Sena v/s Sena: ನಿಜವಾದ ಶಿವಸೇನೆ ಯಾರದ್ದು- ಸ್ಪೀಕರ್ ನೀಡಿದ ತೀರ್ಪಿನಲ್ಲೇನಿದೆ?
ನಿಜವಾದ ಶಿವಸೇನೆ ಯಾರು ಎಂದು ನಿರ್ಧರಿಸುವ ಹಕ್ಕು ನನಗಿದೆ
Team Udayavani, Jan 10, 2024, 6:06 PM IST
ಮುಂಬೈ: ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರದ ಶಿವಸೇನೆ v/s ಶಿವಸೇನೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ಸ್ಪೀಕರ್ ರಾಹುಲ್ ನಾರ್ವೇಕರ್ ಬುಧವಾರ (ಜನವರಿ 10) ಸಂಜೆ ತೀರ್ಪನ್ನು ಪ್ರಕಟಿಸಿದ್ದಾರೆ.
ನಿಜವಾದ ಶಿವಸೇನೆ ಯಾರದ್ದು-ಸ್ಪೀಕರ್ ಹೇಳಿದ್ದೇನು?
ನಾಯಕತ್ವದ ಬಗ್ಗೆ ಎರಡೂ ಬಣಗಳು ವಿಭಿನ್ನ ದೃಷ್ಟಿಕೋನ ಹೊಂದಿದೆ. 2018ರ ತಿದ್ದುಪಡಿ ಕಾಯ್ದೆಯನ್ನು ಎರಡೂ ಬಣಗಳು ಒಪ್ಪಿಕೊಂಡಿವೆ. ವಿವಾದ ಸೃಷ್ಟಿಗೂ ಮೊದಲಿದ್ದ ನಾಯಕತ್ವ ರಚನೆಯನ್ನೂ ಪರಿಗಣಿಸಬೇಕಾಗುತ್ತದೆ. ಶಿವಸೇನೆ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರ ಘಟನೆಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತಿದೆ.
ಅರ್ಜಿದಾರ ಉದ್ಧವ್ ಠಾಕ್ರೆ ಅವರ ಪತ್ರ ಪ್ರಸ್ತುತವಾಗಿಲ್ಲ. ಯಾಕೆಂದರೆ ಉದ್ಧವ್ ಠಾಕ್ರೆ ಅವರ 2018ರ ಸಂವಿಧಾನ ಸ್ವೀಕಾರರ್ಹವಲ್ಲ. ತಿದ್ದುಪಡಿ ಒಪ್ಪಲು ಸಾಧ್ಯವಿಲ್ಲ. 2018ರ ಸಂವಿಧಾನ ಗಣನೆಗೆ ತೆಗೆದುಕೊಳ್ಳಬೇಕೆಂಬುದನ್ನು ಒಪ್ಪಲ್ಲ. ಆಯೋಗದ ದಾಖಲೆ ಪ್ರಕಾರ ಶಿಂಧೆ ಬಣ ನಿಜವಾದ ಶಿವಸೇನೆಯಾಗಿದೆ. ಏಕನಾಥ್ ಶಿಂಧೆ ಅವರನ್ನು ಪಕ್ಷದಿಂದ ವಜಾಗೊಳಿಸುವ ಅಧಿಕಾರ ಉದ್ಧವ್ ಠಾಕ್ರೆಗಿಲ್ಲ. ನಿಜವಾದ ಶಿವಸೇನೆ ಯಾರು ಎಂದು ನಿರ್ಧರಿಸುವ ಹಕ್ಕು ನನಗಿದೆ ಎಂಬುದು ಸ್ಪೀಕರ್ ನಾರ್ವೇಕರ್ ಪ್ರತಿಪಾದಿಸುವ ಮೂಲಕ ಶಿಂಧೆ ಬಣ ನಿಜವಾದ ಶಿವಸೇನೆ ಎಂಬ ತೀರ್ಪು ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಶಿಂಧೆ ಹಾಗೂ ಉದ್ಧವ್ ಬಣದ ಶಾಸಕರು ಉಪಸ್ಥಿತರಿದ್ದರು.
ಏನಿದು ಅನರ್ಹತೆ ಜಟಾಪಟಿ:
ಏಕನಾಥ್ ಶಿಂಧೆ ಬಣದ ಶಾಸಕರು ಪಕ್ಷ ತೊರೆದ ನಂತರ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಮಹಾವಿಕಾಸ ಅಘಾಡಿ ನೇತೃತ್ವದ ಮೈತ್ರಿ ಸರ್ಕಾರ ಪತನಗೊಂಡಿತ್ತು. ನಂತರ ಏಕನಾಥ್ ಶಿಂಧೆ ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡಿದ್ದು, ಶಿಂಧೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಮತ್ತು ಶಿಂಧೆ ಬಣ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದವು. ಈ ಕುರಿತು ಸ್ಪೀಕರ್ ನಾರ್ವೇಕರ್ ತೀರ್ಪು ಪ್ರಕಟಿಸಿದ್ದಾರೆ. ಶಿವಸೇನೆ ಶಾಸಕರ ಪಕ್ಷಾಂತರ ಪ್ರಕರಣದ ಕುರಿತು ಜನವರಿ 10ರೊಳಗೆ ತೀರ್ಪು ಪ್ರಕಟಿಸುವಂತೆ ಸುಪ್ರೀಂಕೋರ್ಟ್ ಗಡುವು ವಿಧಿಸಿತ್ತು. ಇದೀಗ ಸ್ಪೀಕರ್ ತೀರ್ಪು ನೀಡಿದ್ದು, ಉದ್ಧವ್ ಠಾಕ್ರೆ ಬಣ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.