![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 18, 2022, 9:47 AM IST
ಬಂಟ್ವಾಳ: ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು 30 ಕೆಜಿ ಮಾಂಸ ಸಹಿತ ಆಟೋ ರಿಕ್ಷಾ ಹಾಗೂ ಆರೋಪಿಯನ್ನು ವಶಪಡಿಸಿಕೊಂಡ ಘಟನೆ ನಾವೂರು ಬೀದಿಯಲ್ಲಿ ನಡೆದಿದೆ.
ನಾವೂರು ಪಟ್ಲ ನಿವಾಸಿ, ಆಟೋ ರಿಕ್ಷಾ ಚಾಲಕ ಅಬ್ದುಲ್ ಖಾದರ್(30 ವ) ಬಂಧಿತ ಆರೋಪಿ.
ಅಬ್ದುಲ್ ದನವನ್ನು ಅಕ್ರಮವಾಗಿ ಕಡಿದು ಮಾಂಸ ಮಾಡಿ ಮಾರಾಟದ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಜ. 15ರಂದು ಘಟನೆ ನಡೆದಿದ್ದು, ಬಂಟ್ವಾಳ ಗ್ರಾಮಾಂತರ ಪಿಎಸ್ಐ ಹರೀಶ್ ವೀಕೆಂಡ್ ಕರ್ಫ್ಯೂ ರೌಂಡ್ಸಿನಲ್ಲಿದ್ದ ವೇಳೆ ಸರಪಾಡಿ ಕಡೆಯಿಂದ ಆಟೋವೊಂದು ವೇಗವಾಗಿ ಹೋಗಿದ್ದು, ಪೊಲೀಸರು ಅದನ್ನು ನಿಲ್ಲಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯಿಂದ ಗೋಣಿಯಲ್ಲಿದ್ದ 2500 ರೂ.ಮೌಲ್ಯದ 15 ಕಟ್ಟು 30 ಕೆಜಿ ದನದ ಮಾಂಸ, ಆಟೋ ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.