ICC World Cup Test Championship ಫೈನಲ್: ಫಾಲೋಆನ್ ತಪ್ಪಿಸಲು ಭಾರತ ಪ್ರಯತ್ನ
Team Udayavani, Jun 9, 2023, 7:44 AM IST
ಲಂಡನ್: ಬಲಿಷ್ಠ ಆಸ್ಟ್ರೇಲಿಯ ವಿರುದ್ಧ ನಡೆಯುತ್ತಿರುವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹೋರಾಟದಲ್ಲಿ ಭಾರತ ಫಾಲೋಆನ್ ತಪ್ಪಿಸಲು ಪ್ರಯತ್ನ ನಡೆಸುತ್ತಿದೆ. ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್ ಗಳಿಸಿದ್ದರೆ ಭಾರತ ದ್ವಿತೀಯ ದಿನದ ಆಟದ ಮುಕ್ತಾಯಕ್ಕೆ ಈಗಾಗಲೇ ಐದು ವಿಕೆಟನ್ನು ಕಳೆದುಕೊಂಡಿದ್ದು 151 ರನ್ ಗಳಿಸಿದೆ. ಇನ್ನುಳಿದ ಐದು ವಿಕೆಟ್‌ಗಳಿಂದ ಭಾರತ ಫಾಲೋಆನ್ ತಪ್ಪಿಸಲು ಗರಿಷ್ಠ ಪ್ರಯತ್ನ ಮಾಡಬೇಕಾಗಿದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಬೇಕಾದರೆ ಇನ್ನೂ 318 ರನ್ ಗಳಿಸಬೇಕಾಗಿದೆ.
ಆರಂಭಿಕ ಬಳಿಕ ಟೆಸ್ಟ್ ಅನುಭವಿ ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ಅವರನ್ನು ತಂಡ ಕಳೆದುಕೊಂಡಿದೆ. ಪೂಜಾರ ಮತ್ತು ಕೊಹ್ಲಿ 14 ರನ್ನಿಗೆ ಔಟಾದರೆ ಜಡೇಜ 48 ರನ್ ಗಳಿಸಿ ಔಟಾದರು. ಅವರು ಅಜಿಂಕ್ಯ ರಹಾನೆ ಜತೆ ಐದನೇ ವಿಕೆಟಿಗೆ 71 ರನ್ ಪೇರಿಸಿದ್ದು ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ದ್ವಿತೀಯ ದಿನದ ಆಟ ನಿಂತಾಗ ರಹಾನೆ 29 ಮತ್ತು ಶ್ರೀಕರ್ ಭರತ್ 5 ರನ್ನಿನಿಂದ ಆಡುತ್ತಿದ್ದರು. ಮೂರನೇ ದಿನದ ಬೆಳಗ್ಗಿನ ಅವಧಿಯಲ್ಲಿ ಭಾರತ ಎಚ್ಚರಿಕೆಯಿಂದ ಆಡಿ ಫಾಲೋಆನ್ ತಪ್ಪಿಸಲು ಪ್ರಯತ್ನಿಸಬೇಕಾಗಿದೆ.
ಭಾರತದ ಬ್ಯಾಟಿಂಗ್ ಶಕ್ತಿಗೆ ಬಲವಾದ ಏಟು ನೀಡಿರುವ ಆಸ್ಟ್ರೇಲಿಯ ಸದ್ಯದ ಸ್ಥಿತಿಯಲ್ಲಿ ಮೇಲುಗೈ ಸಾಧಿಸಿದೆ. ಭಾರತದ ಐದು ವಿಕೆಟನ್ನು ಹಾರಿಸಿರುವ ಆಸ್ಟ್ರೇಲಿಯ ಇನ್ನುಳಿದ ವಿಕೆಟ್ ಉರುಳಿಸಲು ಪ್ರಯತ್ನ ಮಾಡುತ್ತಿದೆ. ಬೌಲಿಂಗ್ ಮಾಡಿದ ಐವರು ಬೌಲರ್‌ಗಳು ತಲಾ ಒಂದು ವಿಕೆಟ್ ಉರುಳಿಸಿದ್ದಾರೆ.
