Directive Principles: ಸಂವಿಧಾನದ ನಿರ್ದೇಶಕ ತತ್ವಗಳ ಮಹತ್ವ


Team Udayavani, Jun 28, 2023, 6:36 AM IST

constitution of india

ಭಾರತೀಯ ಸಂವಿಧಾನದಲ್ಲಿ 22 ಅಧ್ಯಾಯಗಳಿದ್ದು ಆರ್ಟಿಕಲ್‌ 31-51ಎ ವರೆಗಿನ ನಾಲ್ಕನೇ ಅಧ್ಯಾಯದಲ್ಲಿ ನಿರ್ದೇಶಕ (Directive Principles) ತತ್ವಗಳು ಒಳಗೊಂಡಿವೆ. ಈ ತತ್ವಗಳು ಪ್ರಗತಿಪರ ಸರಕಾರಗಳು ಅನುಸರಿಸಬಹುದಾದ ಅಥವಾ ಅನು ಸರಿಸಲೇಬೇಕಾದ ಅವಕಾಶಗಳಿಗೆ ಕಾನೂನಿನ ಮೂಲಕ ಜೀವ ತುಂಬುತ್ತವೆ. ಮುಖ್ಯವಾಗಿ ಆರ್ಥಿಕ ನಿರ್ವಹಣೆಗೆ ಮಾರ್ಗಸೂಚಿಯನ್ನು ನೀಡಲಾಗಿದೆ. ಸರಕಾರ ಯಾವ ವಿಧಾನದಲ್ಲಿ ಕಾನೂನಾತ್ಮಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಗಳನ್ನು ಬಳಸಿಕೊಳ್ಳ ಬೇಕೆಂಬ ಬಗ್ಗೆ ನಿರ್ದೇಶನಗಳಿವೆ. ಪೌರನು ಸಾಂವಿಧಾನಿಕವಾಗಿ ಹೊಂದಿರಬಹುದಾದ, ಆದರೆ ನ್ಯಾಯಾಲಯವು ನಿರ್ದೇಶಿಸಲಾಗದ ಕೆಲವು ಸೌಲಭ್ಯಗಳನ್ನು ಕಾನೂನು ರೂಪಿಸುವ ಮೂಲಕ ಒದಗಿಸಲು ನಿರ್ದೇಶಕ ತಣ್ತೀಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಉದಾಃ ಸಾರ್ವಜನಿಕ ಆರೋಗ್ಯದ ಹೊಣೆ ಸರಕಾರದ್ದು ಎಂದು ಸಂವಿಧಾನದಲ್ಲಿ ಉಲ್ಲೇಖೀಸಲಾಗಿದೆ. ಆದರೆ ನ್ಯಾಯಾಲಯ ಯಾವ ರೀತಿ ಎಂದು ನಿರ್ದೇಶಿಸುವಂತಿಲ್ಲ. ಆದರೆ ಸರಕಾರ ಕಾನೂನು ರೂಪಿಸಿ ಯುಕ್ತ ಕಂಡ ರೀತಿಯಲ್ಲಿ ಆರೋಗ್ಯ ಸೇವೆಯನ್ನು ಒದಗಿಸಬಹುದು.

