ಎಲ್ಲರೂ ಸರಕಾರದಿಂದ ಅನುದಾನ ಪಡೆದರೆ ದೇಶಕ್ಕೆ ಹೊರೆ ಜಾಸ್ತಿ : ಅದಮಾರು ಶ್ರೀಗಳು
Team Udayavani, Sep 1, 2020, 11:16 AM IST
ಉಡುಪಿ: ಶ್ರೀಕೃಷ್ಣ ಮಠಕ್ಕೆ ಕೋವಿಡ್ ಕಾರಣದಿಂದ ಭಕ್ತರ ನಿರ್ಬಂಧವಿರುವುದರಿಂದ ಆದಾಯಕ್ಕೂ ಧಕ್ಕೆಯಾಗಿದೆ.
ಹೀಗಾಗಿ ಬ್ಯಾಂಕ್‌ಗಳಿಂದ 1 ಕೋ.ರೂ. ಸಾಲ ಪಡೆಯಲು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಿರ್ಧರಿಸಿರುವುದು ಸುದ್ದಿಯಾಗಿರುವಂತೆ ಹಲವರಿಂದ ಹಲವು ರೀತಿಯ ಪ್ರತಿಕ್ರಿಯೆ ಗಳು ಬರುತ್ತಿವೆ.
ಸೋಮವಾರ ಪತ್ರಕರ್ತರು ಸ್ವಾಮೀಜಿ ಅವರನ್ನು “ಸರಕಾರದಿಂದ ಅನುದಾನ ಕೇಳುತ್ತೀರಾ?’ ಎಂದು ಪ್ರಶ್ನಿಸಿದಾಗ “ಕೋವಿಡ್
ಅವಧಿಯಲ್ಲಿ ನಾವೇ ಸರಕಾರಕ್ಕೆ ದೇಣಿಗೆ ಕೊಟ್ಟಿದ್ದೇವೆ. ನಾವು ಸ್ವಾವಲಂಬಿ ಭಾರತೀಯ ರಾಗಬೇಕು. ನಮಗೂ ಕರ್ತವ್ಯಗಳಿರುತ್ತವೆ. ಎಲ್ಲರೂ ಸರಕಾರದಿಂದ ಕೇಳುತ್ತ ಹೋದರೆ ಜನಸಾಮಾನ್ಯರ ಮೇಲಿನ ಹೊರೆ ಜಾಸ್ತಿಯಾ ಗುತ್ತದೆ. ಸರಕಾರವಾದರೂ ಎಷ್ಟು ಜನರಿಗೆ ಎಷ್ಟು ಹಣ ಕೊಡಲು ಸಾಧ್ಯ?’ ಎಂದು ಉತ್ತರಿಸಿದರು.
ಶಿಕ್ಷಣ ಸಂಸ್ಥೆ ಆದಾಯ ಮೂಲವಲ್ಲ ಕೆಲವರು ಅದಮಾರು ಮಠಕ್ಕೆ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಸಾಲ ಮಾಡುವುದೇಕೆ? ಶಿಕ್ಷಣ ಸಂಸ್ಥೆಗಳಿಂದ ಹಣ ಪಡೆಯ ಬಹುದಲ್ಲವೆ ಎಂದು ಕೇಳುತ್ತಾರೆ. “ಭಾರತ ಸ್ವಾವಲಂಬಿಯಾಗಬೇಕು ಎಂದು ದುಡ್ಡು ಕೊಡುವ ಬದಲು ದುಡ್ಡು ಸಂಪಾದಿಸ ಬೇಕಾದ ಶಿಕ್ಷಣ ಕೊಡುವ ಸಂಸ್ಥೆಗಳನ್ನು ಶ್ರೀ ವಿಬುಧೇಶತೀರ್ಥರು ಸ್ಥಾಪಿಸಿದರು. ಶ್ರೀ ವಿಶ್ವಪ್ರಿಯ
