ನಾನು ಸರಕಾರ ನಡೆಸುತ್ತಿರುವ ಟೀಮಿನ ಒಬ್ಬ ಸದಸ್ಯ: ಬಸವರಾಜ್ ಬೊಮ್ಮಾಯಿ
ನಮ್ಮದು ಮಾನವೀಯತೆ ಇರುವ ಸರಕಾರ
Team Udayavani, Jan 28, 2022, 1:21 PM IST
ಬೆಂಗಳೂರು : ದೇವರ ಆಶೀರ್ವಾದ ಇರುವ ನಾಡು ಕನ್ನಡ,ನಾವೆಲ್ಲ ಕನ್ನಡ ನಾಡಿನಲ್ಲಿ ಹುಟ್ಟಿರುವ ಭಾಗ್ಯ. ಇಲ್ಲಿ ನಿಸರ್ಗ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶುಕ್ರವಾರ ಜನ್ಮದಿನದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.
ಸರ್ಕಾರಕ್ಕೆ ಆರು ತಿಂಗಳು ಪೂರ್ಣಗೊಳಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ , ಕರ್ನಾಟಕದ ಮೇಲ್ಭಾಗದಲ್ಲಿ ಹುಟ್ಟುವ ಎಲ್ಲ ನದಿಗಳು ಪೂರ್ವಕ್ಕೆ ಹರಿಯುತ್ತವೆ. ಗಂಗಾಮಾತೆ ನಮ್ಮನ್ನು ಹರಿಸಿದ್ದಾಳೆ. ಇದರ ಪರಿಣಾಮ ನಮ್ಮಲ್ಲಿ 10 ಹವಾಮಾನ ವಲಯಗಳಿವೆ. ಇದರ ಪರಿಣಾಮ ವರ್ಷ ಪೂರ್ತಿ ಆಹಾರ ಉತ್ಪಾದನೆಗೆ ಅವಕಾಶ ಇದೆ. ಹೇರಳವಾದ ಅರಣ್ಯ, ಜಗತ್ರಿನಲ್ಲಿಯೇ ಶ್ರೇಷ್ಠವಾದ ಕಬ್ಬಿಣ ಅದಿರು ಇಲ್ಲಿದೆ. ಈ ನಾಡಿಗೆ ಗಂಗರು, ಕದಂಬರು, ಚಾಲುಕ್ಯರು, ವಿಜಯ ನಗರ ಅರಸರು ಆಳಿ ಹೋಗಿದ್ದಾರೆ. ಆಳುವುದು ಬೇರೆ ಆಡಳಿತ ಬೇರೆ ಎಂದು ಕಲ್ಯಾಣ ಚಾಲುಕ್ಯರು ಶಾಸನಗಳಲ್ಲಿ ಇದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ಚೆನ್ನಮ್ಮ ಸಂಗೊಳ್ಳಿರಾಯಣ್ಣ ರಾಣಿ ಅಬ್ಬಕ್ಕ ಅನೇಕ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ. ನೆಲ ಜಲ ವಿಚಾರದಲ್ಲಿ ಎಲ್ಲ ಪಕ್ಷಗಳೂ ಒಟ್ಟಾಗಿ ಹೋರಾಟ ಮಾಡಿದ್ದೇವೆ. ಇದು ನಮ್ಮ ಪರಂಪರೆ. ಕೈಗಾರಿಕೆಯಲ್ಲಿಯೂ ಕರ್ನಾಟಕ ಹಿಂದೆ ಬಿದ್ದಿಲ್ಲ. ಮಹಾರಾಜರ ಕಾಲದಿಂದಲೂ ಕೇಂದ್ರದ ಉದ್ಯಮಗಳವರೆಗೂ ಕರ್ನಾಟಕದಲ್ಲಿ ಸ್ಥಾಪನೆಯಾಗಿವೆ. ಸಂಶೋಧನಾ ಕೇಂದ್ರಗಳು ರಾಜ್ಯದಲ್ಲಿವೆ.ರಾಜ್ಯ ಸರ್ಕಾರ ಇರುವ ಸಂಪನ್ಮೂಲವನ್ನು ಬಳಸಿಕೊಂಡು ರಾಜ್ಯದ ಅಭಿವೃದ್ದಿಯಾಗುತ್ತದೆ ಎಂದರು.
