ನನ್ನ ಬಳಿ ಪ್ಲ್ಯಾನ್ ಬಿ ಎಂಬುದೇ ಇರಲಿಲ್ಲ
Team Udayavani, Mar 6, 2021, 6:40 AM IST
ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ನಾನು ಪಾಲ್ಗೊ ಳ್ಳಲು ಆಗಮಿಸಿದಾಗ ನನ್ನ ಬಳಿ ಯಾವುದೇ ಪರ್ಯಾಯ (ಫ್ಲ್ಯಾನ್ ಬಿ ) ಇರಲಿಲ್ಲ. ಅಂತಿಮ ಕ್ಷಣದಲ್ಲಿ ನಾನು ವೇದಿಕೆ ಏರಿದಾಗ, ಆ ದಿನವನ್ನು ನಾನು ಹೇಗೆ ನಿರ್ವಹಿಸುತ್ತೇನೆ ಎಂಬುದರ ಬಗ್ಗೆ ನನಗೆ ಯಾವುದೇ ಸುಳಿವು ಹೊಂದಿರಲಿಲ್ಲ. ಒಂದು ವೇಳೆ ನಾನು ಸೋಲು ಅನುಭವಿಸಿದ್ದರೆ ಬಳಿಕ ಏನು ಮಾಡಬೇಕೆಂಬುದರ ಬಗ್ಗೆ ಅರಿವಿರ ಲಿಲ್ಲ. ಇದೀಗ ನಾನು ಮಿಸ್ ಇಂಡಿಯಾ-2020 ರನ್ನರ್ ಅಪ್ ಸಾಧಿಸಿದ್ದೇನೆ. ನನ್ನ ಜೀವನದ ಪ್ರಯಾಣದ ಮುಂದಿನ ಹೆಜ್ಜೆ ಏನೆಂದು ನನಗೆ ತಿಳಿದಿದೆ. ಅದು ಕಠಿನ ಹಾದಿಯಾಗಿರುತ್ತದೆ. ಆದರೆ ನಾನು ಅದರ ಕಡೆಗೆ ಸಾಗಲು ಶ್ರಮವಹಿಸಿ ಕೆಲಸ ಮಾಡುತ್ತೇನೆ.
ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸಿ: ಕಿರೀಟವು ಜವಾ ಬ್ದಾರಿಯೊಂದಿಗೆ ಲಭಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಹೊಸ ಪ್ರಯತ್ನಕ್ಕೆ ನಾನು ಸನ್ನದ್ಧಾ ಗಿದ್ದೇನೆ. ಅದಕ್ಕಾಗಿ ನಾನು ಸಂಪೂರ್ಣ ಬದ್ಧಳಾ ಗಿರುತ್ತೇನೆ. ನನ್ನ ಶಕ್ತಿಯನ್ನು ಧಾರೆ ಎರೆಯುತ್ತೇನೆ.
ನನ್ನ ಹೃದಯದಿಂದ ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ ಎಂದು ನಾನು ಭಾವಿಸಿದ್ದೇನೆ. ಅಂತಿ ಮವಾಗಿ ಕಿರೀಟವನ್ನು ಮುಡಿಗೇರಿಸಿಕೊಂಡಾಗ, ಹೃದಯ ಕರಗಲು ಒಂದು ಕಾರಣವಿದೆ. ಈ ಕಿರೀ ಟವು ಒಂದು ಹೊಣೆಗಾರಿಕೆಯಾಗಿದೆ. ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವುದು ಏಕೆ ಮುಖ್ಯ ಎಂಬುದರ ಕುರಿತು ನಾನು ತಿಳಿಸಲು ಬಯಸು ತ್ತೇನೆ. ನಾವು ಹೆಣ್ಣು ಮಕ್ಕ ಳನ್ನು ಪ್ರೋತ್ಸಾಹಿಸಿ ಬೆಂಬಲಿಸಿದರೆ ಹುಡುಗಿಯರು ಮುಗಿಲೆತ್ತರದಲ್ಲಿ ಹಾರಾಡುತ್ತಾರೆ.
