್ರಿ ಪ್ರಹಸನ  20 ಮಂದಿ ಹೆಸರು ಮುಂದಕ್ಕೆ

Team Udayavani, May 21, 2023, 7:13 AM IST

SIDDU DK SHI

ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಮೊದಲ ಹಂತದಲ್ಲೇ 28 ಮಂದಿ ಸೇರ್ಪಡೆ ನಿರೀಕ್ಷೆಯಿತ್ತಾದರೂ ಮಧ್ಯ­ರಾತ್ರಿ ನಡೆದ “ಪ್ರಹಸನದಲ್ಲಿ’ ಎಂಟಕ್ಕೆ ಇಳಿದಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ ಸಂಪುಟಕ್ಕೆ ಯಾರು ಸೇರ್ಪಡೆಯಾಗಬೇಕು, ಯಾರಾಗ­ಬಾರದು ಎಂಬ ವಿಚಾರದಲ್ಲಿ ನಡೆದ ಜಟಾಪಟಿಯಿಂದ ಇಪ್ಪತ್ತು ಮಂದಿ ಔಟ್‌ ಆದರು ಎಂದು ಮೂಲಗಳು ತಿಳಿಸಿವೆ.

ಸಂಪುಟಕ್ಕೆ ಸೇರ್ಪಡೆ ಸಂಬಂಧ ಸಿದ್ದರಾಮಯ್ಯ ಒಂದು ಪಟ್ಟಿ, ಡಿ.ಕೆ.ಶಿವಕುಮಾರ್‌ ಒಂದು ಪಟ್ಟಿ, ಇದರ ನಡುವೆ ಮಲ್ಲಿಕಾರ್ಜುನ ಖರ್ಗೆ, ಸುಜೇì­ವಾಲಾ- ಕೆ.ಸಿ.ವೇಣು­ಗೋಪಾಲ್‌ ಅವರ ಬಳಿ ಮತ್ತೂಂದು ಪಟ್ಟಿ ರೆಡಿ ಇತ್ತು. ಆದರೆ ಸಹಮತ ಮೂಡದ ಕಾರಣ ಮೂರೂ ಪಟ್ಟಿಯಲ್ಲಿದ್ದ ಎಂಟು ಮಂದಿ ಸೇರ್ಪಡೆಗೆ ಗ್ರೀನ್‌ ಸಿಗ್ನಲ್‌ ದೊರೆಯಿತು ಎಂದು ತಿಳಿದು ಬಂದಿದೆ.

ಮೊದಲ ಪಟ್ಟಿಯಲ್ಲೇ ಸೇರ್ಪಡೆ ಆಸೆ ಹೊಂದಿದ್ದ ಆರ್‌.ವಿ.ದೇಶಪಾಂಡೆ, ಎಚ್‌.ಕೆ.ಪಾಟೀಲ್‌, ಟಿ.ಬಿ.ಜಯಚಂದ್ರ, ಲಕ್ಷ್ಮಣ ಸವದಿ, ಎಚ್‌.ಸಿ.ಮಹದೇವಪ್ಪ, ಯು.ಟಿ.ಖಾದರ್‌, ಲಕ್ಷ್ಮೀ ಹೆಬ್ಟಾಳ್ಕರ್‌, ಕೃಷ್ಣ ಬೈರೇಗೌಡ, ಚೆಲುವರಾಯಸ್ವಾಮಿ, ಶಿವಲಿಂಗೇಗೌಡ , ಮಧು ಬಂಗಾರಪ್ಪ, ಬಸವರಾಯ ರಾಯರೆಡ್ಡಿ ಸೇರಿ ಹಲವರಿಗೆ ಇದೀಗ ನಿರಾಸೆಯಾಗು­ವಂತಾಗಿದೆ. ಜತೆಗೆ ಕೆಲವು ಹಿರಿಯರು ಬೇಸರವನ್ನೂ ಆಪ್ತರ ಮುಂದೆ ಹೊರಹಾಕಿ­ದ್ದಾರೆ ಎಂದು ತಿಳಿದು ಬಂದಿದೆ.