ನಾನು ಐದು ಜನ ಸಿಎಂಗಳ ಜೊತೆ ಸಮೀಪದಿಂದ ಅಧಿಕಾರ ನೋಡಿದ್ದೇನೆ.ಬರ,ಪ್ರವಾಹ ಬರುತ್ತಿರುತ್ತದೆ. ಕೊರೊನಾ ಎಂಬ ಮಹಾಮಾರಿ ಆರ್ಥಿಕ ಸಂಕಷ್ಟದಿಂದ.ಜಿಜ್ಞಾಸೆಗೆ ದೂಡುತ್ತಿದೆ. ಬಡವರು, ಮಹಿಳೆಯರು, ದಲಿತರು ರೈತರಿಗೆ ಸಹಾಯ ಮಾಡಬೇಕೆಂದು ಮನಸು ತುಡಿಯುತ್ತದೆ. ಆದರೆ, ಆರ್ಥಿಕ ಸಂಕಷ್ಟ ನಮಗೆ ಕಾಡುತ್ತಿದೆ. ಆದರೆ, ಒಂದು ಅರಿವು ಇರುವ ಸರ್ಕಾರ ನಮ್ಮದು ರಾಜ್ಯದ ಜನರ ಕಲ್ಯಾಣಕ್ಕಾಗಿ ನಾವು ಬದ್ದರಾಗಿದ್ದೇವೆ. ಎಲ್ಲ ಸಾಧನೆ ಮಾಡಲು ಸಚಿವರ ಸಹಕಾರ ಕಾರಣ ಎಂದರು.
ನಮ್ಮದು ಮಾನವೀಯತೆ ಇರುವ ಸರ್ಕಾರ. ಪ್ರವಾಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡುವ ಪರಿಹಾರದ ಎರಡು ಪಟ್ಟು ಪರಿಹಾರ ನೀಡಿದ್ದೇವೆ. ಸರ್ಕಾರಕ್ಕೆ ಎಷ್ಟೇ ಕಷ್ಟ ಇದ್ದರೂ ರೈತರನ್ನು ಕೈ ಬಿಡುವುದಿಲ್ಲ ಎಂದು ಈ ಕೆಲಸ ಮಾಡಿದ್ದೇವೆ.ಅಂತಕರಣದ ಇನ್ನೊಂದು ಮುಖ ವೃದ್ಧಾಪ್ಯ ಅಂಗ ವಿಕಲರು, ವಿಧವೆಯರಿಗೆ ಮಾಸಾಶನ ಹೆಚ್ಚಳ ಮಾಡಲಾಗಿದೆ.