ಮಿಸ್ ಇಂಡಿಯಾ ಸ್ಪರ್ಧೆಯಂತಹ ವೇದಿಕೆಯು ಚರ್ಮದ ಬಣ್ಣವನ್ನು ಆಧರಿಸಿ ತಾರತಮ್ಯ ಮಾಡುವುದಿಲ್ಲ. ಜಗತ್ತನ್ನು ಎದುರಿಸುವ ವಿಶ್ವಾಸ ಜನರಿಗೆ ಇರಬೇಕು. ಪ್ರಿಯಾಂಕಾ ಚೋಪ್ರಾ ಆಕರ್ಷಕ ಚರ್ಮದವರಲ್ಲ. ಆದರೆ ಅವರು ಗೆದ್ದರು. ಆಕೆಗೆ ಅದನ್ನು ಮಾಡಲು ಸಾಧ್ಯವಾದರೆ, ನಾನು ಏಕೆ ಸಾಧ್ಯವಿಲ್ಲ ಎಂದು ಭಾವಿಸಿದೆ. ಜೀವನದಲ್ಲಿ ಬೇರೆ ಏನನ್ನಾದರೂ ಸಾಧನೆ ಮಾಡಲು ನಿರ್ಧರಿಸಿದರೆ ಇತರ ಹೆಣ್ಣುಮಕ್ಕಳು ಕೂಡ ಅದೇ ರೀತಿ ಭಾವಿಸಬೇಕೆಂದು ನಾನು ಇಚ್ಛಿಸುತ್ತೇನೆ.
ಮೊದಲಿನಿಂದಲೂ, ನಾನು ಬಣ್ಣವನ್ನು ಆಧರಿಸಿ ಪೂರ್ವಯೋಜನೆಗಳೊಂದಿಗೆ ಹೋರಾಡುತ್ತಿದ್ದೇನೆ. ಆಗಾಗ್ಗೆ ಮುಸ್ಸಂಜೆಯ ನೋಟವನ್ನು ಆಧರಿಸಿ ಕಠಿನವಾದ ಕಾಮೆಂಟ್‌ಗಳನ್ನು ಸ್ವೀಕರಿಸುತ್ತಿದ್ದೇನೆ.
ಲಿಂಗ ತಾರತಮ್ಯ ಬೇಡ: ಈ ಗೆಲುವಿನೊಂದಿಗೆ ನಮ್ಮ ಸಮಾಜದಲ್ಲಿ ಇರುವ ಅಂತಹ ಮನಸ್ಥಿತಿ ಗಳು ಮತ್ತು ಪಕ್ಷಪಾತಗಳನ್ನು ತೊಡೆದು ಹಾಕಲು ಬಯಸುತ್ತೇನೆ. ಮಗು ಜನಿಸಿದಾಗಲೆಲ್ಲ ಜನರು ಹೆಣ್ಣಾ, ಗಂಡಾ (ಲಾಡ್ಕಾ ಹೈ ಯಾ ಲಡ್ಕಿ?) ಎಂದು ಪ್ರಶ್ನಿಸುತ್ತಾರೆ. ಅದು ಹೆಣ್ಣಾದ್ದರೆ, ಮುಂದಿನ ಪ್ರಶ್ನೆ, ಬಣ್ಣ ಕಪ್ಪೋ ಅಥವಾ, ಬಿಳಿಯೋ (ಸಾನ್ವಿÉ ಹೈ ಯಾ ಗೋರಿ?) ಎಂದು ಪ್ರಶ್ನಿಸುತ್ತಾರೆ.