ನಿರ್ದೇಶಕ ತತ್ವಗಳ ಅಂತಃಸತ್ವ ಇರುವುದೇ ಸರಕಾ ರಕ್ಕೆ ದತ್ತವಾದ ಕಾನೂನು ರೂಪಿಸುವ ಅಧಿಕಾರ. ಆ ಮೂಲಕ ಪ್ರಗತಿ ಸಾಧಿಸುವುದು ಇದರ ಹಿಂದಿರುವ ಆದರ್ಶ. ಈ ಅವಕಾಶವನ್ನು ನಿರ್ದೇಶಕ ತಣ್ತೀಗಳ ವಿವಿಧ ಆರ್ಟಿಕಲ್‌ಗ‌ಳಲ್ಲಿ ನೀಡಲಾಗಿದೆ. ಮೊತ್ತ ಮೊದಲಾಗಿ ಸಾಮಾಜಿಕ ಸಮಾನತೆ ಹಾಗೂ ಭದ್ರತೆ. ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಎಲ್ಲ ಪೌರರು ಸಮಾನರು ಎಂದು ಪರಿಗಣಿಸುವುದು ಪ್ರಜಾಸತ್ತಾತ್ಮಕ ಆಡಳಿತದ ಲಕ್ಷಣ. ಈ ಬಗ್ಗೆ ಕಾನೂನು ರೂಪಿಸಲು ಆರ್ಟಿಕಲ್‌ 38 (1) ಹಾಗೂ (2)ರಲ್ಲಿ ಅವಕಾಶ ಕಲ್ಪಿಸಲಾಗಿದೆ. ದುಡಿಯುವ ವರ್ಗಕ್ಕೆ ನ್ಯಾಯ ಯುತವಾದ ವೇತನ ಹಾಗೂ ಉತ್ತಮ ಜೀವನ ಸಾಗಿಸಲು ಯುಕ್ತವಾದ ವಾತಾವರಣ ಒದಗಿಸುವುದು ಪ್ರಗತಿಪರ ಸರಕಾರದ ಜವಾಬ್ದಾರಿ. ಈ ಬಗ್ಗೆ ಕಾನೂನು ರೂಪಿಸಲು ಆರ್ಟಿಕಲ್‌ (43)ರಲ್ಲಿ ಅವಕಾಶ ಒದಗಿಸಲಾಗಿದೆ. ಆರ್ಟಿಕಲ್‌ (47)ರಲ್ಲಿ ಪೌಷ್ಟಿಕತೆಯ ಮಟ್ಟವನ್ನು ಹೆಚ್ಚಿಸವುದು ಸರಕಾರದ ಹೊಣೆಗಾರಿಕೆ ಎಂಬ ಉಲ್ಲೇಖವಿದೆ. ಆರ್ಟಿಕಲ್‌ 39 (ಬಿ-ಸಿ)ಗಳಂತೆ ಸಮಾಜದ ಸಂಪನ್ಮೂಲವನ್ನು ಸಮಾನವಾಗಿ ಹಂಚುವ ವ್ಯವಸ್ಥೆ ಮಾಡ ಬಹುದಾಗಿದೆ. ಅಲ್ಲದೆ ಆರ್ಟಿಕಲ್‌ (51)ರಂತೆ ಅಂತರಾಷ್ಟ್ರೀಯ ಶಾಂತಿ ಸ್ಥಾಪನೆಗೆ ಒತ್ತು ಕೊಡಲು ನಿರ್ದೇಶನವಿದೆ. ಇದೇ ಮುಖ್ಯವಾದ ಧ್ಯೇಯೋ ದ್ದೇಶಗಳು.

