![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jun 21, 2023, 6:00 AM IST
ಬೆಂಗಳೂರು: ಮೊನ್ನೆಯಷ್ಟೇ ಇಂಟರ್ ಕಾಂಟಿನೆಂಟಲ್ ಫುಟ್‌ಬಾಲ್ ಪ್ರಶಸ್ತಿ ಎತ್ತಿದ ಸ್ಫೂರ್ತಿಯಲ್ಲಿರುವ ಭಾರತ ತಂಡ ಬುಧವಾರದಿಂದ 2023ರ ಸ್ಯಾಫ್ ಚಾಂಪಿಯನ್‌ಶಿಪ್’ನಲ್ಲಿ ಅದೃಷ್ಟಪರೀಕ್ಷೆಗೆ ಇಳಿಯಲಿದೆ. ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲೇ ಭಾರತ ತಂಡ ಪಾಕಿಸ್ಥಾನವನ್ನು ಎದುರಿಸಲಿದೆ.
8 ಬಾರಿ ಸ್ಯಾಫ್ ಪ್ರಶಸ್ತಿ ಜಯಿಸಿರುವ ಭಾರತ ಹಾಲಿ ಚಾಂಪಿಯನ್ ಕೂಡ ಹೌದು. 1993ರಲ್ಲಿ ಮೊದಲ ಸಲ ಕಪ್ ಎತ್ತಿತ್ತು. ಭಾರತ ಹೊರತುಪಡಿಸಿದರೆ ಇಲ್ಲಿ ಚಾಂಪಿಯನ್ ಆದ ತಂಡಗಳೆಂದರೆ ಮಾಲ್ಡೀವ್ಸ್ (2008, 2018) ಮತ್ತು ಬಾಂಗ್ಲಾದೇಶ (2003) ಮಾತ್ರ. ಇಲ್ಲಿನ ಪ್ರಶಸ್ತಿ ಫಿಫಾ ರ್‍ಯಾಂಕಿಂಗ್ ಅಂಕದ ಪ್ರಗತಿಯಲ್ಲಿ ಮುಖ್ಯ ಪಾತ್ರ ವಹಿಸಲಿದೆ.
ಸೋಮವಾರ ರಾತ್ರಿಯಷ್ಟೇ ವೀಸಾ ಲಭಿಸಿದ್ದರಿಂದ ಪಾಕಿಸ್ಥಾನ ತಂಡದ ಆಗಮನ ವಿಳಂಬಗೊಂಡಿತ್ತು. ಆದರೆ ಈ ಪಂದ್ಯ ನಿಗದಿತ ಸಮಯದಲ್ಲಿ ನಡೆಯಲಿದೆ (ರಾತ್ರಿ 7.30). ದಿನದ ಮೊದಲ ಪಂದ್ಯದಲ್ಲಿ ಕುವೈಟ್-ನೇಪಾಲ ಮುಖಾಮುಖೀ ಆಗಲಿವೆ (ಅ. 3.30).
ಭಾರತಕ್ಕೆ ಪಾಕಿಸ್ಥಾನ ತಂಡ ದೊಡ್ಡ ಸವಾಲೇನೂ ಅಲ್ಲ. ಆದರೆ ಈ ಕೂಟವನ್ನು ಅಬ್ಬರದಿಂದ ಆರಂಭಿಸಿ, ಉಳಿದ ತಂಡಗಳಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಭಾರತ ಮಾಡಬೇಕಿದೆ.
ಭಾರತ “ಎ’ ವಿಭಾಗದಲ್ಲಿ ಸ್ಥಾನ ಪಡೆ ದಿದೆ. ನೇಪಾಲ ಮತ್ತು ಕುವೈಟ್ ಈ ವಿಭಾ ಗದ ಉಳಿದೆರಡು ತಂಡಗಳು. ಲೆಬ ನಾನ್, ಮಾಲ್ಡೀವ್ಸ್, ಭೂತಾನ್ ಮತ್ತು ಬಾಂಗ್ಲಾದೇಶ “ಬಿ’ ವಿಭಾಗದಲ್ಲಿವೆ.
