4 ವರ್ಷಗಳಲ್ಲಿ ಟ್ರಂಪ್‌ಗೆ 8,770 ಕೋ. ರೂ. ನಷ್ಟ
Team Udayavani, Jan 31, 2021, 7:30 AM IST
ಅಮೆರಿಕದ ನಿರ್ಗಮಿತ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅವರ ಕುರಿತಾದ ಒಂದಷ್ಟು ಕುತೂಹಲಕಾರಿ ಮಾಹಿತಿಗಳು ಈಗ ಮುನ್ನೆಲೆಗೆ ಬಂದಿವೆ. ಟ್ರಂಪ್ ಅವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಿಡಿತವನ್ನು ಹೊಂದಿದ್ದಾರೆ. ಆದರೆ ಅವರು ಅಮೆರಿಕದ ಅಧ್ಯಕ್ಷರಾಗಿದ್ದ ನಾಲ್ಕು ವರ್ಷಗಳ ಅವಧಿಯಲ್ಲಿ ಅವರ ನಿವ್ವಳ ಸಂಪತ್ತು 8,770 ಕೋ. ರೂ. ಕಡಿಮೆಯಾಗಿದೆ ಎನ್ನುತ್ತವೆ ವರದಿಗಳು.
ಟ್ರಂಪ್ ಎಷ್ಟು ಶ್ರೀಮಂತ?
ಫೋರ್ಬ್ಸ್ ಪ್ರಕಾರ, ಟ್ರಂಪ್ ಅವರ ಪ್ರಸ್ತುತ ನಿವ್ವಳ ಸಂಪತ್ತಿನ ಮೌಲ್ಯ 2.5 ಬಿಲಿಯನ್ ಡಾಲರ್ (ಸುಮಾರು 18,300 ಕೋ. ರೂ.). ಸದ್ಯದ ಮಟ್ಟಿಗೆ ಅವರು ವಿಶ್ವದ ಶ್ರೀಮಂತರಲ್ಲಿ 339ನೇ ಸ್ಥಾನದಲ್ಲಿ¨ªಾರೆ. ಅವರು ಅಧ್ಯಕ್ಷರಾಗುವುದಕ್ಕೂ ಮುನ್ನ ಅವರ ಸಂಪತ್ತಿನ ಒಟ್ಟು ಮೌಲ್ಯ 3.7 ಬಿಲಿಯನ್ ಡಾಲರ್(ಸುಮಾರು 27,000 ಕೋ. ರೂ.)ಗಳಷ್ಟಾಗಿತ್ತು ಎಂದು ಫೋಬ್ಸ್ì ವರದಿ ಮಾಡಿತ್ತು. ಆದರೆ ಅಧ್ಯಕ್ಷರಾಗಿದ್ದ 4 ವರ್ಷಗಳ ಅವಧಿಯಲ್ಲಿ 1.2 ಬಿಲಿಯನ್ ಡಾಲರ್ (ಸುಮಾರು 8,770 ಕೋ. ರೂ.) ಕಡಿಮೆಯಾಗಿದೆ.
ಟ್ರಂಪ್ ಸಂಪತ್ತು
ಟ್ರಂಪ್ ಕಂಪೆನಿ ಮುಂಬಯಿ, ಪುಣೆ, ಕೋಲ್ಕತಾ ಮತ್ತು ಗುರ್‌ಗಾಂವ್‌ಗಳಲ್ಲಿ ಟ್ರಂಪ್ ಟವರ್(ಬಹುಮಹಡಿ ಕಟ್ಟಡ)ಗಳಿವೆ. ವರದಿಗಳ ಪ್ರಕಾರ 4,400 ಚದರ ಅಡಿ ವಿಸ್ತೀರ್ಣದ ಫ್ಲ್ಯಾಟ್‌ನ ಆರಂಭಿಕ ಬೆಲೆ 15 ಕೋ. ರೂ. ಇದ್ದು, ರಣಬೀರ್ ಕಪೂರ್ ಸಹಿತ ಅನೇಕ ಬಾಲಿವುಡ್ ತಾರೆಯರು ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ.
ಭಾರತದಲ್ಲಿ ಟ್ರಂಪ್ ಹೂಡಿಕೆ ಮೌಲ್ಯ 10,000 ಕೋ. ರೂ.