ತೀರ್ಥರು ತಮಗೆ ಬಂದ ಕಾಣಿಕೆಗಳನ್ನುಬಡ ವಿದ್ಯಾರ್ಥಿಗಳು ಕೇಳಿದಾಗ ಶುಲ್ಕ ಪಾವತಿಗೆ ಕೊಡುತ್ತಾರೆ. ನಾವು ಶಿಕ್ಷಣ ಸಂಸ್ಥೆಗಳಿಗೆ ಕೊಡಬೇಕೆ ವಿನಾ ಅಲ್ಲಿಂದ ಪಡೆಯ ಬಾರದು. ಅದು ನಮಗೆ ಆದಾಯದ ಮೂಲವಾಗಬಾರದು. ನಾವು ಸಾಲ ಮಾಡಿದರೆ ಒಂದು ಎಚ್ಚರಿಕೆಯೂ ಇರುತ್ತದೆ. ಸಾಲ ಕೊಡುವ ಬ್ಯಾಂಕ್‌ನವರೂ ಸುಮ್ಮನೆ ಕೊಡುತ್ತಾರೋ? ಮಠದಲ್ಲಿ ಭೂಮಿ ಮೊದಲಾದ ಸಂಪನ್ಮೂಲವಿದೆ ಎಂದು ಅದನ್ನು ಖಾಲಿ ಮಾಡುವುದು ತರವಲ್ಲ ಎಂದು ಹೇಳಿದರು.
ಶ್ರೀ ವಿಬುಧೇಶತೀರ್ಥರು 1988-90ರ ಅವಧಿಯಲ್ಲಿ ನಮ್ಮ ಗುರುಗಳಾದ ಶ್ರೀ ವಿಶ್ವಪ್ರಿಯತೀರ್ಥರಿಂದ ಪರ್ಯಾಯ ಪೂಜೆ ಮಾಡಿಸಿದಾಗ 60 ಲ.ರೂ. ಸಾಲ ಮಾಡಿದ್ದರು. ಪರ್ಯಾಯ ಪೀಠದಿಂದ ನಿರ್ಗಮಿಸುವಾಗ 25 ಲ.ರೂ. ಸಾಲ ಉಳಿದಿತ್ತು. ಅದನ್ನು ಶ್ರೀ ವಿಬುಧೇಶತೀರ್ಥರೇ ತೀರಿಸಿದರು. ಶ್ರೀಕೃಷ್ಣ ಮಠದಲ್ಲಿ ಪ್ರಸ್ತುತ ನಿತ್ಯ 1ರಿಂದ 1.25 ಲ.ರೂ. ಖರ್ಚು ಬರುತ್ತದೆ.
– ಶ್ರೀ ಈಶಪ್ರಿಯತೀರ್ಥ ಶ್ರೀಪಾದರು
ವಿಟ್ಲಪಿಂಡಿ ಉತ್ಸವ ಶೀಘ್ರ ನಿರ್ಧಾರ: ಡಿಸಿ
ಉಡುಪಿ: ಶ್ರೀಕೃಷ್ಣ ಮಠದ ವಿಟ್ಲಪಿಂಡಿ ಉತ್ಸವ ಆಚರಣೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಕುರಿತು ಇದು ವರೆಗೆ ಯಾವುದೇ ನಿರ್ಧಾರ ತಳೆದಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಸೋಮವಾರ ನಡೆಯಬೇಕಾದ ಕೋವಿಡ್ ಸಂಬಂಧಿತ ಸಭೆ ನಡೆದಿಲ್ಲ. ವಿಟ್ಲಪಿಂಡಿ ಉತ್ಸವದ ಕುರಿತು ಪರ್ಯಾಯ ಸ್ವಾಮೀಜಿ ಯವರನ್ನು ಭೇಟಿ ಮಾಡಿ, ಅವರ ಅಭಿಪ್ರಾಯವನ್ನು ಕೇಳಿ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ಜಿಲ್ಲಾಧಿಕಾರಿ ಜಗದೀಶ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Police Raid: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.