ವನಿತಾ ಏಷ್ಯಾ ಕಪ್‌ಗೆ ಬೆಂಬಿಡದ ಮಳೆ ಭಾರತ-ಪಾಕಿಸ್ಥಾನ ಪಂದ್ಯ ರದ್ದು
Team Udayavani, Jun 18, 2023, 5:30 AM IST
ಮಾಂಗ್ ಕಾಕ್ (ಹಾ.ಕಾಂಗ್): ಎಸಿಸಿ ವನಿತಾ ಎಮರ್ಜಿಂಗ್ ತಂಡಗಳ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಮಳೆ ಕಾಟದಿಂದ ಮುಕ್ತವಾಗುವ ಸಾಧ್ಯತೆ ಇಲ್ಲ. ಶನಿವಾರವೂ ಮಳೆ ಮುಂದುವರಿದಿದ್ದು, ಭಾರತ-ಪಾಕಿಸ್ಥಾನ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಹಾಂಕಾಂಗ್-ನೇಪಾಲ ನಡುವಿನ ದಿನದ ಮೊದಲ ಪಂದ್ಯಕ್ಕೂ ಇದೇ ಗತಿಯಾಯಿತು.
ಇದರೊಂದಿಗೆ ಲೀಗ್ ಸ್ಪರ್ಧೆ ಮುಗಿದಂತಾಯಿತು. 12 ಪಂದ್ಯಗಳಲ್ಲಿ ಫಲಿತಾಂಶ ದಾಖಲಾದದ್ದು ಐದಕ್ಕೆ ಮಾತ್ರ. ಉಳಿದ 7 ಪಂದ್ಯಗಳಲ್ಲಿ ಟಾಸ್ ಕೂಡ ಹಾರಿಸಲಾಗಲಿಲ್ಲ.
ಆದರೂ ನಾಕೌಟ್ ಸ್ಪರ್ಧೆಗಳಿಗೆ ವೇದಿಕೆ ಸಜ್ಜುಗೊಂಡಿದೆ. “ಎ” ವಿಭಾಗದಿಂದ ಭಾರತ, ಪಾಕಿಸ್ಥಾನ; “ಬಿ’ ವಿಭಾಗದಿಂದ ಬಾಂಗ್ಲಾದೇಶ, ಶ್ರೀಲಂಕಾ ತಂಡಗಳು ಉಪಾಂತ್ಯ ಪ್ರವೇಶಿವೆ. ಇಲ್ಲಿ ಭಾರತದ ಎದುರಾಳಿ ಶ್ರೀಲಂಕಾ. ಇನ್ನೊಂದು ಸೆಮಿಫೈನಲ್ ಪಾಕಿಸ್ಥಾನ-ಬಾಂಗ್ಲಾದೇಶ ನಡುವೆ ಸಾಗಲಿದೆ. ಲೀಗ್ ಹಂತದಲ್ಲಿ ಈ ನಾಲ್ಕೂ ತಂಡಗಳು ಒಂದೊಂದು ಗೆಲುವು ಸಾಧಿಸಿವೆ. ಉಳಿದೆರಡು ಪಂದ್ಯಗಳು ರದ್ದುಗೊಂಡಿವೆ.
ಭಾರತ ಉತ್ತಮ ರನ್‌ರೇಟ್ ಹೊಂದಿದ್ದ ಕಾರಣ “ಎ’ ವಿಭಾಗದ ಅಗ್ರಸ್ಥಾನ ಅಲಂಕರಿಸಿತು (5.425). ಪಾಕಿಸ್ಥಾನ (0.450) ದ್ವಿತೀಯ ಸ್ಥಾನಿಯಾಯಿತು.
“ಬಿ” ವಿಭಾಗದಲ್ಲೂ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಲಾ 4 ಅಂಕ ಗಳಿಸಿದವು. ರನ್‌ರೇಟ್‌ನಲ್ಲಿ ಬಾಂಗ್ಲಾ ಮುಂದಿತ್ತು (4.850). ಶ್ರೀಲಂಕಾಕ್ಕೆ ದ್ವಿತೀಯ ಸ್ಥಾನ ಲಭಿಸಿತು (0.090).
ಕೂಟದಿಂದ ಹೊರಬಿದ್ದ ತಂಡಗಳೆಂದರೆ ನೇಪಾಲ, ಹಾಂಕಾಂಗ್, ಯುಎಇ ಮತ್ತು ಮಲೇಷ್ಯಾ. ಸೆಮಿಫೈನಲ್ ಪಂದ್ಯಗಳು ಸೋಮವಾರ ನಡೆಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.