ರೈತರಿಗೆ ಎಷ್ಟು ಕೊಟ್ಟರು ಸಾಲದು. ಒಂದು ಕಾಳು ಹಾಕಿ ನೂರಾರು ಕಾಳು ಬೆಳೆಯುವ ವಿಜ್ಞಾನಿ ಅವನು. ರೈತರ ಮಕ್ಕಳು ಕೃಷಿ ಜೊತೆಗೆ ಬೇರೆ ಉದ್ಯೋಗ ಮಾಡಲು ಶಿಕ್ಷಣಕ್ಕೆ ರೈತ ವಿದ್ಯಾನಿಧಿ ಯೋಜನೆ ಇದರಿಂದ 4 ಲಕ್ಷ ವಿದ್ಯಾರ್ಥಿಗಳು ಲಾಭ ಪಡೆಯುತ್ತಿದ್ದಾರೆ. ಕಾರ್ಮಿಕ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗುವುದು. ಜನರನ್ನು ಫಲಾನುಭವಿಗಳನ್ನಾಗಿ ಮಾಡುವ ಬದಲು ಪಾಲುದಾರರನ್ನಾಗಿ ಮಾಡಬೇಕು. ದುಡಿಯುವ ವರ್ಗದವರಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ. ದುಡ್ಡೆ ದೊಡ್ಡಪ್ಪ ಅಲ್ಲ. ದುಡಿಮೆಯೇ ದೊಡ್ಡಪ್ಪ. ಭಾರತದ ಎಫ್ಡಿಐ ಶೇ 45% ರಷ್ಟು ಕರ್ನಾಟಕದಲ್ಲಿದೆ. ಶೇ 50% ಸ್ಟಾರ್ಟ್ ಅಪ್ ಗಳು ಕರ್ನಾಕದಲ್ಲಿವೆ. ಕೃಷಿಯಲ್ಲಿ ಶೇ 1% ರಷ್ಟು ಅಭಿವೃದ್ಧಿ ಮಾಡಿದರೆ ಕೈಗಾರಿಕೆಯಲ್ಲಿ ಶೇ 4% ರಷ್ಟು ಅಭಿವೃದ್ಧಿಯಾಗುತ್ತದೆ. ಇದರಿಂದ ಶೇ 10 % ರಷ್ಟು ಸೇವಾ ವಲಯದಲ್ಲಿ ಅಭಿವೃದ್ದಿಯಾಗಲಿದೆ ಎಂದರು.
ಮುಂದಿನ ದಿನಗಳಲ್ಲಿ ಎಸ್ಸಿ ಎಸ್ಟಿ ಹಾಗೂ ಒಬಿಸಿ ಸಮುದಾಯಗಳಿಗೆ ಆರ್ಥಿಕ ನೆರವು ನೀಡಲಾಗುವುದು..ಬಜೆಟ್ ನಲ್ಲಿ ಎಲ್ಲವನ್ನೂ ವಿವರಿಸಲಾಗುವುದು. ಅಭಿವೃದ್ಧಿಗಾಗಿ 24 000 ಕೋಟಿ ರೂ. ಗಳ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಎನ್ ಇ ಪಿ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ ವ್ಯಾಕ್ಸಿನೇಷನ್ ಶೇ 100 ಸಾಧನೆ ಮಾಡಿರುವ ರಾಜ್ಯ ಕರ್ನಾಟಕ. ವಿ ಆರ್ ದಿ ಲೀಡರ್ಸ್ ಟು ಚೇಂಜ್ ದಿ ನೇಷನ್.
ಸಾಮಾಜಿಕ ನ್ಯಾಯ ಕೇವಲ ರಾಜಕೀಯ ಬಂಡವಾಳವಲ್ಲ. ಸ್ವಾವಲಂಬಿ ಹಾಗೂ ಸ್ಬಾಭಿಮಾನಿಯಾಗಿ ಮಾಡಲಾಗುತ್ತಿದೆ. 371ಜೆ ಮತ್ತು ನಂಜುಂಡಪ್ಪ ವರದಿಗೆ ಮೀಸಲಿಟ್ಟ ಹಣ ಖರ್ಚಾಗಿಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮೀಸಲಿಟ್ಟ ಹಣ ಖರ್ಚು ಮಾಡಿದರೆ ಮುಂದಿನ ಬಜೆಟ್ ನಲ್ಲಿ 3000 ಕೋಟಿ ಹೆಚ್ಚುವರಿಯಾಗಿ ನೀಡಲಾಗುವುದು ಎಂದರು.
