ಭಾರತದ ಆಟಗಾರರ ಗಾಯದ ಸಮಸ್ಯೆಗೆ ಐಪಿಎಲ್ ಕೂಟವೇ ಕಾರಣ : ಲ್ಯಾಂಗರ್
Team Udayavani, Jan 13, 2021, 10:15 PM IST
ಬ್ರಿಸ್ಬೇನ್ : ಆಸ್ಟ್ರೇಲಿಯ ಪ್ರವಾಸದಲ್ಲಿರುವ ಭಾರತದ ಆಟಗಾರರಿಗೆ ಸತತ ಗಾಯದ ಸಮಸ್ಯೆ ಕಾಡಲು ಐಪಿಎಲ್ ಕೂಟವೇ ಕಾರಣ ಎಂದು ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
“ಈ ಸರಣಿಯಲ್ಲಿ ಅದೆಷ್ಟು ಆಟಗಾರರು ಗಾಯದ ಸಮಸ್ಯೆ ಎದುರಿಸಿದರೆಂಬುದು ನಿಜಕ್ಕೂ ಯೋಚಿಸಬೇಕಾದ ಸಂಗತಿ. ಸೀಮಿತ ಓವರ್‌ಗಳ ಸರಣಿಯಲ್ಲಿ ನಮ್ಮ ಆಟಗಾರರು, ಟೆಸ್ಟ್ ಸರಣಿಯಲ್ಲಿ ಭಾರತದ ಆಟಗಾರರು ಗಾಯಗೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಐಪಿಎಲ್. ಮಹತ್ವದ ಸರಣಿಗಗೂ ಮುನ್ನ ದೀರ್ಘಾವಧಿಯ ಐಪಿಎಲ್ ಟೂರ್ನಿ ನಡೆಸಿದ್ದರಿಂದಲೇ ಆಟಗಾರರು ಗಾಯದ ಸಮಸ್ಯೆಗೆ ಸಿಲುಕಿದರು. ಕಳೆದ ಐಪಿಎಲ್ ಸೂಕ್ತ ಸಮಯದಲ್ಲಿ ನಡೆಯಲಿಲ್ಲ’ ಎಂದು ಲ್ಯಾಂಗರ್ ದೂರಿದರು.
ಇದನ್ನೂ ಓದಿ:ಶಿರಾಡಿ ಘಾಟಿಯಲ್ಲಿ ಖ್ಯಾತ ತುಳು ಚಿತ್ರ ನಟ ರೂಪೇಶ್ ಶೆಟ್ಟಿ ಕಾರು ಅಪಘಾತ
“ಐಪಿಎಲ್ ಅಂದರೆ ನನಗೂ ಇಷ್ಟ. ಯುವ ಆಟಗಾರರು ಇಂಗ್ಲಿಷ್ ಕೌಂಟಿಯಲ್ಲಿ ಆಡುತ್ತಿದ್ದನ್ನು ಮೊದಲು ಹೇಗೆ ನೋಡುತ್ತಿ¨ªೆನೋ, ಅದೇ ರೀತಿ ಈಗ ಯುವ ಆಟಗಾರರು ಐಪಿಎಲ್ ಆಡುವುದನ್ನು ಬಹಳ ಕುತೂಹಲದಿಂದ ವೀಕ್ಷಿಸುತ್ತೇನೆ. ಐಪಿಎಲ್ ಯುವ ಕ್ರಿಕೆಟಿಗರ ಪಾಲಿಗೆ ಉತ್ತಮ ವೇದಿಕೆ. ಆದರೆ ಇದನ್ನು ಯಾವ ಸಮಯದಲ್ಲಿ ಆಯೋಜಿಸಬೇಕು ಎಂಬುದು ಮುಖ್ಯ’ ಎಂದು ಲ್ಯಾಂಗರ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.