ಭಾರತದ ಆಟಿಕೆಗೆ ಭಾರೀ ಬೇಡಿಕೆ: Vocal for Local ಗೆ ಆದ್ಯತೆ ಹಿನ್ನೆಲೆ
Team Udayavani, Apr 13, 2023, 8:17 AM IST
ಹೊಸದಿಲ್ಲಿ: ಅಮೆರಿಕ ಮತ್ತು ಯೂರೋಪ್ನ ಪ್ರಮುಖ ಚಿಲ್ಲರೆ ವ್ಯಾಪಾರಿಗಳು ಭಾರತೀಯ ಆಟಿಕೆ ತಯಾರಿಕರಿಂದ ಉತ್ಪನ್ನಗಳನ್ನು ಖರೀದಿಸಲು ತೀವ್ರ ಆಸಕ್ತಿ ತೋರಿದ್ದಾರೆ. ಬೇಡಿಕೆ ಪೂರೈಸಲು ಅವರು ದೊಡ್ಡ ಪ್ರಮಾಣದಲ್ಲಿ ಭಾರತದಿಂದ ಆಟಿಕೆಗಳ ಆಮದಿಗೆ ಮುಂದಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಟಿಕೆ ಕ್ಷೇತ್ರದಲ್ಲಿ “ವೋಕಲ್ ಫಾರ್ ಲೋಕಲ್”ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆದ್ಯತೆ ನೀಡಿದ ಬಳಿಕ ಭಾರತದ ಆಟಿಕೆ ರಫ್ತು ಪ್ರಮಾಣ ಗಣನೀಯ ವಾಗಿ ಏರಿಕೆಯಾಗಿದೆ. ದೇಶಿಯವಾಗಿ ತಯಾರಿಸುವ ಕರ್ನಾಟಕದ ಚನ್ನಪಟ್ಟಣ ಗೊಂಬೆ ಸಹಿತ ವಿವಿಧ ಆಟಿಕೆಗಳಿಗೆ ಬೇಡಿಕೆ ಹೆಚ್ಚಳವಾಗಿದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು, ಆಟಿಕೆಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಭಾರತದಿಂದ ರಫ್ತು ಹೆಚ್ಚಿಸುವ ನಿಟ್ಟಿನಲ್ಲಿ ಜಾಗತಿಕ ಮಾರಾಟಗಾರರೊಂದಿಗೆ ಭಾರತೀಯ ತಯಾರಕರು ಒಪ್ಪಂದ ಮಾಡಿಕೊಳ್ಳಲು ಸಹಾಯ ಮಾಡುತ್ತಿದೆ.
“40 ಕೋಟಿ ಡಾಲರ್ ಮೌಲ್ಯದ ಆಟಿಕೆ ಉತ್ಪನ್ನಗಳ ಖರೀದಿಗೆ ಅಮೆರಿಕ ಮೂಲದ ದೈತ್ಯ ಮಾರಾಟಗಾರ ಕಂಪೆನಿ ಸಂಪರ್ಕಿಸಿದೆ,” ಎಂದು ಟಾಯ್ಸ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷ ಮನು ಗುಪ್ತ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.