ಇವೆಲ್ಲದರ ನಡುವೆ ವಿಧಾನಷರಿಷತ್‌ ವಿಪಕ್ಷ ನಾಯಕರಾಗಿದ್ದ ಬಿ.ಕೆ.ಹರಿಪ್ರಸಾದ್‌ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಪರಿಷತ್‌ನಿಂದ ಬಿ.ಕೆ.ಹರಿಪ್ರಸಾದ್‌, ಸಲೀಂ ಅಹಮದ್‌ ಹೆಸರು ಸೇರ್ಪಡೆಯ ನಿರೀಕ್ಷೆಯಿತ್ತು ಎನ್ನಲಾಗಿದೆ.

ಸಂಪುಟ ರಚನೆಗೆ ಸಂಬಂಧಿಸಿದಂತೆ ರಾತ್ರಿ 11 ಗಂಟೆವರೆಗೂ 28 ಮಂದಿ ಸೇರ್ಪಡೆಯ ಪಟ್ಟಿ ಸಿದ್ಧವಾಗಿತ್ತು. ಆ ಅನಂತರ ಅದು ಬದಲಾಯಿತು ಎಂದು ಹೇಳಲಾಗಿದೆ.

ಬೋಸರಾಜ್‌ಗೆ ವಿರೋಧ: ಇದರ ಜತೆಗೆ ಯಾವುದೇ ಸದನದ ಸದಸ್ಯರಲ್ಲದ ವಿಧಾನಪರಿಷತ್‌ನ ಮಾಜಿ ಸದಸ್ಯ ಎನ್‌.ಎಸ್‌.ಬೋಸರಾಜ್‌ ಹೆಸರು ಮೊದಲ ಪಟ್ಟಿಯಲ್ಲೇ ಸೇರಲು ಒತ್ತಡ ಇತ್ತಾದರೂ, ಬೇರೆ ರೀತಿಯ ಸಂದೇಶ ಹೋಗಬಹುದು ಎಂದು ಕೈ ಬಿಡಲಾಯಿತು ಎಂದು ಹೇಳಲಾಯಿತು.

ಜಮೀರ್‌ಗೆ ಡಿ.ಕೆ. ವಿರೋಧ: ಜಮೀರ್‌ ಅಹಮದ್‌ ಅವರ ಹೆಸರನ್ನು ಮೊದಲ ಪಟ್ಟಿಯಲ್ಲಿ ಸೇರಿಸಲು ಡಿ.ಕೆ.ಶಿವಕುಮಾರ್‌ ಅವರ ವಿರೋಧವಿತ್ತು ಎನ್ನಲಾಗುತ್ತಿದೆ. ಆದರೆ ಸಿದ್ದರಾಮಯ್ಯ ಅವ ರು ಪಟ್ಟು ಬಿಡದೆ ಸೇರಿಸಿದರು. ಡಿ.ಕೆ.ಶಿವಕುಮಾರ್‌ ಪ್ರಸ್ತಾವಿಸಿದ ಮುಸ್ಲಿಂ ಶಾಸಕರ ಬಗ್ಗೆ ಸಿದ್ದರಾಮಯ್ಯ, ತಮ್ಮ ಕ್ಷೇತ್ರ ಹೊರತು ಪಡಿಸಿ ಇನ್ನೊಂದು ಕ್ಷೇತ್ರದಲ್ಲಿ ಮತ ತರದವರಿಗೆ ಅವಕಾಶ ಕೊಡಲು ಆಗದು. ಸ್ಟಾರ್‌ ಪ್ರಚಾರಕರಾಗಿ 100ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ಪಕ್ಷಕ್ಕೆ ಶಕ್ತಿ ತುಂಬಿದ ಜಮೀರ್‌ ಅಹಮದ್‌ ಬಿಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹಠ ಹಿಡಿದರು ಎಂದು ಮೂಲಗಳು ಹೇಳಿವೆ. ಆಗ ಇದಕ್ಕೆ ರಾಜ್ಯ ಉಸ್ತುವಾರಿ ರಣದೀಪ್‌ ಸುಜೇìವಾಲಾ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಸಹ ಸಮ್ಮತಿಸಿದರು ಎಂದು ಹೇಳಲಾಗಿದೆ.