ಉತ್ತರ ಅಮೆರಿಕವನ್ನು ಹೊರತು ಪಡಿಸಿದರೆ ಟ್ರಂಪ್ ಅವರ ರಿಯಲ್ ಎಸ್ಟೇಟ್ ವ್ಯವಹಾರ ಇರುವುದು ಭಾರತದಲ್ಲಿ. ಅವರ ಕಂಪೆನಿ “ದಿ ಟ್ರಂಪ್ ಆರ್ಗನೈಸೇಶನ್’ 2013ರಲ್ಲಿ ಭಾರತೀಯ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಪ್ರವೇಶಿಸಿತು. ಭಾರತೀಯ ಕಂಪೆನಿಗಳೊಂದಿಗೆ 1.5 ಬಿಲಿಯನ್ ಡಾಲರ್ (ಸುಮಾರು 10 ಸಾವಿರ ಕೋ. ರೂ.) ಮೌಲ್ಯದ ಐಷಾರಾಮಿ ವಸತಿ ಯೋಜನೆಗಳನ್ನು ಪ್ರಾರಂಭಿಸಿತು. ಭಾರತದಲ್ಲಿನ ವ್ಯವಹಾರದಿಂದ ಟ್ರಂಪ್ ಅವರು ಸುಮಾರು 168 ಕೋ. ರೂ. ಆದಾಯವನ್ನು ಗಳಿಸುತ್ತಿದ್ದಾರೆ. ಭಾರತದಲ್ಲಿ ಅವರ ಕಂಪೆನಿ ಲೋಧಾ ಗ್ರೂಪ್, ಪಂಚಶೀಲ್ ರಿಯಾಲ್ಟಿ, ಟ್ರಿಬಿಕಾ, ಯುನಿಮಾರ್ಕ್, ಎಂ 3 ಎಂ ಇಂಡಿಯಾ, ಐಆರ್‌ಇಒ ಮೊದಲಾದ ರಿಯಲ್ ಎಸ್ಟೇಟ್ ಕಂಪೆನಿಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.
ತಂದೆಯಿಂದ 3,000 ಕೋಟಿ ರೂ. ಆಸ್ತಿ
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಟ್ರಂಪ್ ಅವರ ತಂದೆ ಫ್ರೆಡ್ ಟ್ರಂಪ್ ಅವರಿಂದ 413 ಮಿಲಿಯನ್ ಡಾಲರ್ (ಸುಮಾರು 3,000 ಕೋ. ರೂ.) ಮೌಲ್ಯದ ಆಸ್ತಿಯನ್ನು ಪಡೆದಿದ್ದರು. ಈಗ ಡೊನಾಲ್ಡ್ ಟ್ರಂಪ್ ಅವರು ನೋಡಿಕೊಳ್ಳುತ್ತಿರುವ “ಟ್ರಂಪ್ ಆರ್ಗನೈಸೇಶನ್’ ಕಂಪೆನಿ ಸ್ಥಾಪಿಸಿದವರು ಟ್ರಂಪ್ ತಂದೆ ಫ್ರೆಡ್ ಅವರು. ರಿಯಲ್ ಎಸ್ಟೇಟ್ ಹೊರತುಪಡಿಸಿದಂತೆ ಹೋಟೆಲ್, ಗಾಲ್ಫ್ ಮತ್ತು ಜೀವನ ಶೈಲಿಗೆ ಸಂಬಂಧಿಸಿದ ವ್ಯವಹಾರಗಳನ್ನು ಈ ಕಂಪೆನಿ ನಡೆಸುತ್ತಿದೆ.
ಕೋವಿಡ್‌ನಿಂದ ನಷ್ಟ ಅನುಭವಿಸಿದ ಟ್ರಂಪ್
ಲಾಕ್‌ಡೌನ್‌ನಿಂದ ಟ್ರಂಪ್ ಅವರ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ದೊಡ್ಡ ಹಾನಿಯುಂಟಾಗಿದೆ. 2020ರ ಮಾರ್ಚ್‌ನಲ್ಲಿ ಅವರ ಆಸ್ತಿಯ ಮೌಲ್ಯದಲ್ಲಿ 100 ಮಿಲಿಯನ್ ಡಾಲರ್(ಸುಮಾರು 7,300 ಕೋ. ರೂ.) ಇಳಿಕೆಯಾಗಿದೆ. 2020ರ ಮಾ. 1ರ ವೇಳೆಗೆ ಅವರ ಒಟ್ಟು ಆಸ್ತಿ 310 ಮಿಲಿಯನ್ ಡಾಲರ್ (ಸುಮಾರು 22,669 ಕೋ. ರೂ.)ಗಳಷ್ಟಿತ್ತು. 2020ರ ಮಾರ್ಚ್ 18ರ ವೇಳೆಗೆ ಇದು 210 ಮಿಲಿಯನ್ ಡಾಲರ್ (ಸುಮಾರು 15,356 ಕೋ. ರೂ.) ಗೆ ಇಳಿಕೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.