ಸೌತಾಂಪ್ಟನ್‌ನಲ್ಲಿ ನಡೆಯಲಿದೆ ವಿಶ್ವ ಟೆಸ್ಟ್ ಫೈನಲ್: ಐಸಿಸಿ
Team Udayavani, Mar 10, 2021, 11:20 PM IST
ದುಬಾೖ: ಇಂಗ್ಲೆಂಡಿನ ಇತಿಹಾಸದಲ್ಲೇ ಮೊದಲ ಬಾರಿಗೆಂಬಂತೆ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯವೊಂದು ಕ್ರಿಕೆಟಿನ ಮಹೋನ್ನತ ತಾಣವಾದ ಲಂಡನ್ನಿನ ಲಾರ್ಡ್ಸ್‌ನಿಂದಾಚೆ ನಡೆಯಲಿದೆ. ಜೂನ್‌ನಲ್ಲಿ ನಡೆಯಲಿರುವ ಭಾರತ-ನ್ಯೂಜಿಲ್ಯಾಂಡ್ ನಡುವಿನ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮುಖಾಮುಖೀಯನ್ನು ಲಾರ್ಡ್ಸ್‌ನಿಂದ ಸೌತಾಂಪ್ಟನ್‌ನ ಹ್ಯಾಂಪಶೈರ್ ಬೌಲ್ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದೆ. ಇದನ್ನು ಬುಧವಾರ ಐಸಿಸಿ ಅಧಿಕೃತವಾಗಿ ಪ್ರಕಟಿಸಿತು.
ಕೋವಿಡ್-19 ಮುನ್ನೆಚ್ಚರಿಕೆಯ ಕಾರಣ ಈ ಬದಲಾವಣೆ ಮಾಡಲಾಗಿದೆ ಎಂದು ಐಸಿಸಿ ಮತ್ತು ಇಸಿಬಿ ತಿಳಿಸಿವೆ. ಲಾರ್ಡ್ಸ್‌ಗೆ ಹೋಲಿಸಿದರೆ ಸೌತಾಂಪ್ಟನ್ ಹೆಚ್ಚು ಸುರಕ್ಷಿತ. ಇದು ವಿಶ್ವದ ಪ್ರಪ್ರಥಮ ಸಂಪೂರ್ಣ ಜೈವಿಕ ಸುರಕ್ಷಾ ತಾಣವಾಗಿದೆ. ವಿಶ್ವ ದರ್ಜೆಯ ಅಭ್ಯಾಸ ಸೌಲಭ್ಯ ಇಲ್ಲಿದೆ. ವಾಸ್ತವ್ಯವೂ ಹತ್ತಿರವಿದೆ. ಕಳೆದ ಋತುವಿನ ಕ್ರಿಕೆಟ್ ಸರಣಿಯನ್ನು ಇಲ್ಲಿನ ಜೈವಿಕ ಸುರಕ್ಷಾ ವಲಯದಲ್ಲಿ ನಡೆಸಿದ ಇಸಿಬಿಯ ಯಶಸ್ಸೇ ಐಸಿಸಿಯ ಈ ಬದಲಾವಣೆಗೆ ಮೂಲ ಎಂದು ಪ್ರಕಟನೆ ತಿಳಿಸಿದೆ.
ಆದರೆ ಐಸಿಸಿಗಿಂತ ಎರಡು ದಿನ ಮೊದಲೇ ಈ ಸ್ಥಳ ಬದಲಾವಣೆಯನ್ನು ಬಿಸಿಸಿಐ ಪ್ರಕಟಿಸಿದ್ದು ಮಾತ್ರ ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ :ಐಸಿಸಿ ಸಿಇಒ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಮನು ಸಾಹ್ನಿ
ಪ್ರೇಕ್ಷಕರಿಗೆ ಅವಕಾಶ?
ಫೈನಲ್ ಪಂದ್ಯಕ್ಕಿನ್ನೂ 3 ತಿಂಗಳಿದೆ. ಆಗ ಇಂಗ್ಲೆಂಡ್‌ನಲ್ಲಿ ಕೋವಿಡ್-19 ಸ್ಥಿತಿ ಹೇಗೆ ನಿಲ್ಲುತ್ತದೆ, ಆರೋಗ್ಯ ಸಚಿವಾಲಯದ ಆದೇಶ ಹೇಗಿರುತ್ತದೆ ಎಂಬುದನ್ನು ಗಮನಿಸಿ ಪ್ರೇಕ್ಷಕರಿಗೆ ಅವಕಾಶ ನೀಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು. ಸೀಮಿತ ಸಂಖ್ಯೆಯ ವೀಕ್ಷಕರಿಗೆ ಅವಕಾಶ ಕಲ್ಪಿಸುವುದು ಇಸಿಬಿಯ ಸದ್ಯದ ಯೋಜನೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.