ಸೌದಿ ಅರೇಬಿಯಾದಿಂದ ಕಚ್ಚಾ ತೈಲ ಆಮದು ಕಡಿತಕ್ಕೆ ಕೇಂದ್ರ ನಿರ್ಧಾರ
ಅಮೆರಿಕದಿಂದ ಹೆಚ್ಚಿನ ಪ್ರಮಾಣದ ಕಚ್ಚಾ ತೈಲ ಖರೀದಿಗೆ ಕ್ರಮ
Team Udayavani, Mar 18, 2021, 11:00 PM IST
ನವದೆಹಲಿ: ಸೌದಿ ಅರೇಬಿಯಾದಿಂದ ಕಚ್ಚಾ ತೈಲ ಆಮದು ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ಭಾರತ ನಿರ್ಧರಿಸಿದೆ. ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂಬ ಮನವಿಗೆ ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟ, ಒಪೆಕ್ ಪುರಸ್ಕರಿಸದೇ ಇದ್ದುದನ್ನು ಖಂಡಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಮಂಗಳೂರು ತೈಲ ಶುದ್ಧೀಕರಣಗಾರ ಮತ್ತು ಪೆಟ್ರೋಕೆಮಿಕಲ್ಸ್ ಜತೆಯಾಗಿ 10.8 ಮಿಲಿಯನ್ ಬ್ಯಾರಲ್ ಕಚ್ಚಾತೈಲವನ್ನು ಮಧ್ಯಪ್ರಾಚ್ಯ ಮತ್ತು ಕೊಲ್ಲಿ ರಾಷ್ಟ್ರಗಳಿಂದ ಖರೀದಿಸಿದ ಬಳಿಕ ಮೇ ಮಧ್ಯಭಾಗದಿಂದ ನಿರ್ಧಾರ ಜಾರಿಯಾಗಲಿದೆ. ಸೌದಿ ಅರೇಬಿಯಾದಿಂದಲೇ 14.7- 14.8 ಮಿಲಿಯ ಬ್ಯಾರಲ್ ಕಚ್ಚಾ ತೈಲವನ್ನು ಭಾರತ ಆಮದು ಮಾಡುತ್ತಿದೆ.
ಆ ಬಳಿಕ ಕಚ್ಚಾ ತೈಲವನ್ನು ಅಮೆರಿಕದಿಂದ ಖರೀದಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಕಚ್ಚಾ ತೈಲ ಉತ್ಪಾದನೆ ಕಡಿಮೆ ಮಾಡುವ ಒಪೆಕ್ ರಾಷ್ಟ್ರಗಳ ನಿರ್ಧಾರದಿಂದ ದೇಶದಲ್ಲಿ ತೈಲೋತ್ಪನ್ನಗಳ ದರ ಗಣನೀಯವಾಗಿ ಏರಿಕೆಯಾಗಿ, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸೌದಿ ಅರೇಬಿಯಾದಿಂದ ಮುಂದಿನ ತಿಂಗಳು ಕೂಡ ಕಚ್ಚಾ ತೈಲ ಭಾರತಕ್ಕೆ ಬರಲಿದೆ. ಮೇ ಬಳಿಕ ಸೌದಿ ಅರೇಬಿಯಾದಿಂದ ಎಷ್ಟು ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿ ಮಾಡಬೇಕು ಎಂಬ ಬಗ್ಗೆ ನಂತರ ತೀರ್ಮಾನಿಸಲಾಗುತ್ತದೆ.
ಇದನ್ನೂ ಓದಿ :ಐಫೋನ್ ತಯಾರಿಕಾ ಘಟಕ ಧ್ವಂಸ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.