ಇವುಗಳಲ್ಲದೆ, ಆರ್ಥಿಕ ಸ್ವಾತಂತ್ರ್ಯ ಹಾಗೂ ಸ್ಥಿರತೆಯನ್ನು ಕಾಪಾಡಲು ಸಹಕಾರಿಯಾದ ನಿರ್ದೇಶನಗಳು ಈ ತತ್ವಗಳಲ್ಲಿ ಅಡಕವಾಗಿವೆ. ಆರ್ಟಿಕಲ್‌ (44) ಸಮಾನ ನಾಗರಿಕ ನಿಯಮ (Common Civil Code) ರೂಪಿಸಲು ಅನುವು ಮಾಡಿಕೊಡುತ್ತದೆ. ಆರ್ಟಿಕಲ್‌ (45)ರಲ್ಲಿ ಉಚಿತ ಪ್ರಾಥಮಿಕ ಶಿಕ್ಷಣ ನೀಡುವುದು ಸರಕಾರದ ಹೊಣೆ ಎಂಬ ಉಲ್ಲೇಖವಿದೆ. ಪಶು ಸಾಕಣೆ ಮತ್ತು ಸಂಗೋಪನೆ ಹಾಗೂ ಕೃಷಿ ಅಭಿವೃದ್ಧಿಪಡಿಸಲು ಆರ್ಟಿಕಲ್‌ (48) ಅನುವು ಮಾಡಿಕೊಡುತ್ತದೆ. ಆರ್ಟಿಕಲ್‌ (40)ರಲ್ಲಿ ತಳಮಟ್ಟದ ಆಡಳಿತ ವ್ಯವಸ್ಥೆಯಾದ ಪಂಚಾಯತ್‌ ರಾಜ್‌ ಸ್ಥಾಪಿಸಲು ಸೂಚನೆ ಇದೆ. ಹಾಗೆ ಗುಡಿ ಕೈಗಾರಿಕೆಗಳ ಬಲವರ್ಧನೆಗೆ ತಕ್ಕ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಒಂದು ಮಹತ್ವದ ಹೆಜ್ಜೆ ಎಂಬಂತೆ ಸಕಲ ರಿಗೂ ಸೂಕ್ತ ನ್ಯಾಯ ನಿಷ್ಪಕ್ಷಪಾತವಾಗಿ ಲಭಿಸುವಂತೆ ಆರ್ಟಿಕಲ್‌ (50)ರ ಪ್ರಕಾರ ನ್ಯಾಯಾಂಗವನ್ನು ಪ್ರತ್ಯೇಕಗೊಳಿಸಿ ಸ್ವತಂತ್ರ ಅಸ್ತಿತ್ವವನ್ನು ನೀಡಲಾಗಿದೆ. ಹಾಗೆ ಸ್ವಸಹಾಯ ಗುಂಪುಗಳು ಸ್ವಾಯತ್ತ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಬಲ್ಲ ಸಹಕಾರಿ ಸಂಘಗಳ ಸ್ಥಾಪನೆಗೆ ಆರ್ಟಿಕಲ್‌ 43-ಬಿ ಯಲ್ಲಿ ಸೂಚನೆ ಇದೆ.

ಇನ್ನೊಂದು ಮಹತ್ವದ ನಿರ್ದೇಶನವೆಂದರೆ ಸ್ತ್ರೀ-ಪುರುಷರಲ್ಲಿ ಸಮಾನತೆಯನ್ನು ಸಾಧಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ತತ್ವವನ್ನು ಅಳವಡಿಸಲು ಆರ್ಟಿಕಲ್‌ 39(ಡಿ) ಅವಕಾಶ ನೀಡಲಾಗಿದೆ. ಮಕ್ಕಳು ಮತ್ತು ಯುವಕರು ದುರ್ಬಳಕೆಗೆ (Exploitation) ಗುರಿಯಾಗದಂತೆ ತಡೆಯಲು ಆರ್ಟಿಕಲ್‌ 39(1)ರಂತೆ ಸರಕಾರಕ್ಕೆ ಅವಕಾಶವಿದೆ. ಹಾಗೆ ಕಾರ್ಖಾನೆ ಕೆಲಸಗಾರರು ಸಂಸ್ಥೆಯ ಆಡಳಿತದಲ್ಲಿ ಭಾಗವಹಿಸುವ ಅವಕಾಶವನ್ನು ಈ ತತ್ವಗಳಲ್ಲಿ ನೀಡ ಲಾಗಿದೆ. ಈ ಅಧ್ಯಾಯದಲ್ಲಿ ವಿಶೇಷವಾಗಿ ಉಲ್ಲೇಖೀಸತಕ್ಕ ಅಂಶವೆಂದರೆ ಆರ್ಟಿಕಲ್‌ 51-ಎರಲ್ಲಿ ಪೌರನಿಗೂ ಕರ್ತವ್ಯ ನಿರೂಪಿಸಲಾಗಿದೆ. ಸರಕಾರ, ಜನರ ಆಶೋತ್ತರಗಳನ್ನು ಈಡೇರಿಸಲು ಅಗತ್ಯ ಯೋಜನೆಗಳನ್ನು ಕಾನೂನು ಮೂಲಕ ರೂಪಿಸಿ ಜನರನ್ನು ಒಳಗೊಳ್ಳುವಂತೆ ಮಾಡಿ ದುಡಿಯುವ ಕೈಗಳನ್ನು ಜಾಸ್ತಿ ಮಾಡಿ ತನ್ಮೂಲಕ ಸಮಾಜದ ಅಭ್ಯುದಯ ಸಾಧಿಸಲು ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಮಾನತೆ ಮತ್ತು ಪ್ರಗತಿ ಜತೆ ಜತೆಯಾಗಿ ಸಾಗುವಾಗ ಅಗತ್ಯ ಸಮನ್ವಯತೆಗೆ ಈ ತತ್ವಗಳು ಸಹಕಾರಿ.

