![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 3, 2023, 5:01 PM IST
ಮುಂಬಯಿ : ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಜೋಡಿ ತಮ್ಮ ಪ್ರಣಯದಿಂದ ಸುದ್ದಿಯಾಗುತ್ತಿದ್ದು ಈಗ ವದಂತಿಗಳು ಅವರ ಮದುವೆಯ ವರದಿಗಳೊಂದಿಗೆ ಇನ್ನಷ್ಟು ಸುದ್ದಿಯಾಗುತ್ತಿದೆ.
ತೀರಾ ಇತ್ತೀಚೆಗೆ ಹೃತಿಕ್ ಮತ್ತು ಸಬಾ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಇಳಿಯುವ ಮೊದಲು ಅವರು ಕಾರಿನಲ್ಲಿ ಸಿಹಿ ಮುತ್ತು ಹಂಚಿಕೊಂಡ ಬಳಿಕ ಸುದ್ದಿಯಾಗಿದ್ದರು. ಈಗ ವೈರಲ್ ಆಗುತ್ತಿರುವ ಟ್ವೀಟ್! ನಲ್ಲಿ ”ಇಬ್ಬರು ನವೆಂಬರ್ 2023 ರಲ್ಲಿ ಮದುವೆಯಾಗಲಿದ್ದಾರೆ!” ಎಂದು ಬರೆಯಲಾಗಿದೆ. ಬಾಲಿವುಡ್ ಕಿ ನ್ಯೂಸ್ ಖಾತೆಯಿಂದ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.
ಹೃತಿಕ್ ಮತ್ತು ಸಬಾ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ತುಂಬಾ ಮುಕ್ತವಾಗಿದ್ದಾರೆ ಮತ್ತು ಆಗಾಗ್ಗೆ ಒಟ್ಟಿಗೆ ತಿರುಗಾಡುವುದನ್ನು ಕಾಣಬಹುದಾಗಿದೆ.ಈ ಹಿಂದೆ ವಿವಾಹದ ಕುರಿತವರದಿಯನ್ನು ಹೃತಿಕ್ ರೋಷನ್ ತಳ್ಳಿಹಾಕಿದ್ದರು.ಇದರಲ್ಲಿ ಯಾವುದೇ ಸತ್ಯವಿಲ್ಲ. ಸಾರ್ವಜನಿಕ ವ್ಯಕ್ತಿಯಾಗಿ, ನಾನು ಕುತೂಹಲದ ಮಸೂರದಲ್ಲಿ ಇರುತ್ತೇನೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದ್ದರು.
ಸದ್ಯ ಹೃತಿಕ್ ಅವರು ಫೈಟರ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹೃತಿಕ್ ಮತ್ತು ದೀಪಿಕಾ ಇತ್ತೀಚೆಗೆ ಕಾಶ್ಮೀರದಲ್ಲಿ ಶೂಟಿಂಗ್ ಮಾಡಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರವು ಅದ್ಧೂರಿಯಾಗಿ ಮೂಡಿಬರಲಿದೆ ಎನ್ನಲಾಗಿದೆ. ಚಿತ್ರವು 2024 ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.ಹೃತಿಕ್ ಅವರು ವಾರ್ 2 ಚಿತ್ರದಲ್ಲಿ ಕೂಡ ನಟಿಸಲಿದ್ದಾರೆ.
ಹೃತಿಕ್ ರೋಷನ್ 2000 ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಖಾಸಗಿ ಸಮಾರಂಭದಲ್ಲಿ ಸುಸೇನ್ ಖಾನ್ ಅವರನ್ನು ವಿವಾಹವಾಗಿದ್ದರು. ಅವರು ಡಿಸೆಂಬರ್ 2013 ರಲ್ಲಿ ದೂರವಾಗಿದ್ದರು.ವಿಚ್ಛೇದನವನ್ನು ನವೆಂಬರ್ 2014 ರಲ್ಲಿ ಅಂತಿಮಗೊಳಿಸಲಾಗಿತ್ತು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.