ಆರಂಭಿಕರ ಪತನ
ಟೀ ವಿರಾಮದ ಮೊದಲು 10 ಓವರ್ ಆಡಿದ ಭಾರತವು ಆರಂಭಿಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ನಾಯಕ ರೋಹಿತ್ ಶರ್ಮ 15 ರನ್ನಿಗೆ ಔಟಾದರೆ ಶುಭ್‌ಮನ್ ಗಿಲ್ ಅವರು ಸ್ಕಾಟ್ ಬೋಲ್ಯಾಂಡ್ ಅವರ ಎಸೆತವನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿ ಕ್ಲೀನ್‌ಬೌಲ್ಡ್ ಆದರು.
ಆಸ್ಟ್ರೇಲಿಯ 469ಕ್ಕೆ ಆಲೌಟ್
ಈ ಮೊದಲು ಮೂರು ವಿಕೆಟಿಗೆ 327 ರನ್ನುಗಳಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯ ತಂಡವು ಟ್ರ್ಯಾವಿಸ್ ಹೆಡ್, ಸ್ಮಿತ್ ಮತ್ತು ಕ್ಯಾರಿ ಅವರ ಉತ್ತಮ ಆಟದಿಂದಾಗಿ 469 ರನ್ ಗಳಿಸಿ ಆಲೌಟಾಯಿತು. ಮೊದಲ ದಿನ ಅಜೇಯರಾಗಿ ಉಳಿದಿದ್ದ ಹೆಡ್ ಮತ್ತು ಸ್ಮಿತ್ ಆಟ ಮುಂದುವರಿಸಿದ್ದು ನಾಲ್ಕನೇ ವಿಕೆಟಿಗೆ 285 ರನ್ನುಗಳ ಜತೆಯಾಟ ನಡೆಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ಮೊದಲ ದಿನ 95 ರನ್ ಗಳಿಸಿದ್ದ ಸ್ಮಿತ್ ದ್ವಿತೀಯ ದಿನ ಸಿರಾಜ್ ಅವರ ಬೌಲಿಂಗ್‌ನಲ್ಲಿ ಎರಡು ಬೌಂಡರಿ ಬಾರಿಸಿ ಶತಕ ಪೂರ್ತಿಗೊಳಿಸಿದರು. ಇದು ಇಂಗ್ಲೆಂಡಿನಲ್ಲಿ ಅವರ ಏಳನೇ ಮತ್ತು ಓವಲ್‌ನಲ್ಲಿ ಮೂರನೇ ಶತಕವಾಗಿದೆ. ಒಟ್ಟಾರೆ ಟೆಸ್ಟ್ ಬಾಳ್ವೆಯ 31ನೇ ಶತಕ ಆಗಿದೆ. ಸ್ಮಿತ್ ಅಂತಿಮವಾಗಿ 268 ಎಸೆತ ಎದುರಿಸಿ 121 ರನ್ ಗಳಿಸಿ ಔಟಾದರು. ಮೊದಲ ದಿನ ಶತಕ ಸಿಡಿಸಿ ಸಂಭ್ರಮಿಸಿದ್ದ ಹೆಡ್ 174 ಎಸೆತಗಳಿಂದ 163 ರನ್ ಗಳಿಸಿ ಔಟಾದರು. 25 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು.
ಕೊನೆ ಹಂತದಲ್ಲಿ ಅಲೆಕ್ಸ್ ಕ್ಯಾರಿ ಬಿರುಸಿನ ಆಟ ಆಡಿದ್ದರಿಂದ ಆಸ್ಟ್ರೇಲಿಯದ ಮೊತ್ತ 450ರ ಗಡಿ ದಾಟುವಂತಾಯಿತು. ಅವರು 69 ಎಸೆತಗಳಿಂದ 48 ರನ್ ಹೊಡೆದರು. ಈ ನಡುವೆ ಭಾರತ ಬೆಳಗ್ಗಿನ ಅವಧಿಯಲ್ಲಿ ಆಸ್ಟ್ರೇಲಿಯದ ನಾಲ್ಕು ವಿಕೆಟ್ ಕಿತ್ತ ಕಾರಣ ಸ್ವಲ್ಪಮಟ್ಟಿಗೆ ಮೇಲುಗೈ ಸಾಧಿಸಿತ್ತು.
ಬಿಗು ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ 108 ರನ್ನಿಗೆ 4 ವಿಕೆಟ್ ಪಡೆದರೆ ಶಮಿ ಮತ್ತು ಠಾಕೂರ್ ತಲಾ ಎರಡು ವಿಕೆಟ್ ಕಿತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.