ಜನರು ಮಗುವಿನ ಲಿಂಗ ಅಥವಾ ಚರ್ಮದ ಬಣ್ಣವನ್ನು ಪರಿಗಣಿಸಬಾರದು ಎಂದು ನಾನು ಬಯಸುತ್ತೇನೆ. ನಾನು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಚಿಂತಿಸುತ್ತಿದ್ದೇನೆ ಎಂದು ನನ್ನ ಕಾಲೇಜಿನಲ್ಲಿ ಹಂಚಿಕೊಂಡ ವೇಳೆ ಕೆಲವರು, ನೀನು ಮಿಸ್ ಇಂಡಿಯಾಕ್ಕೆ ಹೋಗುತ್ತಿದ್ದೀಯಾ, ನಿನ್ನ ಮುಖವನ್ನು ನೋಡಿಕೊಂಡಿದ್ದೀಯಾ ಎಂಬ ಕಮೆಂಟ್‌ಗಳನ್ನು ನಾನು ಕೇಳಿದೆ. ಇದು ನೋಯಿಸುವುದಿಲ್ಲ ಎಂದು ನಾನು ಹೇಳು ವುದಿಲ್ಲ, ಆದರೆ ನನ್ನನ್ನು ಕೆಳಕ್ಕೆ ಎಳೆಯಲು ನಾನು ಬಿಡಲಿಲ್ಲ. ನಾನು ಅದನ್ನು ಸವಾಲಾಗಿ ತೆಗೆದುಕೊಂಡು ಮುಂದುವರಿದಿದ್ದೇನೆ. ನನ್ನ ಇಚ್ಛಾ ಶಕ್ತಿಯೇ ನನ್ನ ಬ್ರಹ್ಮಾಸ್ತ್ರ. ಹಾಗೆಯೇ ಕಪ್ಪು ವರ್ಣದ ಮಹಿಳೆಯರಿಗೂ ಹೆಚ್ಚು ಮೌಲ್ಯ ಇದೆ ಎಂದೂ ಹೇಳಲು ಈ ಸಮಯದಲ್ಲಿ ನಾನು ಬಯಸುತ್ತೇನೆ.
ಕುಟುಂಬಗಳು ತಮ್ಮ ಹುಡುಗಿಯರನ್ನು ಬೆಂಬಲಿಸಲಿ: ಯಾವುದೇ ಕನಸುಗಳು ಚಿಕ್ಕವು ಅಲ್ಲ, ಹಾಗೆಯೇ ಕನಸುಗಳು ಭಾರೀ ದೊಡ್ಡವೂ ಅಲ್ಲ. ಬ್ಯಾಂಕಿಂಗ್ ವಿಷಯದಲ್ಲಿ ಪದವೀಧರೆಯಾಗಿರುವ ನಾನು ದೊಡ್ಡ ಕನಸು ಕಾಣುವ ಧೈರ್ಯ ಮಾಡಿದೆ. ತನ್ನ ಕನಸುಗಳು ಮತ್ತು ಆಕಾಂಕ್ಷೆಗಳ ಬಗ್ಗೆ ಹೇಳುವುದಾದರೆ, ಮಿಸ್ ಇಂಡಿಯಾ ಆಗುವುದು ನನ್ನ ಬಾಲ್ಯದ ಕನಸು ಆಗಿರಲಿಲ್ಲ. 14 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರೆಗೆ, ಮಿಸ್ ಇಂಡಿಯಾ ಸ್ಪರ್ಧೆ ಏನೆಂಬುದು ತಿಳಿದಿರಲಿಲ್ಲ. ನನ್ನ ಜೀವನದಲ್ಲಿ ವಿಭಿನ್ನವಾದದ್ದನ್ನು ಮಾಡಲು ನಾನು ಬಯಸುತ್ತೇನೆ.