ಸಾಮಾಜಿಕ ನ್ಯಾಯ
ಶನಿವಾರ ಪ್ರಮಾಣ ವಚನ ಸ್ವೀಕಾರ ಮಾಡಿದ ಹತ್ತು ಮಂದಿಯ ಪೈಕಿ ಒಕ್ಕಲಿಗ, ಲಿಂಗಾಯತ ಹಾಗೂ ಹಿಂದುಳಿದ ವರ್ಗದಿಂದ ಒಬ್ಬಬ್ಬರೇ ಪ್ರತಿನಿಧಿ. ಉಳಿದಂತೆ ಎಸ್‌ಸಿ-ಎಸ್‌ಟಿ ಕೋಟಾದ ಬಲಗೈನ ಇಬ್ಬರು, ಎಡಗೈನ ಒಬ್ಬರು, ಪರಿಶಿಷ್ಟ ಪಂಗಡದ ಒಬ್ಬರಿಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಪಸಂಖ್ಯಾಕ ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಕ್ಕೆ ಒಂದೊಂದು ಸ್ಥಾನ ನೀಡಲಾಗಿದೆ.

ಟಾಪ್ ನ್ಯೂಸ್

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರ ಪೈಕಿ ಓರ್ವ ಮೃತ್ಯು, ಸಹಸವಾರೆ ಗಾಯ

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

12-google-search

Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?

Jaipur: 13 ಮಂದಿಯನ್ನು ಬಲಿ ಪಡೆದ ದುರಂತದಲ್ಲಿ LPG ಟ್ಯಾಂಕರ್ ಚಾಲಕ ಬದುಕುಳಿದಿದ್ದೇ ರೋಚಕ

ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Yearender 2024:ಸುಶೀಲ್‌ ಕುಮಾರ್‌ ಮೋದಿ To ಬಾಬಾ-2024ರಲ್ಲಿ ವಿಧಿವಶರಾದ ರಾಜಕೀಯ ಮುಖಂಡರು

Yearender 2024:ಸುಶೀಲ್‌ ಕುಮಾರ್‌ ಮೋದಿ To ಬಾಬಾ-2024ರಲ್ಲಿ ವಿಧಿವಶರಾದ ರಾಜಕೀಯ ಮುಖಂಡರು

Tollywood: ಸಂಧ್ಯಾ ಥಿಯೇಟರ್‌ ಕಾಲ್ತುಳಿತ ಪ್ರಕರಣ; ಅಲ್ಲು ಅರ್ಜುನ್‌ ಬೌನ್ಸರ್‌ ಬಂಧನ

Tollywood: ಸಂಧ್ಯಾ ಥಿಯೇಟರ್‌ ಕಾಲ್ತುಳಿತ ಪ್ರಕರಣ; ಅಲ್ಲು ಅರ್ಜುನ್‌ ಬೌನ್ಸರ್‌ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ

Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ

Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ

Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ

2-madikeri

Madikeri: ರಾಜ್ಯದಲ್ಲೇ ಮೊಟ್ಟಮೊದಲ ಮೂಳೆ ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ

ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ

Rajendra Babu: ನಟರಿಗೆ ಪ್ಯಾನ್‌ ಇಂಡಿಯಾ ಭೂತ ಹಿಡಿದಿದೆ: ಬಾಬು

Rajendra Babu: ನಟರಿಗೆ ಪ್ಯಾನ್‌ ಇಂಡಿಯಾ ಭೂತ ಹಿಡಿದಿದೆ: ಬಾಬು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರ ಪೈಕಿ ಓರ್ವ ಮೃತ್ಯು, ಸಹಸವಾರೆ ಗಾಯ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

12-google-search

Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.