ಗಾಳಿಗೆ ತೂರಿದ ಕೋವಿಡ್ ನಿಯಮ; ನೆಲ್ಲೂರಿನಲ್ಲಿ ಉಚಿತ ಆಯುರ್ವೇದ ಔಷಧಕ್ಕೆ ಮುಗಿಬಿದ್ದ ಜನರು!
ಜನರು ಔಷಧ ತೆಗೆದುಕೊಳ್ಳುವಾಗ ಕೋವಿಡ್ ನಿಯಮ ಪಾಲಿಸುವಂತೆ ಧನಲಕ್ಷ್ಮಿ ತಿಳಿಸಿದ್ದಾರೆ.
Team Udayavani, May 21, 2021, 2:45 PM IST
ನೆಲ್ಲೂರು(ಆಂಧ್ರಪ್ರದೇಶ): ಕೋವಿಡ್ 19 ಸೋಂಕು ಗುಣಪಡಿಸಲು ಇಡೀ ಜಗತ್ತು ಆಧುನಿಕ ಔಷಧಿಯ ಮೂಲಕ ಪರಿಹಾರ ಕಂಡುಹಿಡಿಯಲು ಹೆಣಗಾಡುತ್ತಿದ್ದರೆ, ಮತ್ತೊಂದೆಡೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸುತ್ತಮುತ್ತಲಿನ ಸಾವಿರಾರು ಜನರು ಆಯುರ್ವೇದ ಔಷಧಕ್ಕೆ ಆದ್ಯತೆ ನೀಡಿದ್ದು, 50 ಸಾವಿರಕ್ಕೂ ಅಧಿಕ ಜನರು ಔಷಧಕ್ಕಾಗಿ ಮುಗಿಬೀಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ.
ಕೋವಿಡ್ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಸಾವಿರಾರು ಜನರು ಸರದಿ ಸಾಲಿನಲ್ಲಿ ಔಷಧ ಪಡೆಯಲು ನಿಂತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಖ್ಯಾತ ಪರಿಸರವಾದಿ, ಚಿಪ್ಕೊ ಚಳವಳಿ ನೇತಾರ ಸುಂದರ್ ಲಾಲ್ ಕೋವಿಡ್ ನಿಂದ ನಿಧನ
ಯಾವುದೇ ಶುಲ್ಕ ಇಲ್ಲದೇ ಉಚಿತವಾಗಿ ಕೋವಿಡ್ ಗುಣಪಡಿಸುವ ಔಷಧ ನೀಡಲಾಗುತ್ತದೆ ಎಂಬ ಭರವಸೆ ಹಿನ್ನೆಲೆಯಲ್ಲಿ ನೆಲ್ಲೂರ್ ನ ಮುತ್ತುಕೂರ್ ಮಂಡಲದ ಕೃಷ್ಣಪಟ್ಟಣಂ ಗ್ರಾಮದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಸಾವಿರಾರು ಮಂದಿ ಸೇರುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ಕೋವಿಡ್ ಗುಣಪಡಿಸಲು ಉಚಿತ ಆಯುರ್ವೇದ ಔಷಧ ಸಿಗುತ್ತಿದೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾಡಳಿತ ಸೂಕ್ತ ಕ್ರಮ ಜರಗಿಸಲು ಮುಂದಾಗಿತ್ತು. ಅದರಂತೆ ಅಧಿಕಾರಿಗಳ ತಂಡವನ್ನು ಗ್ರಾಮಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ ಆಯುರ್ವೇದ ಚಿಕಿತ್ಸೆ ಬಗ್ಗೆ ಜನರು ಪಾಸಿಟಿವ್ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಅಧಿಕಾರಿಗಳು ವಾಪಸ್ ಆಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ಶೀಘ್ರವಾಗಿ ಪೂರ್ಣ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
1000s throng for #AyurvedicMedicine for #Covid19 given by #Anandaiah in #Krishnapatnam, #Nellore district, #AndhraPradesh .
Several patients were also brought to the village out of belief.
Despite no scientific evidence, the free medicine became popular as a great healer. pic.twitter.com/e0vFUh2v6U— P Pavan (@PavanJourno) May 21, 2021
ಬೋಗಿನಿ ಆನಂದಯ್ಯ ಉಚಿತ ಆಯುರ್ವೇದ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದು, ಸಂಘಟಕರ ಹೇಳಿಕೆ ಪ್ರಕಾರ ದಿನದಿಂದ ದಿನಕ್ಕೆ ಔಷಧ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈಗಾಗಲೇ 20ಸಾವಿರಕ್ಕೂ ಅಧಿಕ ಮಂದಿಗೆ ಔಷಧ ಹಂಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಾವು ಔಷಧಕ್ಕಾಗಿ ಗಿಡಮೂಲಿಕೆಯನ್ನು ಉಪಯೋಗಿಸುತ್ತಿದ್ದೇವೆ. ಇದು ಕೋವಿಡ್ ಮುಂಜಾಗ್ರತಾ ಹಾಗೂ ಗುಣಪಡಿಸಲು ಉಪಯೋಗವಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಆಯುರ್ವೇದ ಔಷಧ ನೀಡುತ್ತಿದ್ದೇನೆ. ನನ್ನ ಮಗ ಆರಂಭಿಕವಾಗಿ ಒಂದು ಲಕ್ಷ ರೂ. ನೀಡಿದ್ದ, ಇದೀ ಗ ಗಿಡಮೂಲಿಕೆ ಹಾಗೂ ಇತರ ಅಗತ್ಯವಸ್ತುಗಳಿಗಾಗಿ ಜನರು ದೇಣಿಗೆ ನೀಡುತ್ತಿದ್ದಾರೆ ಎಂದು ಆನಂದಯ್ಯ ತಿಳಿಸಿದ್ದಾರೆ.
ಆಯುರ್ವೇದ ಔಷಧ ನೀಡುತ್ತಿದ್ದ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಅಧಿಕಾರಿ ಧನಲಕ್ಷ್ಮೀ, ಆರ್ ಡಿಒ ಸುವರ್ಣಮ್ಮ, ನೆಲ್ಲೂರ್ ಗ್ರಾಮೀಣ ಡಿಎಸ್ ಪಿ ವೈ.ಹರನಾಥ್ ರೆಡ್ಡಿ ಮತ್ತು ಆಯುಷ್ ವೈದ್ಯರು ಭೇಟಿ ನೀಡಿದ್ದರು. ಅಲ್ಲದೇ ಸ್ಯಾಂಪಲ್ಸ್ ಅನ್ನು ಪಡೆದುಕೊಂಡಿದ್ದರು.
ಔಷಧಕ್ಕೆ ಉಪಯೋಗಿಸುವ ಗಿಡಮೂಲಿಕೆಯ ಮಾಹಿತಿ ಸಂಗ್ರಹಿಸಲಾಗಿದೆ. ಈ ಕುರಿತ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗುವುದು ಎಂದು ಆಯುಷ್ ವೈದ್ಯರು ತಿಳಿಸಿದ್ದಾರೆ. ಜನರು ಔಷಧ ತೆಗೆದುಕೊಳ್ಳುವಾಗ ಕೋವಿಡ್ ನಿಯಮ ಪಾಲಿಸುವಂತೆ ಧನಲಕ್ಷ್ಮಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.