ಭಾರತ-ಇಂಗ್ಲೆಂಡ್‌ ಟೆಸ್ಟ್‌ ಸರಣಿ : ಭಾರತದ ರೂಟ್‌ ಸುಗಮವೇ?


Team Udayavani, Feb 5, 2021, 6:20 AM IST

ಭಾರತ-ಇಂಗ್ಲೆಂಡ್‌ ಟೆಸ್ಟ್‌ ಸರಣಿ : ಭಾರತದ ರೂಟ್‌ ಸುಗಮವೇ?

ಚೆನ್ನೈ : ಒಂದೆಡೆ ಆಸ್ಟ್ರೇಲಿಯವನ್ನು ಅವರದೇ ನೆಲದಲ್ಲಿ ಬಗ್ಗುಬಡಿದು ಬಂದ ಭಾರತ, ಇನ್ನೊಂದೆಡೆ ಶ್ರೀಲಂಕಾಕ್ಕೆ ವೈಟ್‌ವಾಶ್‌ ಮಾಡಿ ಏಶ್ಯನ್‌ ಟ್ರ್ಯಾಕ್‌ ಮೇಲೆ ಪಾರಮ್ಯ ಮೆರೆದ ಇಂಗ್ಲೆಂಡ್‌… ಈ ಎರಡು ತಂಡಗಳ ನಡುವಿನ ಮಹತ್ವದ ಟೆಸ್ಟ್‌ ಸರಣಿ ಶುಕ್ರವಾರದಿಂದ ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ಮೊದಲ್ಗೊಳ್ಳಲಿದೆ. ಕೊಹ್ಲಿ ಹಾಗೂ ರೂಟ್‌ ಪಡೆಗಳೆರಡೂ ಹಿಂದಿನ ಸರಣಿಯ ಜೋಶ್‌, ಪರಾಕ್ರಮ, ಕೆಚ್ಚನ್ನು ಮುಂದುವರಿಸಿಕೊಂಡು ಹೋದರೆ ಈ ಮುಖಾಮುಖೀ ನಿರೀಕ್ಷೆಗೂ ಮೀರಿದ ಕುತೂಹಲ ಸೃಷ್ಟಿಸುವುದು ಖಂಡಿತ.

ಈ ಸರಣಿ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವ್ಯಾಪ್ತಿಗೆ ಬರುವುದರಿಂದ ಭಾರತಕ್ಕೆ ಹೆಚ್ಚು ಮಹತ್ವದ್ದಾಗಿದೆ. ಭಾರತ ದ್ವಿತೀಯ ತಂಡವಾಗಿ ಫೈನಲ್‌ ಪ್ರವೇಶಿಸುವ ಹೆಚ್ಚಿನ ಅವಕಾಶ ಹೊಂದಿರುವುದೇ ಇದಕ್ಕೆ ಕಾರಣ. ಹಾಗೆಯೇ ಇದು ಸುದೀರ್ಘ‌ ಕೋವಿಡ್‌-19 ಬ್ರೇಕ್‌ ಬಳಿಕ ಭಾರತದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿಯೆಂಬ ಕಾರಣಕ್ಕೆ ಎಲ್ಲರನ್ನೂ ತುದಿಗಾಗಲಲ್ಲಿ ನಿಲ್ಲಿಸಿದೆ.

ವಿರಾಟ್‌ ಕೊಹ್ಲಿ ಮರಳಿ ಟೀಮ್‌ ಇಂಡಿಯಾದ ಚುಕ್ಕಾಣಿ ಹಿಡಿಯುವುದು, ಬುಮ್ರಾ ತವರಲ್ಲಿ ಮೊದಲ ಟೆಸ್ಟ್‌ ಆಡುವುದು, ಇಂಗ್ಲೆಂಡ್‌ ನಾಯಕ ಜೋ ರೂಟ್‌ 100ನೇ ಟೆಸ್ಟ್‌ ಆಡಲಿಳಿಯುವುದರಿಂದಲೂ ಮೊದಲ ಟೆಸ್ಟ್‌ ಪಂದ್ಯ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಬೇಸರವೆಂದರೆ, ವೀಕ್ಷಕರಿಗೆ ಪ್ರವೇಶ ಇಲ್ಲದಿರುವುದು. ಇದಕ್ಕಾಗಿ ದ್ವಿತೀಯ ಟೆಸ್ಟ್‌ ತನಕ ಕಾಯಬೇಕಿದೆ.