ದಾಖಲೆಯತ್ತ ಚೆಟ್ರಿ
ಭುವನೇಶ್ವರದಲ್ಲಿ ರವಿವಾರ ಮುಕ್ತಾಯಗೊಂಡ ಇಂಟರ್ ಕಾಂಟಿ ನೆಂಟಲ್ ಫುಟ್‌ಬಾಲ್ ಫೈನಲ್‌ನಲ್ಲಿ ಭಾರತ ತಂಡ ಲೆಬನನಾನ್‌ಗೆ ಸೋಲು ಣಿಸಿ ಚಾಂಪಿಯನ್ ಆಗಿ ಮೂಡಿ ಬಂದಿತ್ತು. ಇದು ಲೆಬನಾನ್ ವಿರುದ್ಧ ಭಾರತಕ್ಕೆ 46 ವರ್ಷಗಳ ಬಳಿಕ ಒಲಿದ ಜಯವಾಗಿತ್ತು. ನಾಯಕ, ನಂಬರ್ ವನ್ ಸ್ಟ್ರೈಕರ್ ಸುನೀಲ್ ಚೆಟ್ರಿ ಕೂಡ ಫೈನಲ್‌ನಲ್ಲಿ ಗೋಲು ಹೊಡೆದಿದ್ದರು. ಅವರು ಇದೇ ಲಯದಲ್ಲಿ ಸಾಗಿದರೆ ಭಾರತಕ್ಕೆ ಹೆಚ್ಚಿನ ಲಾಭವಿದೆ.
ಸುನೀಲ್ ಚೆಟ್ರಿ 137 ಪಂದ್ಯಗಳಿಂದ 87 ಗೋಲು ಬಾರಿಸಿದ್ದಾರೆ. ಇನ್ನು 3 ಗೋಲು ಹೊಡೆದರೆ ಅವರು ಏಷ್ಯಾ ದಲ್ಲೇ ಅತ್ಯಧಿಕ ಗೋಲು ಹೊಡೆದ ದಾಖಲೆಯನ್ನು ತಮ್ಮದಾಗಿಸಿಕೊಳ್ಳದ್ದಾರೆ. ಸದ್ಯ 89 ಗೋಲು ಬಾರಿಸಿರುವ ಮಲೇಷ್ಯಾದ ಮುಖ್ತರ್ ದಹರಿ ಅಗ್ರಸ್ಥಾನದಲ್ಲಿದ್ದಾರೆ.
ಭಾರತ ತಂಡ
ಗೋಲ್‌ಕೀಪರ್: ಗುರ್‌ಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ಫುರ್ಬ ಲಾಶೆಂಪ ಟೆಂಪ.
ಡಿಫೆಂಡರ್: ಸುಭಾಶಿಷ್ ಬೋಸ್, ಪ್ರೀತಂ ಕೋಟಲ್, ಸಂದೇಶ್ ಜಿಂಗಾನ್, ಅನ್ವರ್ ಅಲಿ, ಆಕಾಶ್ ಮಿಶ್ರಾ, ಮೆಹ್ತಾಬ್ ಸಿಂಗ್, ರಾಹುಲ್ ಭಿಕೆ.
ಮಿಡ್‌ಫಿಲ್ಡರ್: ಲಿಸ್ಟನ್ ಕೊಲಾಕೊ, ಆಶಿಕ್ ಕುರುನಿಯನ್, ಸುರೇಶ್ ಸಿಂಗ್ ವಾಂಗಮ್, ರೋಹಿತ್ ಕುಮಾರ್, ಉದಾಂತ್ ಸಿಂಗ್, ಅನಿರುದ್ಧ್ ಥಾಪ, ಎನ್. ಮಹೇಶ್ ಸಿಂಗ್, ನಿಖೀಲ್ ಪೂಜಾರಿ, ಜೀಕ್ಸನ್ ಸಿಂಗ್, ಸಹಾಲ್ ಅಬ್ದುಲ್ ಸಮದ್, ಲಾಲೆಂಗ್ಮಾವಿಯ ರಾಲ್ಟೆ, ಲಲ್ಲಿಯಂಜುವಾಲಾ ಚಂಗೆ, ರೋವಿನ್ ಬೋರ್ಗಸ್, ನಂದಕುಮಾರ್.
ಫಾರ್ವರ್ಡ್ಸ್: ಸುನೀಲ್ ಚೆಟ್ರಿ (ನಾಯಕ), ರಹೀಂ ಅಲಿ, ಇಶಾನ್ ಪಂಡಿತ್.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
You seem to have an Ad Blocker on.
To continue reading, please turn it off or whitelist Udayavani.