ನಮ್ಮ ಸಂವಿಧಾನ ನಿರ್ಮಾತೃಗಳು ದೂರಾಲೋಚನೆ ಇರಿಸಿಕೊಂಡೇ ಈ ನಿರ್ದೇಶಕ ತತ್ವಗಳನ್ನು ಸಂವಿಧಾನದಲ್ಲಿ ಪೋಣಿಸಿದ್ದಾರೆ. ಪ್ರಗತಿಪರ ಚಿಂತನೆಯುಳ್ಳ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಜನರ ದುಡಿಯುವ ಕೈಗಳನ್ನು ಬಲಪಡಿಸಿ ಪ್ರಗತಿ ಸಾಧಿಸಲು ಸಹಕಾರಿಯಾದ ಸ್ಥಿತಿ ನಿರ್ಮಾಣ ಮಾಡಲು ಈ ನಿರ್ದೇಶಕ ತತ್ವಗಳ ಅಗತ್ಯವನ್ನು ಮನಗಂಡು ಸಂವಿಧಾನದಲ್ಲಿ ಅಳವಡಿಸಲಾಗಿದೆ.

ಪ್ರಾಥಮಿಕ ಶಿಕ್ಷಣ ಹೊರತುಪಡಿಸಿ ಯಾವ ಸೌಲಭ್ಯವನ್ನು ಉಚಿತವಾಗಿ ನೀಡಲು ನಿರ್ದೇಶಕ ತತ್ವಗಳು ಪ್ರೇರೇಪಿಸುವುದಿಲ್ಲ. ಆದರೆ ದುರದೃಷ್ಟವೇನೆಂದರೆ ಈಗಿನ ಚುನಾಯಿತ ಸರಕಾರಗಳು ಆರ್ಥಿಕವಾಗಿ ಹಿಂದುಳಿದವರ ಅಭ್ಯು ದಯಕ್ಕೆ ಹಣ ಮತ್ತಿತರ ಸೊತ್ತುಗಳನ್ನು ನೇರ ಉಚಿತವಾಗಿ ನೀಡುವುದನ್ನು ಆರಂಭಿಸಿವೆ. ಇದಕ್ಕೆ ನಾಂದಿ ಹಾಡಿದ ಸರಕಾರವೆಂದರೆ ತಮಿಳುನಾಡು ಸರಕಾರ. ಈಗ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್‌ ಸರಕಾರ ಈ ಉಚಿತಗಳನ್ನು ಅದ್ದೂರಿಯಾಗಿ ನೀಡಲಾ ರಂಭಿಸಿದೆ. ಅದೂ ಗ್ಯಾರಂಟಿಗಳ ಮೂಲಕ. ಈ ಬಗ್ಗೆ ಸಂಪನ್ಮೂಲವನ್ನು ಸರಕಾರ ಹೇಗೆ ಕ್ರೋಡೀಕರಿಸುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಸರಕಾರಕ್ಕೆ ಕರ, ತೆರಿಗೆಗಳ ಮೂಲಕ ಸಂಪನ್ಮೂಲ ಕ್ರೋಡೀಕರಿಸಲು ಅಧಿಕಾರವಿದೆ. ಆದರೆ ಅದು ಪ್ರಜಾಪೀಡನ ರೂಪದಲ್ಲಿರ ಬಾರದಷ್ಟೇ!

