ಮಕ್ಕಳು 7ಗಂಟೆಗೆ ಶಾಲೆಗೆ ಹೋಗಬಹುದಾದರೆ, 9ಗಂಟೆಗೆ ಕೋರ್ಟ್ ಯಾಕೆ ಪ್ರಾರಂಭಿಸಬಾರದು:ಸುಪ್ರೀಂ
ಸಾಮಾನ್ಯ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಕಾರ್ಯ ಆರಂಭಿಸಿತ್ತು
Team Udayavani, Jul 15, 2022, 2:50 PM IST
ನವದೆಹಲಿ:ಒಂದು ವೇಳೆ ಬೆಳಗ್ಗೆ ಏಳು ಗಂಟೆಗೆ ಮಕ್ಕಳು ಶಾಲೆಗೆ ಹೊರಡುತ್ತಾರೆ ಎಂದಾದರೆ, ನ್ಯಾಯಾಧೀಶರು ಮತ್ತು ವಕೀಲರು ಬೆಳಗ್ಗೆ 9ಗಂಟೆಗೆ ಯಾಕೆ ಕೆಲಸ ಆರಂಭಿಸಬಾರದು ಎಂದು ಸುಪ್ರೀಂಕೋರ್ಟ್ ಜಡ್ಜ್ ಯು.ಯು.ಲಲಿತ್ ಶುಕ್ರವಾರ( ಜುಲೈ 15) ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಜುಬೇರ್ ಮೊಹಮ್ಮದ್ ಗೆ ಜಾಮೀನು; ದೇಶವನ್ನು ತೊರೆಯುವಂತಿಲ್ಲ
ಸುಪ್ರೀಂಕೋರ್ಟ್ ನ ಜಸ್ಟೀಸ್ ಯು.ಯು.ಲಲಿತ್, ಜಸ್ಟೀಸ್ ಎಸ್.ರವೀಂದ್ರ ಭಟ್ ಮತ್ತು ಜಸ್ಟೀಸ್ ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠ ಇಂದು ಬೆಳಗ್ಗೆ 9.30ಕ್ಕೆ ಕಾರ್ಯಾರಂಭಿಸಿತ್ತು. ಸುಪ್ರೀಂಕೋರ್ಟ್ ನ ಸಾಮಾನ್ಯ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಕಾರ್ಯ ಆರಂಭಿಸಿತ್ತು ಎಂದು ವರದಿ ತಿಳಿಸಿದೆ.
“ನನ್ನ ದೃಷ್ಟಿಕೋನದ ಪ್ರಕಾರ ಬೆಳಗ್ಗೆ 9ಗಂಟೆಗೆ ಕಾರ್ಯಾರಂಭಿಸಬೇಕು. ನಾನು ಯಾವಾಗಲೂ ಹೇಳುತ್ತಿರುತ್ತೇನೆ, ಒಂದು ವೇಳೆ ಬೆಳಗ್ಗೆ 7 ಗಂಟೆಗೆ ಮಕ್ಕಳು ಶಾಲೆಗೆ ಹೋಗಬಹುದಾದರೆ, ನಾವ್ಯಾಕೆ 9 ಗಂಟೆಗೆ ಬರಬಾರದು ಎಂದು ಜಸ್ಟೀಸ್ ಲಲಿತ್ ಪ್ರಶ್ನಿಸಿದರು.
ಜಾಮೀನು ಅರ್ಜಿಯ ವಿಚಾರಣೆಯಲ್ಲಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು, ಸಮಯಕ್ಕಿಂತ ಮೊದಲೇ ವಿಚಾರಣೆ ನಡೆಸಿದ್ದಕ್ಕೆ ಪೀಠದ ಕಾರ್ಯವನ್ನು ಶ್ಲಾಘಿಸಿದ್ದರು. ಬಳಿಕ ಜಸ್ಟೀಸ್ ಯುಯು ಲಲಿತ್ ಅವರು ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Adani Group: ಲಂಚ, ಸತ್ಯ ಮರೆಮಾಚಿದ ಕಾರಣಕ್ಕೆ ಗೌತಮ್ ಅದಾನಿ ವಿರುದ್ದ ಅಮೆರಿಕದಲ್ಲಿ ಕೇಸು
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.