ಸಮುದ್ರದ ಪ್ಲಾಸ್ಟಿಕ್ ಕಣ ಸಂಸ್ಕರಣೆಗೆ ಐಐಟಿ ಗುವಾಹಟಿ ತಂಡ ಸಫಲತೆ
Team Udayavani, Apr 20, 2021, 8:05 PM IST
ನವದೆಹಲಿ: ಸೂಕ್ಷ್ಮ ರಂಧ್ರಗಳುಳ್ಳ ಟ್ಯೂಬ್ ಬಳಸಿ, ಐಐಟಿ ಗುವಾಹಟಿ ತಂಡ ಸಮುದ್ರ ನೀರಿನಲ್ಲಿರುವ ಸಣ್ಣ ಪ್ಲಾಸ್ಟಿಕ್ ಕಣಗಳನ್ನು ಸಂಸ್ಕರಣೆ ಮಾಡುವಲ್ಲಿ ಸಫಲತೆ ಸಾಧಿಸಿದೆ.
“ಸಮುದ್ರದಲ್ಲಿ ಪ್ಲಾಸ್ಟಿಕ್ ತುಣುಕುಗಳು ಇಂಚಿನ 5ನೇ ಒಂದು ಭಾಗದಷ್ಟು ಸೂಕ್ಷ್ಮ ಕಣಗಳಾಗಿ ಬೆರೆತಿರುತ್ತವೆ. ಸಮುದ್ರ ಜೀವಿಗಳು ಇದನ್ನೇ ಸೇವಿಸಿ ಬದುಕುತ್ತವೆ. ಇಂಥ ಸಮುದ್ರ ಮೀನು, ಏಡಿಗಳನ್ನು, ಅಲ್ಲದೆ ಪ್ಲಾಸ್ಟಿಕ್ ಕಣ ಬೆರೆಸಿದ ಉಪ್ಪನ್ನು ಮಾನವ ಸೇವಿಸುವುದರಿಂದ ಆತನಲ್ಲಿ ಹಾರ್ಮೋನ್ ವ್ಯತ್ಯಯ, ಬಂಜೆತನ, ನರವ್ಯವಸ್ಥೆ ಸಮಸ್ಯೆ, ಕ್ಯಾನ್ಸರ್ ಕೂಡ ಬರುವ ಸಾಧ್ಯತೆ ಇದೆ’ ಎಂದು ಐಐಟಿಯ ಕೆಮಿಕಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಕೌಸ್ತುಭ ಮೊಹಂತಿ ಎಚ್ಚರಿಸಿದ್ದಾರೆ.
ಫಿಲ್ಟರ್ ಹೇಗಿದೆ?: ಸ್ಟ್ರಾ ರೀತಿಯ ನೂರಾರು ಅತಿಸಣ್ಣಗಾತ್ರದ ಟ್ಯೂಬ್‌ಗಳನ್ನು ಒಗ್ಗೂಡಿಸಿ, ಫಿಲ್ಟರ್ ಮ್ಯಾಟ್ರಿಕ್ಸ್‌ನ ಕೊಳವೆಯಂತೆ ಬಳಸಲಾಗಿದೆ. ಈ ಟ್ಯೂಬ್‌ನ ಶರೀರ ಅತಿಸೂಕ್ಷ್ಮ ರಂಧ್ರಗಳನ್ನು ಹೊಂದಿದೆ. ಇಂಥ ಕೊಳವೆ ಮೂಲಕ ನೀರು ಹಾದುಹೋಗುವಾಗ, ಸಣ್ಣ ಪ್ಲಾಸ್ಟಿಕ್ ಕಣಗಳು ಕೊಳವೆಗಳಲ್ಲೇ ಉಳಿದುಕೊಂಡು, ಸಂಸ್ಕರಿತ ನೀರು ಸರಾಗವಾಗಿ ಹರಿದುಹೋಗುತ್ತದೆ ಎಂದು ಮೊಹಂತಿ ವಿವರಿಸಿದ್ದಾರೆ.
ಇದನ್ನೂ ಓದಿ :ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ 5-6 ದಿನಗಳಲ್ಲೇ ಅನುಮತಿ : ಜಗದೀಶ ಶೆಟ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
MUST WATCH
ಹೊಸ ಸೇರ್ಪಡೆ
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.