![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Oct 3, 2021, 10:15 PM IST
ದುಬೈ: ಅತ್ಯಂತ ವೇಗದ ಪ್ರಯಾಣ ವ್ಯವಸ್ಥೆಯಾದ “ಹೈಪರ್‌ಲೂಪ್’ ಯುಎಇಗಿಂತಲೂ ಮೊದಲು ಭಾರತ ಅಥವಾ ಸೌದಿ ಅರೇಬಿಯಾದಲ್ಲಿ ಬಳಕೆಗೆ ಬರುವ ಸಾಧ್ಯತೆ ಹೆಚ್ಚಿದೆ. ಹೀಗೆಂದು ಹೈಪರ್‌ಲೂಪ್ ನಿರ್ಮಾಣದಲ್ಲಿ ತೊಡಗಿರುವ ಡಿಪಿ ವರ್ಲ್ಡ್ ಕಂಪನಿಯ ಮುಖ್ಯಸ್ಥರಾದ ಸುಲ್ತಾನ್ ಅಹ್ಮದ್ ಬಿನ್ ಸುಲಾಯೇಂ ಹೇಳಿದ್ದಾರೆ.
ದುಬೈನಲ್ಲಿ ನಡೆಯುತ್ತಿರುವ “ದುಬೈ ಎಕ್ಸ್‌ಪೋ 2020’ರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೈಪರ್‌ಲೂಪ್ ಬರಲು ದಶಕಗಳೇನೂ ಬೇಕಾಗಿಲ್ಲ. ಈ ದಶಕದ ಅಂತ್ಯದೊಳಗೆ ವಿಶ್ವದ ಹಲವು ಭಾಗಗಳಲ್ಲಿ ಇದು ಬಳಕೆಯಲ್ಲಿರಲಿದೆ. ಸೌದಿ ಅರೇಬಿಯಾ ಅಥವಾ ಭಾರತ ಮೊದಲ ಬಳಕೆದಾರರಾಗಲಿದ್ದಾರೆ. ಟ್ರಕ್‌ನಲ್ಲಿ ಚಲಿಸಲು ಬೇಕಾಗುವ ಖರ್ಚಿನಲ್ಲಿ ವಿಮಾನದ ವೇಗದಲ್ಲಿ ನಾಗರಿಕರು ಪ್ರಯಾಣಿಸಬಹುದು ಎಂದು ಅವರು ಹೇಳಿದ್ದಾರೆ.
ಏನಿದು ಹೈಪರ್‌ಲೂಪ್?
ಸೀಲ್ ಆಗಿರುವ ಟ್ಯೂಬ್ ನಿರ್ಮಿಸಿ ಅದರಲ್ಲಿ ಗಾಳಿಯ ಒತ್ತಡವಿಲ್ಲದಂತೆ ಮಾಡಲಾಗುತ್ತದೆ. ಮನುಷ್ಯರನ್ನು ಹೊತ್ತ ಪಾಡ್‌ಗಳು ಅದರಲ್ಲಿ ಅತ್ಯಂತ ವೇಗವಾಗಿ ಚಲಿಸಬಲ್ಲವು. ಇದರಲ್ಲಿ ಮನುಷ್ಯರ ಪ್ರಯಾಣ ಪರೀಕ್ಷೆಯನ್ನು ಡಿಪಿ ವರ್ಲ್ಡ್ ಸಂಸ್ಥೆ ಕಳೆದ ನವೆಂಬರ್‌ನಲ್ಲೇ ಮಾಡಿದೆ.
ದುಬೈ ಎಕ್ಸ್‌ಪೋಗೆ ಮೋದಿ?
ಅ.1ರಂದು ಆರಂಭವಾಗಿರುವ ದುಬೈ ಎಕ್ಸ್‌ಪೋ ಒಟ್ಟು ಆರು ತಿಂಗಳ ಕಾಲ ನಡೆಯಲಿದೆ. ಈ ಎಕ್ಸ್‌ಪೋನಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಆಮಂತ್ರಣ ಕಳುಹಿಸಲಾಗಿದೆ. ಮೋದಿಯವರು ಆಮಂತ್ರಣ ಸ್ವೀಕರಿಸಿ, ದುಬೈಗೆ ತೆರಳಿ, ಉಭಯ ರಾಷ್ಟ್ರಗಳ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಇದನ್ನೂ ಓದಿ :ಉಡುಪಿ ಜಿಲ್ಲೆಯಲ್ಲಿ ಶೇ.80ರಷ್ಟು ಪಡಿತರ ಕಾರ್ಡ್‌ಗಳ ಇ-ಕೆವೈಸಿ ಪೂರ್ಣ
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.