ಮಕ್ಕಳಿಗೆ ಸೂಕ್ತವಲ್ಲದ ಪುಸ್ತಕ ಪೂರೈಕೆ : ನಿರೀಕ್ಷಿತ ಯಶ ನೀಡದ ಸರಕಾರದ ಯೋಜನೆ
Team Udayavani, Feb 22, 2021, 5:50 AM IST
ಕುಂದಾಪುರ : ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಆರಂಭಿಸಿರುವ ಮಹತ್ವಾಕಾಂಕ್ಷಿ “ಓದುವ ಬೆಳಕು ಯೋಜನೆ’ಯು ಮಕ್ಕಳ ಕಲಿಕೆಗೆ ಸೂಕ್ತವಲ್ಲದ ಪುಸ್ತಕಗಳನ್ನು ಪೂರೈಕೆ ಮಾಡುತ್ತಿರುವುದರಿಂದ ಫಲ ನೀಡುತ್ತಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಸೂಕ್ತವಲ್ಲದ ಪುಸ್ತಕ ನೀಡಿರುವುದರಿಂದ ಈ ಯೋಜನೆಯು ಕುಂದಾಪುರ, ಬೈಂದೂರು
ಭಾಗದಲ್ಲಿ ಅಷ್ಟೇನೂ ಫಲ ನೀಡುತ್ತಿಲ್ಲ.
ಕೊರೊನಾ ಸಮಯದಲ್ಲಿ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತ ರಾಗಬಾರದು ಎನ್ನುವ ಕಾರಣದಿಂದ ಈ ಓದುವ ಬೆಳಕು ಯೋಜನೆ ಆರಂಭಿಸ ಲಾಗಿತ್ತು. ಗ್ರಾಮೀಣ ಗ್ರಂಥಾಲಯದಲ್ಲಿ 6ರಿಂದ 18 ವರ್ಷಗಳ ವಿದ್ಯಾರ್ಥಿಗಳ ಉಚಿತ ನೋಂದಣಿ ಮಾಡಿ ಅವರಿಗೆ ಪುಸ್ತಕ ವಿತರಿಸುವ ಯೋಜನೆ ಇದಾಗಿದೆ. ಆದರೆ ವಿದ್ಯಾರ್ಥಿಗಳು ಕೇಳುವ ಪುಸ್ತಕ ಗಳನ್ನು ನೀಡಲು ಆಗದೆ ಗ್ರಂಥಾಲಯ ಸಿಬಂದಿ ಪೇಚಿಗೆ ಸಿಲುಕುತ್ತಿದ್ದಾರೆ.
ಸೂಕ್ತವಲ್ಲದ ಪುಸ್ತಕ
ಗ್ರಾಮೀಣ ಗ್ರಂಥಾಲಯಗಳು ಹಿಂದಿನಿಂದಲೂ ಕಳಪೆ ಗ್ರಂಥಗಳಿಂದ ತುಂಬಿ ತುಳುಕುತ್ತಿವೆ. ಇನ್ನು ಓದುವ ಬೆಳಕು
ಯೋಜನೆಯಡಿ ಗ್ರಾಮೀಣ ಗ್ರಂಥಾಲಯಗಳಿಗೆ ಸುಮಾರು 700ರಿಂದ 750 ಪುಸ್ತಕಗಳನ್ನು ಮಕ್ಕಳಿಗಾಗಿ ಪೂರೈಸಲಾಗಿದೆ.
ಇದರಲ್ಲಿ ಅಭಿನಂದನ ಗ್ರಂಥ, ಕವನ ಸಂಕಲನ ಬಿಟ್ಟರೆ ಶಿವರಾಮ ಕಾರಂತ ರಂತಹ ಬರೆದ ಕಾದಂಬರಿಗಳು ಇಲ್ಲ. ವಿದ್ಯಾರ್ಥಿಗಳು ಕೇಳುವ ಪಠ್ಯಪುಸ್ತಕ, ಕಿರುಚಿತ್ರಕಥಾ ಪುಸ್ತಕ, ಕ್ವಿಜ್, ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು, ವ್ಯಕ್ತಿಗಳ ಜೀವನ ಚರಿತ್ರೆ ಪುಸ್ತಕ ಗಳು ಕಡಿಮೆ ನೀಡಲಾಗಿದೆ.