ವೈಯಕ್ತಿಕ ಹಿತಾಸಕ್ತಿಗಾಗಿ ಜೀವನ ನಡೆಸುವುದು ನನಗೆ ಇಷ್ಟವಿಲ್ಲ. ನನ್ನಿಂದಾಗಿ ಸಮಾಜಕ್ಕೆ ಸ್ವಲ್ಪ ಉಪಯೋಗವಾಗಲಿ ಎಂದು ನಾನು ಬಯಸುತ್ತೇನೆ. ನನ್ನ ಬದುಕಲ್ಲಿ ಈವರೆಗೆ ನಡೆದ ಎಲ್ಲ ಘಟನೆಗಳಿಗೂ ಯಾವುದೋ ಒಂದು “ಕಾರಣ’ವಿದೆ ಎಂದೇ ನಾನು ನಂಬುತ್ತೇನೆ. ಉತ್ತಮ ಸಮಾಜದ ನಿರ್ಮಾಣವೇ “ಆ ಕಾರಣ’ವಾಗಿರಬಹುದು. ಮಿಸ್ ಇಂಡಿಯಾ ಸ್ಪರ್ಧೆಯು ನನ್ನಂತೆಯೇ ಉದ್ದೇಶಗಳು ಮತ್ತು ಗುರಿಗಳನ್ನು ಹೊಂದಿರುವ ಮಹಿಳೆಯರಿಗೆ ಒಂದು ವೇದಿಕೆಯನ್ನು ಕಲ್ಪಿಸುತ್ತದೆ ಎಂಬ ವಿಚಾರ ಗೊತ್ತಾದೊಡನೆ, ನಾನು ಮೊದಲು ದೇವರಿಗೆ ಧನ್ಯವಾದ ಹೇಳಿದೆ – ನನ್ನ ಗುರಿಯನ್ನು ಸಾಧಿಸಲು ನನಗೊಂದು ದಿಕ್ಕು ತೋರಿಸಿದ್ದಕ್ಕಾಗಿ…
ಇಂದು, ನನ್ನ ಮುಡಿಗೆ ಈ ಕಿರೀಟ ಏರಿದೆ. ಇದು ನನ್ನೊಂದಿಗಿರುವಾಗ ನಾನು ಏನೇ ಹೇಳಿದರೂ ಜನ ಆಲಿಸುತ್ತಾರೆ. ಅಷ್ಟೇ ಅಲ್ಲ, ನನ್ನ ಮಾತನ್ನು ಅವರು ಸದಾ ನೆನಪಲ್ಲಿ ಇಟ್ಟುಕೊಳ್ಳುತ್ತಾರೆ. ಹೆಣ್ಣು ಮಕ್ಕಳು ಸ್ವಲ್ಪ ಧೈರ್ಯ ತೋರಿಸಿದರಷ್ಟೇ ಸಾಲದು, ಅದಕ್ಕಿಂತಲೂ ಹೆಚ್ಚಾಗಿ ಅವರ ಕುಟುಂಬವು ಅವರೊಂದಿಗೆ ಬೆಂಬಲವಾಗಿ ನಿಲ್ಲಬೇಕು. ಆಗ ಮಾತ್ರ ಅವರು ಹಕ್ಕಿಯಂತೆ ಹಾರಲು ಸಾಧ್ಯ. ಇಲ್ಲದಿದ್ದರೆ ಆ ಹೆಣ್ಣು ಮಕ್ಕಳ ಅಂತರ್ಯದಲ್ಲಿ ಯಾವ ಕನಸುಗಳಿವೆಯೋ, ಆ ಕನಸುಗಳು ಅಲ್ಲೇ ಕಮರಿ ಹೋಗುತ್ತವೆ. ನನ್ನಂತಹ ಪ್ರತಿಯೊಬ್ಬ ಹೆಣ್ಣು ಮಗಳೂ ನನ್ನಂತೆಯೇ ಕನಸು ಕಾಣುವಂತಾಗಬೇಕು ಮತ್ತು “ಮಾನ್ಯಳಿಗೆ ಸಾಧ್ಯ ಆಗುತ್ತದೆಂದಾದರೆ ನನಗೂ ಸಾಧ್ಯ’ ಎಂದು ಹೇಳುವಂತಾಗಬೇಕು. ಇದೇ ನನ್ನ ಆಸೆ.
