ಸಂತೋಷ್ ಪಾಟೀಲ್ ಯಾರು ಅಂತ ನನಗೆ ಗೊತ್ತಿಲ್ಲ: ಷಡ್ಯಂತ್ರ ಎಂದ ಈಶ್ವರಪ್ಪ

ಕೆಲಸವೇ ಮಾಡಿಸಿಲ್ಲ ಎಂದ ಮೇಲೆ ಹಣ ಕೊಡುವ ಪ್ರಶ್ನೆಯೇ ಇಲ್ಲ

Team Udayavani, Mar 29, 2022, 11:33 AM IST

eshu 2

ಬೆಂಗಳೂರು: ಸಂತೋಷ್ ಪಾಟೀಲ್ ಯಾರು ಎಂದು ನನಗೆ ಗೊತ್ತಿಲ್ಲ,ಯಾವುದೋ ಒಂದು ಷಡ್ಯಂತ್ರ ನಡೆದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಮಂಗಳವಾರ ಹೇಳಿಕೆ ನೀಡಿದ್ದಾರೆ.

ಸಂತೋಷ್ ಪಾಟೀಲ್ ಎಂಬ ವ್ಯಕ್ತಿ ದೆಹಲಿಗೆ ಹೋಗಿ ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ.ನಮ್ಮ ಕಡೆಯವರು ಯಾರೋ ಕಮಿಷನ್ ಕೇಳಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಅದಕ್ಕೆ ಗಿರಿರಾಜ್ ಸಿಂಗ್ ಕಿಶೋರ್ ಅವರ ಕಚೇರಿಯಿಂದ ನಮ್ಮ ಇಲಾಖೆ ಎಸಿಎಸ್ ಅತೀಕ್ ಅವರಿಂದ ವಿವರ ಕೇಳಿದ್ದರು. ಅವರು ಪಂಚಾಯತ್ ರಾಜ್ ಇಲಾಖೆಯಿಂದ ಸಂತೋಷ್ ಅವರಿಗೆ ಯಾವುದೇ ವರ್ಕ್ ಆರ್ಡರ್ ಮಂಜೂರು ಮಾಡಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸ್ಪಷ್ಟೀಕರಣ ಕಳುಹಿಸಿದ್ದಾರೆ ಎಂದರು.

ಸಂತೋಷ್ ಪಾಟೀಲ್ ಯಾರು ಅಂತಾ ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೂ ಕೇಳಿದೆ, ಅವರಿಗೂ ಗೊತ್ತಿಲ್ಲ. ನಮ್ಮ ಪಕ್ಷದ ನಾಯಕರಿಗೆ, ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ ಅಂತಾ ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್ ಸಂಸದರು ಸುದ್ದಿಗೋಷ್ಠಿ ಮಾಡಿ ಹೇಳಿದ್ದಾರೆ. ನಮ್ಮ ಇಲಾಖೆಯಿಂದ ಯಾವುದೇ ವರ್ಕ್ ಆರ್ಡರ್ ಅವರಿಗೆ ಕೊಟ್ಟಿಲ್ಲ. ಕೆಲಸವೇ ಮಾಡಿಸಿಲ್ಲ ಎಂದ ಮೇಲೆ ಹಣ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಷಡ್ಯಂತ್ರದ ಬಗ್ಗೆ ಈಗಾಗಲೇ ಮಾರ್ಚ್ 10 ರಂದು ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ನಮ್ಮ ವಕೀಲರು ಈಗಾಗಲೇ ವಾದ ಮಾಡಿದ್ದಾರೆ, ನಾಳೆ ಅವರಿಗೆ ನೋಟೀಸ್ ಕೊಡುತ್ತಾರೆ. ಮಾರ್ಚ್ 9 ರಂದು ಈ ವಿಚಾರ ನನ್ನ ಗಮನಕ್ಕೆ ಬಂದಿತ್ತು. ಸಂತೋಷ್ ನಮ್ಮ ಪಕ್ಷದ ಕಾರ್ಯಕರ್ತ ಅಲ್ಲ ನಮ್ಮ ಬೆಳಗಾವಿ ಜಿಲ್ಲಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ದೂರಿನಲ್ಲಿ ಸಂತೋಷ್ ಪಾಟೀಲ್ ಮಾಡಿರುವ ಆರೋಪಕ್ಕೂ ನಮ್ಮ ಇಲಾಖೆಗೂ ಸಂಬಂಧವಿಲ್ಲ ಎಂದರು.

ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಷಡ್ಯಂತ್ರದಲ್ಲಿ ಯಾರ್ಯಾರು ಇದ್ದಾರೆ ಅಂತಾ ಇನ್ನೂ ನನಗೆ ಗೊತ್ತಿಲ್ಲ ಎಂದರು.

ಟಿಪ್ಪು ಸುಲ್ತಾನ್ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವರದಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಮಿತಿ ರಾಜ್ಯ ಸರ್ಕಾರಕ್ಕೆ ಏನೇನು ವರದಿ ಕೊಟ್ಟಿದ್ದಾರೆ ಅಂತಾ ನನಗೆ ಇನ್ನೂ ಗೊತ್ತಿಲ್ಲ. ಅದನ್ನು ತಿಳಿದುಕೊಂಡು ನಂತರ ಪ್ರತಿಕ್ರಿಯೆ ಕೊಡುತ್ತೇನೆ ಎಂದರು.

ಟಾಪ್ ನ್ಯೂಸ್

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ

1-manmohan

Belagavi; ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ

ct rav

BJP ದೂರು ಬೆನ್ನಲ್ಲೇ ಗೆಹ್ಲೋಟ್‌ ಅಖಾಡಕ್ಕೆ; ಸಿ.ಟಿ.ರವಿಗೆ ರಾಜ್ಯಪಾಲ ಬುಲಾವ್‌?

1-spo

Mangaluru; ಶೀಘ್ರವೇ ರಾತ್ರಿಯೂ ಪ್ರವಾಸಿಗರಿಗೆ ಬೀಚ್‌ಗೆ ಪ್ರವೇಶ

1-klr

Koteshwara: ಹುತಾತ್ಮ ಯೋಧ ಅನೂಪ್‌ ಪೂಜಾರಿ ಮನೆಗೆ ಖಾದರ್‌, ಸೊರಕೆ ಭೇಟಿ

1-busss

ನಾಡಿದ್ದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-havya

Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ

1-manmohan

Belagavi; ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ

ct rav

BJP ದೂರು ಬೆನ್ನಲ್ಲೇ ಗೆಹ್ಲೋಟ್‌ ಅಖಾಡಕ್ಕೆ; ಸಿ.ಟಿ.ರವಿಗೆ ರಾಜ್ಯಪಾಲ ಬುಲಾವ್‌?

1-busss

ನಾಡಿದ್ದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಭೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havya

Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-manmohan

Belagavi; ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ

29

Kabaddi: ಇಂದು ಸೀನಿಯರ್‌ ಕಬಡ್ಡಿ ತಂಡದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.