ಕವನ ಸಂಗ್ರಹ, ಕಳಪೆ
ಸಾಹಿತ್ಯ ಪುಸ್ತಕಗಳೇ ಹೆಚ್ಚಿವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಯುವಕ- ಯುವತಿಯರಿಗೆ ಪೂರಕವಾದ ಪುಸ್ತಕಗಳನ್ನು ಕಡಿಮೆ ನೀಡಲಾಗಿದೆ.
ಹೆಮ್ಮಾಡಿಯಲ್ಲಿರುವ ಗ್ರಾಮೀಣ ಗ್ರಂಥಾಲಯದಲ್ಲಿಯೇ ಕಟ್ಟು, ಹೆಮ್ಮಾಡಿ, ಕಟ್‌ಬೆಲೂ¤ರು, ಸಂತೋಷ್ ನಗರ ಸೇರಿದಂತೆ ಸುತ್ತಮುತ್ತಲಿನ ಶಾಲೆಗಳ ಸುಮಾರು 124 ಮಂದಿ ಹೆಸರನ್ನು ನೋಂದಾಯಿಸಿದ್ದಾರೆ.
ಆದರೆ ಇವರಲ್ಲಿ ಅನೇಕ ಮಕ್ಕಳು ತಮ್ಮ ಆಸಕ್ತಿಯ ಕಥೆ, ಕಾದಂಬರಿಗಳನ್ನು ಕೇಳಿದ್ದು, ಅದ್ಯಾವುದೂ ಇಲಾಖೆಯಿಂದ ಪೂರೈಸಿದ್ದರಲ್ಲಿ ಇರಲಿಲ್ಲ.
ಸೂಕ್ತ ಪುಸ್ತಕ ಖರೀದಿಗೆ ಪ್ರಯತ್ನ
ಗ್ರಾಮೀಣ ಭಾಗದಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗುವಂತಹ ಪುಸ್ತಕಗಳನ್ನು ಖರೀದಿ ಮಾಡಿ, ಗ್ರಾಮೀಣ ಗ್ರಂಥಾಲಯಗಳಿಗೆ ನೀಡಲಾಗುವುದು. ಈ ಬಗ್ಗೆ ಎಲ್ಲ ಕಡೆಯಿಂದ ಮಾಹಿತಿ ಪಡೆದು, ಮುಂದಿನ ದಿನಗಳಲ್ಲಿ ಅಗತ್ಯವಿರುವಂತಹ ಪುಸ್ತಕಗಳನ್ನೇ ಪೂರೈಕೆ ಮಾಡಲಾಗುವುದು.
-ಕಿರಣ್ ಪೆಡ್ನೆಕರ್, ಜಿ.ಪಂ. ಉಪ ಕಾರ್ಯದರ್ಶಿ, ಉಡುಪಿ
ಪ್ರಯೋಜನ ಆಗುವಂತಿರಲಿ
ಗ್ರಂಥ ಖರೀದಿ ನೆಪದಲ್ಲಿ ಗ್ರಂಥಾಲಯ ಇಲಾಖೆ ಕೋಟ್ಯಂತರ ರೂ. ಅವ್ಯವಹಾರದಲ್ಲಿ ನಿರತವಾಗಿದ್ದು, ಇದನ್ನು ತಡೆಗಟ್ಟಬೇಕಾಗಿದೆ. ಗ್ರಾಮೀಣ ಗ್ರಂಥಾಲಯಗಳ ಗ್ರಂಥ ಖರೀದಿ ಹಕ್ಕು ಪಂಚಾಯತ್‌ರಾಜ್ ಇಲಾಖೆಗೆ ನೀಡುವಂತಾಗಬೇಕು. ಇದರೊಂದಿಗೆ ಈ ಓದುವ ಬೆಳಕು ಯೋಜನೆಯಡಿ ಮಕ್ಕಳಿಗೆ ಪ್ರಯೋಜನವಾಗುವಂತಹ ಪುಸ್ತಕಗಳನ್ನು ನೀಡಲಿ.
-ಸುರೇಶ್ ಹೆಮ್ಮಾಡಿ, ಅಧ್ಯಕ್ಷರು, ಗ್ರಾಮೀಣ ಗ್ರಂಥಾಲಯ ನೌಕರರ ಸಂಘ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
MUST WATCH
ಹೊಸ ಸೇರ್ಪಡೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.