ಸಾವಿರ ಕೋಟಿ ರೂ.ವೆಚ್ಚದ ಕಾಂಟಿನೆಂಟಲ್ ಆರ್ & ಡಿ ಕೇಂದ್ರ ಉದ್ಘಾಟನೆ
ಇಂತಹ ಕಾರುಗಳು ಆಧುನಿಕ ಜೀವನ ಶೈಲಿಯಲ್ಲಿ ವರದಾನ : ಸಚಿವ ಡಾ.ಅಶ್ವತ್ಥನಾರಾಯಣ
Team Udayavani, Nov 23, 2022, 3:50 PM IST
ಬೆಂಗಳೂರು: ವಾಹನ ತಯಾರಿಕಾ ಕ್ಷೇತ್ರದಲ್ಲಿ ಅಗ್ರಗಣ್ಯವಾಗಿರುವ ಕಾಂಟಿನೆಂಟಲ್ ಕಂಪನಿಯು 1,000 ಕೋಟಿ ರೂಪಾಯಿ ವೆಚ್ಚದಲ್ಲಿ ಎಲೆಕ್ಟ್ರಾನಿಕ್ ಸಿಟಿ ಸಮೀಪ ನಿರ್ಮಿಸಿರುವ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಚಾಲನೆ ನೀಡಿದರು.ಹೊಸೂರು ರಸ್ತೆಗೆ ಹೊಂದಿಕೊಂಡಿರುವ ಕಾಂಟಿನೆಂಟಲ್ ಟೆಕ್ನಿಕಲ್ ಸೆಂಟರ್ ನಲ್ಲಿ ಈ ಕೇಂದ್ರ ಕೆಲಸ ಮಾಡಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಬೆಂಗಳೂರು ಸೇರಿದಂತೆ ನಮ್ಮ ನಗರಗಳಲ್ಲಿ ಇನ್ನು ಕೆಲವೇ ವರ್ಷಗಳವರೆಗೆ ಸಂಚಾರ ವ್ಯವಸ್ಥೆ ಬದಲಾಗಲಿದ್ದು, ಪರಿಸರಸ್ನೇಹಿ ವಾಹನಗಳು ರಸ್ತೆಗಿಳಿಯಲಿವೆ. ಈ ಪರಿವರ್ತನೆಯಲ್ಲಿ ಕಾಂಟಿನೆಂಟಲ್ ಕಂಪನಿಯು ನಿರ್ಣಾಯಕ ಪಾತ್ರ ವಹಿಸಲಿದೆ ಎಂದರು.
ಕಾಂಟಿನೆಂಟಲ್ ಕಂಪನಿಯ ಈ ಸಂಶೋಧನಾ ಕೇಂದ್ರದಲ್ಲಿ 6,500 ಸಂಶೋಧಕರು ಮತ್ತು ತಂತ್ರಜ್ಞಾನ ಪರಿಣತರಿಗೆ ಅವಕಾಶವಿದೆ. ನಗರದಲ್ಲಿ ಈಗಾಗಲೇ 450 ಕಂಪನಿಗಳ ಆರ್ ಅಂಡ್ ಡಿ ಕೇಂದ್ರಗಳಿದ್ದು, ನಮ್ಮಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯ ಪರಿಸರವಿದೆ ಎಂದರು.
ಪ್ರವರ್ಧಮಾನಕ್ಕೆ ಬರುತ್ತಿರುವ ಎಲ್ಲ ತಂತ್ರಜ್ಞಾನ ಆಧಾರಿತ ಉದ್ದಿಮೆಗಳೆಗೆ ಸಂಬಂಧ ಪಟ್ಟಂತೆಯೂ ರಾಜ್ಯದಲ್ಲಿ ಪಾರದರ್ಶಕ ಮತ್ತು ಸಮಕಾಲೀನ ನೀತಿಗಳನ್ನು ಹೊರತರಲಾಗಿದೆ. ಇಂತಹ ಉಪಕ್ರಮಗಳು ಬೇರೆ ರಾಜ್ಯಗಳಲ್ಲಿ ಇಲ್ಲ. ಕರ್ನಾಟಕವು ಹೂಡಿಕೆ ಸೇರಿದಂತೆ ಆರ್ ಅಂಡ್ ಡಿ ವಿಚಾರದಲ್ಲೂ ಮುಂಚೂಣಿಯಲ್ಲಿದೆ ಎಂದರು.
