ಮೊದಲ ಕೋವಿಡ್ ಟೆಸ್ಟ್ ; ಟೀಮ್ ಇಂಡಿಯಾ ಪಾಸ್
Team Udayavani, Jan 30, 2021, 6:40 AM IST
ಚೆನ್ನೈ : ಪ್ರವಾಸಿ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಅಣಿಯಾಗಿರುವ ಭಾರತ ಕ್ರಿಕೆಟ್ ತಂಡ, ಇದಕ್ಕೂ ಮೊದಲು ಕೋವಿಡ್-19 ಟೆಸ್ಟ್ ಎದುರಿಸುತ್ತಿದೆ. ಮೊದಲ ಕೊರೊನಾ ಟೆಸ್ಟ್ ನಲ್ಲಿ ಎಲ್ಲರ ಫಲಿತಾಂಶವೂ ನೆಗೆಟಿವ್ ಬಂದಿದೆ ಎಂದು ಬಿಸಿಸಿಐ ತಿಳಿಸಿದೆ.
ಫೆ. 2ರ ಒಳಗೆ ಟೀಮ್ ಇಂಡಿಯಾ ಸದಸ್ಯರು ಮತ್ತು ಅಧಿಕಾರಿಗಳು ಇನ್ನೂ ಎರಡು ಕೋವಿಡ್-19 ಟೆಸ್ಟ್‌ಗೆ ಒಳಗಾಗಬೇಕಿದೆ.
ಎರಡೂ ತಂಡಗಳ ಆಟಗಾರರು ಚೆನ್ನೈಗೆ ಆಗಮಿಸಿದ್ದು, “ಲೀಲಾ ಪ್ಯಾಲೇಸ್ ಹೊಟೇಲ್’ನ ಜೈವಿಕ ಸುರಕ್ಷಾ ವಲಯದಲ್ಲಿ ತಂಗಿದ್ದಾರೆ. ಸ್ಟ್ರೆಂತ್ ಆ್ಯಂಡ್ ಕಂಡೀಷನಿಂಗ್ ತಜ್ಞರಾದ ನಿಕ್ ವೆಬ್ ಮತ್ತು ಸೋಹಮ್ ದೇಸಾಯಿ ತಂಡದ ಉಸ್ತುವಾರಿ ವಹಿಸಿದ್ದಾರೆ.
ಕುಟುಂಬದವರಿಗೆ ಅನುಮತಿ
ಈ ಸರಣಿ ವೇಳೆ ಭಾರತದ ಆಟಗಾರರಿಗೆ ಕುಟುಂಬದವರೊಂದಿಗೆ ತಂಗಲು ಬಿಸಿಸಿಐ ಅನುಮತಿ ನೀಡಿದೆ. ಆದರೆ ಕುಟುಂಬ ಸದಸ್ಯರೆಲ್ಲ ಕ್ರಿಕೆಟಿಗರಂತೆ ಕಟ್ಟುನಿಟ್ಟಿನ ಕ್ವಾರಂಟೈನ್‌ನಲ್ಲಿ ಇರಬೇಕು ಎಂದೂ ಸೂಸಿಚಿಸಿದೆ. ಐಪಿಎಲ್ ಹಾಗೂ ಕಳೆದ ಆಸ್ಟ್ರೇಲಿಯ ಪ್ರವಾಸದ ವೇಳೆ ಕ್ರಿಕೆಟಿಗರೊಂದಿಗೆ ಉಳಿಯಲು ಅವರ ಪರಿವಾರದವರಿಗೆ ಮಂಡಳಿ ಅನುಮತಿ ನೀಡಿರಲಿಲ್ಲ.
ಉಪನಾಯಕ ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ಧಿಮಾನ್ ಸಾಹಾ, ಹಾರ್ದಿಕ್ ಪಾಂಡ್ಯ ಅವರೆಲ್ಲ ತಮ್ಮ ಪತ್ನಿ-ಮಕ್ಕಳೊಂದಿಗಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.