“ವಿ’ ಆಕಾರದ ಚೇತರಿಕೆಯತ್ತ ಭಾರತ!
Team Udayavani, Feb 1, 2021, 6:20 AM IST
ಆರ್ಥಿಕ ಸ್ಥಿತಿ ಗಮನಾರ್ಹವಾಗಿ ಸದೃಢವಾಗುತ್ತಿದ್ದು, ಅದು “V ಆಕಾರದ’ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದೆ ಎಂದು ಶುಕ್ರವಾರ ಬಿಡುಗಡೆಯಾಗಿರುವ ಆರ್ಥಿಕ ಸಮೀಕ್ಷೆಯು ಪ್ರತಿಪಾದಿಸುತ್ತಿದೆ. ಹಾಗಿದ್ದರೆ ಏನು ಈ ” V ಆಕಾರದ’ ಚೇತರಿಕೆ? ಇಲ್ಲಿದೆ ಮಾಹಿತಿ…
ಆರ್ಥಿಕ ಕುಸಿತ, ಚೇತರಿಕೆಯ ವಿವಿಧ ರೂಪ
ಆರ್ಥಿಕ ಹಿಂಜರಿತ ಮತ್ತು ಚೇತರಿಕೆಯ ಗ್ರಾಫ್ ಅನ್ನು ರಚಿಸುವಾಗ ಅದು ವಿ, ಯು, ಎಲ್, ಡಬ್ಲ್ಯು, ಜೆ ಸಹಿತ ಅಸಂಖ್ಯಾಕ ಆಕಾರಗಳಲ್ಲಿ ಕಾಣಿಸ ಬಹುದು. ಪ್ರತಿಯೊಂದು ರೀತಿಯ ಆಕಾರವೂ ಒಂದು ದೇಶದ ಆರ್ಥಿಕ ಆರೋಗ್ಯವನ್ನು ಅಳೆಯುವ ಮಾಪನ. ಡಬ್ಲ್ಯು ಆಕಾರದ ಆರ್ಥಿಕ ಕುಸಿತವೆಂದರೆ, ದೇಶದ ಆರ್ಥಿಕತೆಯೊಂದರಲ್ಲಿ ವೇಗವಾಗಿ ಕುಸಿತ ಕಂಡು ಬಂದು ಅನಂತರ ಅದರಲ್ಲಿ ಚೇತರಿಕೆ ಲಕ್ಷಣಗಳು ಗೋಚರಿಸಿ ಮತ್ತೂಮ್ಮೆ ಆರ್ಥಿಕತೆ ಮುಗ್ಗರಿಸುತ್ತದೆ ಎಂದರ್ಥ. ಯು ಆಕಾರದ ಚೇತರಿಕೆಯೆಂದರೆ, ತೀವ್ರ ಕುಸಿತ ಕಂಡಿರುವ ಆರ್ಥಿಕತೆ ನಿರ್ದಿಷ್ಟ ಅವಧಿಯವರೆಗೆ ನಿಶ್ಚಲವಾಗಿದ್ದು, ಇದರ ಬೆನ್ನಲ್ಲೇ ತನ್ನ ಹಿಂದಿನ ಸ್ಥಿತಿಗೆ ಚೇತರಿಕೆ ಕಾಣುವುದು. ಈಗಲೂ ಕೆಲವು ಅರ್ಥಶಾಸ್ತ್ರಜ್ಞರು ಭಾರತವು ವಿ ಬದಲು ಯು ಆಕಾರದ ಚೇತರಿಕೆ ಕಾಣಬಹುದು ಎಂದು ಪ್ರತಿಪಾದಿಸುತ್ತಾರೆ.
ವಿ ಆಕಾರದ ಚೇತರಿಕೆ
ಹೆಸರೇ ಸೂಚಿಸುವಂತೆ, ಈ ಚೇತರಿಕೆಯು ವಿ ಆಕಾರದಲ್ಲಿ ಕಾಣಿಸುತ್ತದೆ. ಆರ್ಥಿಕ ಹಿಂಜರಿತದಿಂದಾಗಿ ದೇಶವೊಂದರ ಆರ್ಥಿಕತೆಯು ಹಠಾತ್ತನೆ ಕೆಳಕ್ಕೆ ಕುಸಿದು, ಅನಂತರ ಅಷ್ಟೇ ತ್ವರಿತವಾಗಿ ಮತ್ತು ಶಕ್ತಿಯುತವಾಗಿ ಚೇತರಿಸಿಕೊಂಡು ಮೇಲೆದ್ದಾಗ ಗ್ರಾಫ್ ವಿ ಆಕಾರದಲ್ಲಿ ಕಾಣುತ್ತದೆ. ಉದ್ಯೋಗ ದರಗಳು, ಜಿಡಿಪಿ, ಕೈಗಾರಿಕ ಉತ್ಪಾದನ ಸೂಚ್ಯಂಕಗಳಂಥ ಅಂಶಗಳನ್ನು ಆಧರಿಸಿ ಅರ್ಥಶಾಸ್ತ್ರಜ್ಞರು ಈ ಗ್ರಾಫ್ ಸಿದ್ಧಪಡಿಸುತ್ತಾರೆ. ವಿ ಆಕಾರದ ಚೇತರಿಕೆಯನ್ನು ಅತ್ಯುತ್ತಮ ಬೆಳವಣಿಗೆಯೆಂದು ಪರಿಗಣಿಸಲಾಗುತ್ತದೆ.
ಚೇತರಿಕೆಗೆ ಕಾರಣವೇನು?
ಖರೀದಿ, ಬೇಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಸುಧಾರಣ ಕ್ರಮಗಳು, ಉತ್ಪಾದನೆಯಲ್ಲಿ ಹೆಚ್ಚಳ, ಮೂಲ ಸೌಕರ್ಯಗಳಲ್ಲಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹಕಗಳು ಈ ಮಾದರಿಯ ಚೇತರಿಕೆ ಹಾಗೂ ಬೆಳವಣಿಗೆಗೆ ಕಾರಣವಾಗಲಿದೆ ಎಂದು ವಿತ್ತ ಸಚಿವರು ಮಂಡಿಸಿರುವ ಆರ್ಥಿಕ ಸಮೀಕ್ಷೆ ಹೇಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Atul Subhash Case: ಪತ್ನಿ ಮೇಲಿನ ಕೇಸ್ ರದ್ದತಿಗೆ ನಿರಾಕರಣೆ
Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್ಐ ಸಸ್ಪೆಂಡ್
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.