ಕಾಂಟಿನೆಂಟಲ್ ಇಂಡಿಯಾ ಕಂಪನಿಯು 2009ರಿಂದಲೂ ಬೆಂಗಳೂರಿನಲ್ಲಿ ಸಂಶೋಧನಾ ಚಟುವಟಿಕೆಗಳನ್ನು ನಡೆಸುತ್ತಿದೆ. ಈಗ ಅಭಿವೃದ್ಧಿ ಪಡಿಸಿರುವ ಕೇಂದ್ರವು ವಾಹನ ತಯಾರಿಕಾ ಕಂಪನಿಗಳಿಗೆ ಮಹತ್ತ್ವದ ತಾಂತ್ರಿಕ ನೆರವನ್ನು ನೀಡಲಿದೆ. ಹಾಗೆಯೇ ರಾಜ್ಯದಲ್ಲಿ ಇರುವ ಗುಣಮಟ್ಟದ ಶಿಕ್ಷಣ ಮತ್ತು ಎಂಜಿನಿಯರುಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಜರ್ಮನಿಯ ಕಾನ್ಸುಲ್ ಜನರಲ್ ಅಕಿಂ ಬರ್ಕಾರ್ಟ್, ಕಾಂಟಿನೆಂಟಲ್ ಕಂಪನಿಯ ಭಾರತ ಘಟಕದ ಅಧ್ಯಕ್ಷ ಹಾಗೂ ಸಿಇಒ ಪ್ರಶಾಂತ್ ದೊರೆಸ್ವಾಮಿ, ಕಂಪನಿಯ ತಾಂತ್ರಿಕ ಕೇಂದ್ರದ ಮುಖ್ಯಸ್ಥೆ ಲತಾ ಚೆಂಬ್ರಕಳಂ ಮುಂತಾದವರು ಉಪಸ್ಥಿತರಿದ್ದರು.
ಸೆನ್ಸರ್ ಕಾರಿನಲ್ಲಿ ಮುದ ಅನುಭವಿಸಿದ ಸಚಿವರು
ಸಚಿವ ಅಶ್ವತ್ಥ ನಾರಾಯಣ ಅವರು ಕಾಂಟಿನೆಂಟಲ್ ಇಂಡಿಯಾ ಕಂಪನಿಯ ಆವರಣದಲ್ಲಿ, ಸಂಪೂರ್ಣವಾಗಿ ಸೆನ್ಸರ್ ಆಧಾರದ ಮೇಲೆ ಕೆಲಸ ಮಾಡುವ ಕಾರಿನಲ್ಲಿ ಒಂದು ಸುತ್ತು ಹಾಕಿ, ಮುದ ಅನುಭವಿಸಿದರು.
ಸ್ಟಿಯರಿಂಗ್ ಅನ್ನು ಮುಟ್ಟಬೇಕಿಲ್ಲದ, ಎದುರುಗಡೆ ವಾಹನ ಬಂದರೆ ತಾನಾಗಿಯೇ ನಿಲ್ಲುವ, ಸಂಚಾರ ದಟ್ಟಣೆಗೆ ತಕ್ಕಂತೆ ತನ್ನ ವೇಗವನ್ನು ತಾನೇ ನಿರ್ಧರಿಸಿಕೊಳ್ಳುವ ಈ ಕಾರ್ ನಲ್ಲಿ ಅಳವಡಿಸಿರುವ ತಂತ್ರಜ್ಞಾನ ಕಂಡು ಅವರು ರೋಮಾಂಚಿತರಾದರು.
ಕಾಂಟಿನೆಂಟಲ್ ಕಂಪನಿಯ ಭಾರತದ ಅಧ್ಯಕ್ಷ ಹಾಗೂ ಸಿಇಒ ಪ್ರಶಾಂತ್ ದೊರೆಸ್ವಾಮಿ ಅವರು ಈ ವಿಶೇಷ ಕಾರನ್ನು ಚಾಲನೆ ಮಾಡಿದರು.
ಈ ಬಗ್ಗೆ ಮಾತನಾಡಿದ ಅವರು, “ಇಂತಹ ಕಾರುಗಳು ಆಧುನಿಕ ಜೀವನ ಶೈಲಿಯಲ್ಲಿ ವರದಾನವಾಗಲಿವೆ. ಇದರಿಂದ ಮಾಲಿನ್ಯ ಇತ್ಯಾದಿ ಸಮಸ್ಯೆಗಳು ಸಹ ಇಲ್ಲ. ಜತೆಗೆ ಮನುಷ್ಯನ ಸಮಯ ಇದರಿಂದ ಉಳಿಯುತ್ತದೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.