ಸುಯೆಜ್ ಕಾಲುವೆಯಲ್ಲಿ ಸಿಲುಕಿದ ಬೃಹತ್ ಸರಕು ನೌಕೆ; ಸಂಚಾರ ಸ್ತಬ್ಧ
Team Udayavani, Mar 24, 2021, 8:00 PM IST
ದುಬೈ: ಆಫ್ರಿಕಾ ಭೂಖಂಡವನ್ನು ಸಿನಾಯಿ ಪರ್ಯಾಯದ್ವೀಪದಿಂದ ಪ್ರತ್ಯೇಕಿಸುವಂಥ ಕಿರಿದಾದ ಮಾನವ ನಿರ್ಮಿತ ಕಾಲುವೆಯೊಂದರಲ್ಲಿ ಬೃಹತ್ ಸರಕು ಸಾಗಣೆ ನೌಕೆಯೊಂದು ಸಿಲುಕಿಕೊಂಡಿದ್ದು, ಈಜಿಪ್ಟ್ ಸುಯೆಜ್ ಕಾಲುವೆಯಲ್ಲಿ ಹಡಗುಗಳ ಸಂಚಾರವನ್ನೇ ಸ್ತಬ್ಧಗೊಳಿಸಿದೆ. ಈಗಾಗಲೇ ಕೊರೊನಾ ಸೋಂಕಿನಿಂದಾಗಿ ಅಲ್ಲೋಲಕಲ್ಲೋಲವಾಗಿರುವ ಜಾಗತಿಕ ಶಿಪ್ಪಿಂಗ್ ವ್ಯವಸ್ಥೆಗೆ ಈ ಘಟನೆಯು ಮತ್ತಷ್ಟು ಆಘಾತ ತಂದೊಡ್ಡಿದೆ.
ಪನಾಮಾದಿಂದ ಆಗಮಿಸಿದ ಎಂವಿ ಎವರ್ ಗಿವನ್ ಎಂಬ ಬೃಹತ್ ಸರಕು ನೌಕೆಯು ಏಷ್ಯಾ ಮತ್ತು ಯುರೋಪ್ ನಡುವೆ ವ್ಯಾಪಾರದ ಸರಕುಗಳನ್ನು ಒಯ್ಯುತ್ತಿತ್ತು. ಏಕಾಏಕಿ ನೌಕೆಯು ಕಾಲುವೆಯ ಒಂದು ಬದಿಗೆ ಸರಿದು, ದುರಸ್ತಿಗೀಡಾಗಿದೆ. ಈ ಘಟನೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ.
ಆದರೆ, ನೌಕೆಯು ಕೆಂಪು ಸಮುದ್ರದಿಂದ ಸುಯೆಜ್ ಕಾಲುವೆ ಪ್ರವೇಶಿಸುತ್ತಿದ್ದಂತೆ ಜೋರಾಗಿ ಬೀಸಿದ ಬಿರುಗಾಳಿಯೇ ಘಟನೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ :ಗುಯಾನಾದಿಂದ ಭಾರತಕ್ಕೆ ತೈಲ ಹೊತ್ತ ನೌಕೆಯ ಪಯಣ! ಹೊಸ ತೈಲ ಉತ್ಪಾದಕ ದೇಶದಿಂದ ತೈಲ ಖರೀದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.