ವಸತಿ ಇಲಾಖೆಯಲ್ಲಿ ಬಾಕಿ ಉಳಿದಿದ್ದ ಮನೆ ಹಂಚಿಕೆ ಪ್ರಧಾನಿ 2018 ರಲ್ಲಿ ಪೆಂಡಿಂಗ್ ಇದ್ದ 6.5. ಲಕ್ಷ ಮನೆಗಳನ್ನು ಮಂಜೂರಾತಿ ನೀಡಿದ್ದಾರೆ. ನಮ್ಮದು ನಿರ್ಧಾರ ತೆಗೆದುಕೊಳ್ಳುವ ಸರ್ಕಾರ. ಈ ಸರ್ಕಾರದಿಂದ ಫಲ ಪಡೆದವರು ಹರಸುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆ. ನಮ್ಮ ಸರ್ಕಾರ ಎಲ್ಲವನ್ನು ತಿದ್ದಿಕೊಳ್ಳಲು ಸಿದ್ದರಿದ್ದೇವೆ. ಸಾಮಾನ್ಯ ಜನರು ನಮಗೆ ಸಲಹೆ ಕೊಟ್ಟರೆ ತೆಗೆದುಕೊಳ್ಳುವ ಮನಸ್ಥಿತಿ ನಮ್ಮದು.
ಆರು ತಿಂಗಳಲ್ಲಿ ಸವಾಲುಗಳನ್ನು ಎದುರಿಸುವ ಆತ್ಮಸ್ತೈರ್ಯ ನಮಗಿದೆ. ಜನರು ನಮ್ಮ ಮೇಲೆ ಭರವಸೆ ಇಡಿ ನಿಮ್ಮ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕೆಲಸ ಮಾಡುತ್ತೇವೆ. ಸಮಗ್ರ ಅಭಿವೃದ್ಧಿ ಮಾಡುತ್ತೇವೆ. ಆಡಳಿತ ಫುಟ್ ಬಾಲ್ ಇದ್ದ ಹಾಗೆ. ಬಾಲ್ ನಮ್ಮ ಬಳಿ ಬಂದಾಗ ಪಾಸ್ ಆನ್ ಮಾಡುವ ಕಲೆ ಬೇಕು ಎಂದರು.
ನಮ್ಮ ಟಿಮ್ ಡಿಫೆನ್ಸ್ ಮಾಡುವುದು ಗೊತ್ತು ಅಕ್ರಮಣಕಾರಿ ಆಟವೂ ಗೊತ್ತು. ನಮ್ಮ ಸಂಪುಟದಲ್ಲಿ ಯಾವುದೇ ಏರುಪೆರಿಲ್ಲ. ನಮ್ಮಲ್ಲಿ ಒಗ್ಗಟ್ಟಿದೆ. ಪ್ರಗತಿ ಪರವಾದ ಶಾಸಕರ ಸಮೂಹ ನಮ್ಮ ಜೊತೆಗಿರುವುದು ನನ್ನ ಭಾಗ್ಯ ಎಂದರು.
ಪ್ರಧಾನಿ ಮೋದಿಯವರು ಕನಸು ಬಲಿಷ್ಠ ಕರ್ನಾಟಕ ನಿರ್ಮಾಣ ಮಾಡುವುದಾಗಿದೆ. ಅವರ ಭರವಸೆ ಈಡೇರಲು ದಿನದ 24 ಗಂಟೆ ಕೆಲಸ.ಮಾಡುತ್ತೇವೆ. ಮುಂಬರುವ ಒಂದು ವರ್ಷ ಜನಪರ.ಕೆಲಸ ಮಾಡುವ ಕಾಲ. ನಮ್ಮ ಎಲ್ಲ ಕೆಲಸಗಳ ಹಿಂದೆ ನಮ್ಮ ನಾಯಕರಾದ ಯಡಿಯೂರಪ್ಪ ಇದ್ದಾರೆ. ಅವರು ನಿರಂತರ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಅವರು ಸರ್ಕಾರ ಆರು ತಿಂಗಳ ಅವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಗತಿಯ ಮಾಹಿತಿ ನೀಡುವ ‘ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು’ ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.