ವಿಶ್ವ ದರ್ಜೆಯ ಕ್ರಿಕೆಟಿಗರು
ವಿಶ್ವದ ಯಾವುದೇ ಟ್ರ್ಯಾಕ್‌ಗಳಿಗೂ ಒಗ್ಗಿಕೊಳ್ಳಬಲ್ಲ ಸಾಕಷ್ಟು ಮಂದಿ ವಿಶ್ವ ದರ್ಜೆಯ ಕ್ರಿಕೆಟಿಗರು ಇಂಗ್ಲೆಂಡ್‌ ತಂಡ ದಲ್ಲಿದ್ದಾರೆ. ರೂಟ್‌, ಸ್ಟೋಕ್ಸ್‌, ಬಟ್ಲರ್‌, ಆ್ಯಂಡರ್ಸನ್‌ ಮತ್ತು ಬ್ರಾಡ್‌ ಇವರಲ್ಲಿ ಪ್ರಮುಖರು. ಮೊಯಿನ್‌ ಅಲಿ, ಆರ್ಚರ್‌ ಕೂಡ ಅಪಾಯಕಾರಿಗಳು. ಉಳಿದವರೆಲ್ಲ “ಯಂಗ್‌ ಗನ್ಸ್‌’. ಪೋಪ್‌, ಲಾರೆನ್ಸ್‌, ಲಂಕೆಯಲ್ಲಿ ಮಿಂಚಿದ ಸ್ಪಿನ್‌ದ್ವಯರಾದ ಲೀಚ್‌ ಮತ್ತು ಬೆಸ್‌ ಭಾರತದ ಟರ್ನಿಂಗ್‌ ಟ್ರ್ಯಾಕ್‌ಗಳಲ್ಲೂ ಮ್ಯಾಜಿಕ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಇಂಗ್ಲೆಂಡಿನ ಓಪನಿಂಗ್‌ ಮಾತ್ರ ದುರ್ಬಲ. ಏನೇ ಆದರೂ ಕೊಹ್ಲಿ ಪಡೆ ಆಂಗ್ಲ ರನ್ನು ತೀವ್ರ ಎಚ್ಚರಿಕೆಯಿಂದ ನಿಭಾಯಿಸಬೇಕಾದುದು ಅಗತ್ಯ.

ಭಾರತದ ಕಾಂಬಿನೇಶನ್‌
ಈ ಸರಣಿಯಲ್ಲಿ ಭಾರತದ ಟೀಮ್‌ ಕಾಂಬಿನೇಶನ್‌ನಲ್ಲಿ ಕೆಲವು ಬದಲಾವಣೆ ಕಂಡುಬರಲಿದೆ. ಬ್ಯಾಟಿಂಗ್‌ ವಿಭಾಗದಲ್ಲಿ ತಲೆ ಕೆಡಿಸಿಕೊಳ್ಳಬೇಕಿಲ್ಲ.ರೋಹಿತ್‌-ಗಿಲ್‌, ಪೂಜಾರ, ಕೊಹ್ಲಿ, ರಹಾನೆ, ಪಂತ್‌… ಈ 6 ಸ್ಥಾನಕ್ಕೆ ಸಿಮೆಂಟ್‌ ಹಾಕಲಾಗಿದೆ. ಬೌಲಿಂಗ್‌ ವಿಭಾಗದಲ್ಲಿ ಅಶ್ವಿ‌ನ್‌, ಇಶಾಂತ್‌, ಬುಮ್ರಾ ಅನಿವಾರ್ಯ. ಉಳಿದೆರಡು ಸ್ಥಾನಗಳಿಗೆ ದೊಡ್ಡ ಸ್ಪರ್ಧೆಯೇ ಇದೆ. ಪಾಂಡ್ಯ, ಸುಂದರ್‌, ಠಾಕೂರ್‌, ಸಿರಾಜ್‌, ಪಟೇಲ್‌, ಕುಲದೀಪ್‌ ಅವರಲ್ಲಿ ಯಾರಿಗೆ ಲಕ್‌ ಹೊಡೆಯುತ್ತದೋ ನೋಡಬೇಕು. ಆಡುವ ಬಳಗದಿಂದ ಖಂಡಿತ ವಾಗಿಯೂ ಬೇರ್ಪಡುವವರೆಂದರೆ ರಾಹುಲ್‌, ಅಗರ್ವಾಲ್‌ ಮತ್ತು ಸಾಹಾ.