ಚುನಾಯಿತ ಸರಕಾರಗಳು ಸಂವಿಧಾನದ ಆಶಯದಂತೆ ಆಡಳಿತ ನಡೆಸುತ್ತಿವೆಯೋ ಅಥವಾ ರಾಜಕೀಯ ಪ್ರೇರಿತವಾಗಿ ತಮಗೆ ಅನುಕೂಲ ಬಂದ ಹಾಗೆ ನಡೆಸುತ್ತಿವೆಯೋ? ಎಂಬುದನ್ನು ಗಮನಿಸಿ ಪ್ರತಿಕ್ರಿಯಿಸುವ ಜವಾಬ್ದಾರಿ ಪ್ರತಿಯೊಬ್ಬ ಪೌರನಿಗೂ ಇದೆ. ಬ್ರಿಟನ್‌ನಲ್ಲಾದರೆ, ವಿಪಕ್ಷ ಸಮರ್ಥವಾಗಿ ಈ ಜವಾಬ್ದಾರಿಯನ್ನು ನಿಭಾಯಿಸುತ್ತದೆ. ಅಲ್ಲಿನ ರಾಜಕಾರಣಿಗಳು ಆಳುವ ಪಕ್ಷದಲ್ಲಿರಲಿ, ವಿಪಕ್ಷದಲ್ಲಿರಲಿ, ಅವರಲ್ಲಿ ರಾಷ್ಟ್ರೀಯ ಮನೋಭಾವ ಸದಾ ಜಾಗೃ ತವಾಗಿರುತ್ತದೆ. ಹಾಗಾಗಿ ಅಲ್ಲಿನ ವಿಪಕ್ಷಕ್ಕೆ Other Parliament ಎಂದೇ ಕರೆಯುತ್ತಾರೆ. ಆದರೆ ಭಾರತದಲ್ಲಿ ಆಳುವ ಪಕ್ಷದಲ್ಲಿರಲಿ, ವಿಪಕ್ಷದಲ್ಲಿರಲಿ, ಆತ ಕೇವಲ ರಾಜಕಾರಣಿ. ದೇಶದ ಗೊಡವೆ ನಾಭಿಯಿಂದ ಇಲ್ಲ. ಆದುದರಿಂದ ಭಾರತದಲ್ಲಿ ಸರಕಾರ ಸಂವಿಧಾ ನಾತ್ಮಕವಾಗಿ ಕಾರ್ಯನಿರ್ವಹಿಸುತ್ತದೋ ಯಾ ಇಲ್ಲವೋ ಎಂಬುದನ್ನು ಸಾರ್ವಜನಿಕರು ಗಮನಿಸಿ ಪ್ರತಿಕ್ರಿಯಿಸುವ ಅನಿವಾರ್ಯತೆ ಇದೆ.

ಬೇಳೂರು ರಾಘವ ಶೆಟ್ಟಿ

 

ಟಾಪ್ ನ್ಯೂಸ್

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

2-mng

Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

1-lllaa

Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ

Areca

Arecanut Growers: ಎರಡು ವರ್ಷಕ್ಕೊಮ್ಮೆ ಅಡಿಕೆ ಫ‌ಸಲು ಏರಿಳಿತ

GV-

New Bill: ಇನ್ನು ಪಂಚಾಯತ್‌ರಾಜ್‌ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ

Pashu-Sanjevani

Mangaluru: ಕರಾವಳಿ ಹೈನುಗಾರರ ಮನ ಗೆದ್ದ ಮನೆ ಬಾಗಿಲಿಗೆ ಪಶು ಸಂಜೀವಿನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

2-mng

Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

1-shirva

Shirva: ಏಷ್ಯನ್‌ ಜೂನಿಯರ್‌ ವೇಟ್‌ಲಿಫ್ಟಿಂಗ್‌ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್‌.ಕೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

2-mng

Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

1-shirva

Shirva: ಏಷ್ಯನ್‌ ಜೂನಿಯರ್‌ ವೇಟ್‌ಲಿಫ್ಟಿಂಗ್‌ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್‌.ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.