ಕೆಲವು ವರ್ಷಗಳ ಹಿಂದೆ, ನಮಗೆ ಸ್ವಂತ ಮನೆ ಇತ್ತು. ಅನಿವಾರ್ಯ ಕಾರಣಗಳಿಂದ ಅದನ್ನು ಮಾರಬೇಕಾಯಿತು. ಅನಂತರ ಬಾಡಿಗೆ ಮನೆಯಲ್ಲಿ ನನಗೆ ಹಲವು ಅನುಭವಗಳಾದವು. ಮನೆ ಮಾಲಕರು “ಹೀಲ್ ಚಪ್ಪಲ್ ಹಾಕಿಕೊಂಡು ಓಡಾಡಬೇಡ, ಧ್ವನಿ ಬರುತ್ತದೆ’ ಎಂದು ಹೇಳುತ್ತಿದ್ದರು. ನಾನು ಎಲ್ಲಿಂದ ಬಂದಿದ್ದೇನೆ ಎಂಬ ಬಗ್ಗೆ ಹೆಮ್ಮೆ ಇದೆ, ಅದರ ಹಿಂದೆ ಸಾಕಷ್ಟು ಕಷ್ಟಗಳು, ಕಣ್ಣೀರು ಮತ್ತು ಶ್ರಮವಿದೆ. ಹೆತ್ತವರಿಗೆ ಉತ್ತಮ ಜೀವನ, ಉತ್ತಮ ಮನೆ ಒದಗಿಸುವ ಬಯಕೆ ಇದೆ. ಕಿರೀಟ ಮುಡಿಗೇರಿಸಿಕೊಂಡಿದ್ದು ನನಗೆ ನಿಸ್ಸಂದೇಹವಾಗಿ ಭಾವನಾತ್ಮಕವಾಗಿ ಪ್ರಚೋದಿತ ಕ್ಷಣವಾಗಿದೆ.
ಅಭಿನಂದನೆ ಸಮಾರಂಭಕ್ಕೆ ಕಾಲೇಜಿಗೆ ಆಟೋದಲ್ಲಿ ಬಂದ ಮಾನ್ಯಾ ಸಿಂಗ್
ಮುಂಬಯಿ ಸಮೀಪದ ಥಕೂರು ಹಳ್ಳಿಯ ಆಟೋ ಚಾಲಕರಾಗಿರುವ ಓಂಪ್ರಕಾಶ್ ಸಿಂಗ್ ಅವರ ಪುತ್ರಿ ಮಾನ್ಯಾ ಸಿಂಗ್ ಫೆಮಿನಾ ಮಿಸ್ ಇಂಡಿಯಾ 2020- ರನ್ನರ್ ಅಪ್ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾರೆ. ಇದಕ್ಕಾಗಿ ಮಾನ್ಯಾ ಸಿಂಗ್ ವ್ಯಾಸಂಗ ಮಾಡಿದ್ದ ಮುಂಬಯಿಯ ಕಾಲೇಜಿನಲ್ಲಿ ಅಭಿನಂದನೆ ಸಮಾರಂಭವನ್ನು ಆಯೋಜಿಸಲಾಗಿತ್ತು. ತಮ್ಮ ಮಗಳನ್ನು ಗೌರವಿಸುವ ಸಮಾರಂಭಕ್ಕೆ ತಂದೆ ಓಂಪ್ರಕಾಶ್ ಸಿಂಗ್ ತಮ್ಮ ಆಟೋದೊಂದಿಗೆ ಮಗಳನ್ನು ಕೂರಿಸಿಕೊಂಡು ಕಾಲೇಜು ತಲುಪಿಸಿದ್ದರು. ಡ್ರೈವರ್ ಸೀಟಿನಲ್ಲಿ ತನ್ನ ತಂದೆಯೊಂದಿಗೆ ಮಾನ್ಯಾ ಆಟೋದಲ್ಲಿ ಕುಳಿತ್ತಿದ್ದರೆ, ಅವರ ತಾಯಿ ಮನೋರಮಾ ಅವರ ಪಕ್ಕದಲ್ಲಿ ಕುಳಿತಿದ್ದರು. ಮಾನ್ಯಾ ತಂದೆ ತಮ್ಮ ಆಟೋರಿಕ್ಷಾದಲ್ಲಿ ಓಡಿಸುತ್ತಿರುವುದು ಇದೇ ಮೊದಲಲ್ಲ. ಆದರೆ ಇದೊಂದು ಒಂದು ಸವಾರಿಯಾಗಿದ್ದರೂ ಮಾನ್ಯಾಳ ನೆನಪಿನಲ್ಲಿ ಅಚ್ಚಳಿಯದೇ ಉಳಿದಿದೆ.
– ಮಾನ್ಯಾ ಸಿಂಗ್ , ಮಿಸ್ ಇಂಡಿಯಾ ರನ್ನರ್ ಅಪ್ ಚಾಂಪಿಯನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
ನಾನೂ ಸೀನಿಯರ್ ಲೀಡರ್, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ
Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ
ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.