ಮೈಮರೆತರೆ ಅಪಾಯ!
ಅನುಮಾನವೇ ಇಲ್ಲ, ಭಾರತೀಯರು ಕಾಂಗರೂ ನೆಲದಲ್ಲಿ ತೋರ್ಪಡಿಸಿದ ಪರಾಕ್ರಮ ಈ ಸರಣಿಗೂ ಸ್ಫೂರ್ತಿಯಾಗಲಿದೆ. ಜತೆಗೆ ತವರಿನಂಗಳದ ಲಾಭವೂ ಇದೆ. ಆದರೆ ಯಾವುದೇ ಕಾರಣಕ್ಕೂ ಈ ಎರಡು ಅಂಶಗಳನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ, ಮೈಮರೆಯುವಂತಿಲ್ಲ. ಆಗ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ಹೀಗಾಗಿ ಟೀಮ್‌ ಇಂಡಿಯಾ ಪಾಲಿಗೆ ಇದು ನೂತನ ಆರಂಭ, ನೂತನ ಸವಾಲು.

ಇಲ್ಲಿ ಭಾರತದ ಟೀಮ್‌ ಕಾಂಬಿನೇಶನ್‌ ಬದಲಾಗಲಿದೆ. ಕೊಹ್ಲಿ, ಇಶಾಂತ್‌ ತಂಡಕ್ಕೆ ಮರಳಲಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಬಹಳ ಜಾಣ್ಮೆ ಹಾಗೂ ಅಷ್ಟೇ ಪ್ರಬುದ್ಧ ನಾಯಕತ್ವ ನಿಭಾಯಿಸಿದ ರಹಾನೆ ಇಲ್ಲಿ ಕೇವಲ ಬ್ಯಾಟ್ಸ್‌ಮನ್‌ ಹಾಗೂ ಉಪನಾಯಕರಾಗಿ ಇರುತ್ತಾರೆ. ಅವರೇ ಹೇಳಿದಂತೆ, ಆಸ್ಟ್ರೇಲಿಯ ಸರಣಿ ಈಗ ಇತಿಹಾಸ. ಭಾರತವೀಗ ಇಂಗ್ಲೆಂಡ್‌ ತಂಡಕ್ಕೆ ಗೌರವ ನೀಡಬೇಕಿದೆ.

ಹೌದು, ಆಸ್ಟ್ರೇಲಿಯಕ್ಕೆ ಹೋಲಿಸಿದರೆ ಇಂಗ್ಲೆಂಡ್‌ ಹೆಚ್ಚು ಬಲಿಷ್ಠ ಪಡೆ. ಶಿಸ್ತಿನ ಆಟಕ್ಕೆ ಹೆಸರುವಾಸಿ. ಕಾಂಗರೂಗಳಂತೆ ನಿಂದಿಸುವುದು, ಎದುರಾಳಿ ಆಟಗಾರರನ್ನು ಕೀಳಾಗಿ ಕಾಣುವುದು, ಹೇಗಾದರೂ ಮಾಡಿ ಗೆಲ್ಲಲು ವಾಮಮಾರ್ಗ ಹಿಡಿಯುವುದು ಇವರಿಗೆ ತಿಳಿದಿಲ್ಲ. ಆಂಗ್ಲರದ್ದೇನಿದ್ದರೂ ಸೀದಾ, ಸ್ವತ್ಛ ಆಟ.

ಟಾಪ್ ನ್ಯೂಸ್

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

12-google-search

Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?

Jaipur: 13 ಮಂದಿಯನ್ನು ಬಲಿ ಪಡೆದ ದುರಂತದಲ್ಲಿ LPG ಟ್ಯಾಂಕರ್ ಚಾಲಕ ಬದುಕುಳಿದಿದ್ದೇ ರೋಚಕ

ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Photos: ದುಬೈನಲ್ಲಿ ಸಾನಿಯಾ ಮಿರ್ಜಾ – ಮೊಹಮ್ಮದ್ ಶಮಿ ಜಾಲಿ ಮೂಡ್..‌ ಫೋಟೋ ವೈರಲ್.!

Viral Photos: ದುಬೈನಲ್ಲಿ ಸಾನಿಯಾ ಮಿರ್ಜಾ – ಮೊಹಮ್ಮದ್ ಶಮಿ ಜಾಲಿ ಮೂಡ್..‌ ಫೋಟೋ ವೈರಲ್.!

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.