ಖ್ಯಾತ ಇತಿಹಾಸಕಾರ, ಪದ್ಮವಿಭೂಷಣ ಬಾಬಾಸಾಹೇಬ್ ಪುರಂದರೆ ಇನ್ನಿಲ್ಲ
ಛತ್ರಪತಿ ಶಿವಾಜಿ ಕಥೆಗಳನ್ನು ಲೋಕಮುಖಕ್ಕೆ ಪರಿಚಯಿಸಿದ ಮೇರು ಬರಹಗಾರ
Team Udayavani, Nov 15, 2021, 11:07 AM IST
ಪುಣೆ : ಖ್ಯಾತ ಇತಿಹಾಸಕಾರ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಬಾಬಾಸಾಹೇಬ್ ಪುರಂದರೆ ಎಂದೇ ಖ್ಯಾತರಾಗಿದ್ದ ಬಲವಂತ ಮೊರೇಶ್ವರ ಪುರಂದರೆ ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಪುಣೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 99 ವರ್ಷ ಪ್ರಾಯಪಾಗಿತ್ತು.
ಅವರಿಗೆ ಒಂದು ವಾರದ ಹಿಂದೆ ನ್ಯುಮೋನಿಯಾ ಇರುವುದು ಪತ್ತೆಯಾಗಿದ್ದು, ಅವರನ್ನು ನಗರದ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಪುರಂದರೆ ಅವರು ಮರಾಠಾ ದೊರೆ ಛತ್ರಪತಿ ಶಿವಾಜಿಯ ಆಳ್ವಿಕೆಯ ಅವಧಿಗೆ ಸಂಬಂಧಿಸಿದ ಕಥೆಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಬರೆದಿದ್ದರು, ನಂತರ ಅವುಗಳನ್ನು ಸಂಕಲಿಸಿ “ತಿನಗ್ಯ” (“ಕಿಡಿಗಳು”) ಎಂಬ ಪುಸ್ತಕದಲ್ಲಿ ಪ್ರಕಟಿಸಲಾಗಿತ್ತು.
ರಾಜಾ ಶಿವ-ಛತ್ರಪತಿ ಮತ್ತು ಕೇಸರಿ ಎಂಬ ಶೀರ್ಷಿಕೆಯ ಪುಸ್ತಕಗಳು ಮತ್ತು ನಾರಾಯಣರಾವ್ ಪೇಶ್ವೆಯವರ ಜೀವನದ ಪುಸ್ತಕವನ್ನು ಬರೆದಿದ್ದರು.
ಅವರ ಕೃತಿಗಳಲ್ಲಿ ಅತ್ಯಂತ ಪ್ರಸಿದ್ಧವಾದ ನಾಟಕ ಶಿವಾಜಿಯ ಕುರಿತಾದ ಜನತಾ ರಾಜ 1985 ರಲ್ಲಿ ಮೊದಲು ಪ್ರದರ್ಶಿಸಲಾಯಿತು. ಅಂದಿನಿಂದ ಈ ನಾಟಕವು ಮಹಾರಾಷ್ಟ್ರ, ಆಗ್ರಾ, ದೆಹಲಿ, ಭೋಪಾಲ್‌ನ 16 ಜಿಲ್ಲೆಗಳಲ್ಲಿ 1000 ಬಾರಿ ಪ್ರದರ್ಶನಗೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ. ಮೂಲತಃ ಮರಾಠಿಯಲ್ಲಿ ಬರೆದ ಈ ಕೃತಿಯನ್ನು ನಂತರ ಹಿಂದಿಗೆ ಅನುವಾದಿಸಲಾಗಿದೆ.
ಪ್ರಧಾನಿ ಸಂತಾಪ
”ನನಗೆ ಹೇಳಲಾಗದಷ್ಟು ನೋವಾಗಿದೆ. ಶಿವಶಾಹಿರ್ ಬಾಬಾಸಾಹೇಬ್ ಪುರಂದರೆಯವರ ನಿಧನವು ಜಗತ್ತಿನ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ದೊಡ್ಡ ಶೂನ್ಯವನ್ನು ಉಂಟುಮಾಡಿದೆ. ಮುಂಬರುವ ಪೀಳಿಗೆಯು ಛತ್ರಪತಿ ಶಿವಾಜಿ ಮಹಾರಾಜರೊಂದಿಗೆ ಮತ್ತಷ್ಟು ಸಂಪರ್ಕ ಹೊಂದಲು ಕಾರಣವಾದ ಅವರಿಗೆ ಧನ್ಯವಾದಗಳು. ಅವರ ಕೃತಿಗಳು ಎಲ್ಲರ ನೆನಪಿನಲ್ಲಿ ಉಳಿಯುತ್ತವೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.