ಭಾರತದ ವಿರುದ್ಧ Germany ನಿಯತಕಾಲಿಕ ವ್ಯಂಗ್ಯಚಿತ್ರ
Team Udayavani, Apr 26, 2023, 8:06 AM IST
ನವದೆಹಲಿ: ಇತ್ತೀಚೆಗಷ್ಟೇ ಭಾರತದ ಜನಸಂಖ್ಯೆ, ಚೀನಾವನ್ನು ಮೀರಿದ್ದಕ್ಕಾಗಿ ಜರ್ಮನಿಯ ನಿಯತಕಾಲಿಕೆಯೊಂದು ಭಾರತದ ವಿರುದ್ಧ ಅವಹೇಳನಾತ್ಮಕ ವ್ಯಂಗ್ಯಚಿತ್ರ ರಚಿಸಿದ್ದು, ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಡೆರ್‌ಸ್ಪೈಗಲ್ ಎನ್ನುವ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ವ್ಯಂಗ್ಯಚಿತ್ರದಲ್ಲಿ ಭಾರತದ ಸಾಮಾನ್ಯ ರೈಲೊಂದರಲ್ಲಿ ತ್ರಿವರ್ಣ ಹಿಡಿದ ಜನರು ತುಂಬಿ ತುಳುಕುತ್ತಿರುವಂತೆ, ಮತ್ತೂಂದೆಡೆ ಚೀನಾದ ಇಬ್ಬರೇ ಚಾಲಕರು ಬುಲೆಟ್ ಟ್ರೈನ್‌ನಲ್ಲಿ ಸಂಚರಿಸುತ್ತಿರುವಂತೆ ಚಿತ್ರಿಸಲಾಗಿದೆ. ಇದನ್ನು ಜನಸಂಖ್ಯೆ ಹೆಚ್ಚುತ್ತಿದೆಯೇ ವಿನಾ ಅಭಿವೃದ್ಧಿಯಲ್ಲ ಎಂಬರ್ಥದಲ್ಲಿ ಬರೆಯಲಾಗಿದೆ.
ಈ ಚಿತ್ರದ ಬಗ್ಗೆ ಕೇಂದ್ರ ಸಚಿವ ರಾಜೀವ್‌ಚಂದ್ರಶೇಖರ್ ಪ್ರತಿಕ್ರಿಯಿಸಿ, “ಆತ್ಮೀಯ ವ್ಯಂಗ್ಯ ಚಿತ್ರಕಾರರೇ, ಭಾರತವನ್ನು ಅಪಹಾಸ್ಯ ಮಾಡುವ ನಿಮ್ಮ ಪ್ರಯತ್ನದ ಹೊರತಾಗಿಯೂ ಸಲಹೆ ನೀಡುತ್ತಿದ್ದೇನೆ. ಪ್ರಧಾನಿ ಮೋದಿ ನೇತೃತ್ವದ ಭಾರತದ ಜತೆಗೆ ಸವಾಲಿಗಿಳಿಯುವುದು ಜಾಣತನವಲ್ಲ. ಏಕೆಂದರೆ ಇನ್ನು ಕೆಲವೇ ವರ್ಷಗಳಲ್ಲಿ ಭಾರತದ ಆರ್ಥಿಕತೆ ಜರ್ಮನಿಯನ್ನೂ ಮೀರಿರಲಿದೆ’ ಎಂದಿದ್ದಾರೆ. ಸಲಹೆಗಾರರು, ತಜ್ಞರೂ ಆದ ಕಾಂಚನ್ ಗುಪ್ತಾ ಕೂಡ ಪ್ರತಿಕ್ರಿಯಿಸಿ, ನಿಮ್ಮ ಈ ಪ್ರಯತ್ನಗಳು ನಿಮ್ಮ ಭೇದ ಹಾಗೂ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ. ಆದಾಗ್ಯೂ ನಿಮ್ಮ ವ್ಯಂಗ್ಯ ಚಿತ್ರಕ್ಕೂ, ಭಾರತದ ವಾಸ್ತವಕ್ಕೂ ಬಹಳ ವ್ಯತ್ಯಾಸವಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.