ಪಿಂಕ್ ಬಾಲ್ ಟೆಸ್ಟ್ : ಲಂಕಾ ಬಿಗು ದಾಳಿ; 252 ಕ್ಕೆ ಟೀಮ್ ಇಂಡಿಯಾ ಆಲೌಟ್
ಶತಕದ ನಿರೀಕ್ಷೆ ಇಟ್ಟಿದ್ದ ಕೊಹ್ಲಿಯೂ ವಿಫಲ
Team Udayavani, Mar 12, 2022, 7:05 PM IST
ಬೆಂಗಳೂರು : ಪ್ರವಾಸಿ ಶ್ರೀಲಂಕಾ ಎದುರು ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಶನಿವಾರ ಆರಂಭವಾಗಿರುವ ಸರಣಿಯ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 59.1 ಓವರ್ ಗಳಲ್ಲಿ 252 ರನ್ ಗಳ ಅಲ್ಪ ಮೊತ್ತಕ್ಕೆ ತನ್ನ ಮೊದಲ ಇನ್ನಿಂಗ್ಸ್ ಅಂತ್ಯ ಗೊಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ರೋಹಿತ್ ಬಳಗ 10 ರನ್ ಆಗುವಷ್ಟರಲ್ಲಿ ಮಯಾಂಕ್ ಅಗರ್ವಾಲ್ ಅವರು ರನ್ ಔಟ್ ಆಗಿ ನಿರ್ಗಮಿಸಿ ಆರಂಭಿಕ ಆಘಾತ ಅನುಭವಿಸಿತು. ತಂಡದ ಮೊತ್ತ 29 ರನ್ ಆಗಿದ್ದ ವೇಳೆ ರೋಹಿತ್ ಶರ್ಮಾ ಔಟಾದರು.
ಹನುಮ ವಿಹಾರಿ 31, ಬೆಟ್ಟದಷ್ಟು ನಿರೀಕ್ಷೆ ಹೊಂದಿದ್ದ ವಿರಾಟ್ ಕೊಹ್ಲಿ23 ರನ್ ಗಳಿಗೆ ಔಟಾದರು. ರಿಷಬ್ ಪಂತ್ 39 ರನ್ ಗಳಿಸಿ ಔಟಾದರು.ಉತ್ತಮ ಆಟವಾಡಿದ ಶ್ರೇಯಸ್ ಅಯ್ಯರ್ ಗರಿಷ್ಠ 92 ರನ್ ಗಳಿಸಿ ಔಟಾಗುವ ಮೂಲಕ ಶತಕದ ಸಮೀಪದಲ್ಲಿ ಎಡವಿ ಭಾರಿ ನಿರಾಸೆ ಅನುಭವಿಸಿದರು. 98 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ ಗಳನ್ನೊಳಗೊಂಡ ಸ್ಪೋಟಕ ಆಟ ಅವರದ್ದಾಗಿತ್ತು. ರವೀಂದ್ರ ಜಡೇಜಾ 4 , ರವಿಚಂದ್ರನ್ ಅಶ್ವಿನ್ 13, ಅಕ್ಷರ್ ಪಟೇಲ್ 9 , ಮೊಹಮ್ಮದ್ ಶಮಿ 5 ರನ್ ಗಳಿಸಿದರು. ಜಸ್ಪ್ರೀತ್ ಬುಮ್ರಾ ಕೊನೆಯವರಾಗಿ ಔಟಾಗದೆ ಉಳಿದರು.
ಲಂಕಾ ಪರ ಬಿಗು ದಾಳಿ ನಡೆಸಿದ ಲಸಿತ್ ಎಂಬುಲ್ದೇನಿಯ ಮತ್ತು ಪ್ರವೀಣ್ ಜಯವಿಕ್ರಮ ತಲಾ 3 ವಿಕೆಟ್ ಪಡೆದು ಮಿಂಚಿದರು. ಧನಂಜಯ ಡಿ ಸಿಲ್ವಾ 2 ಮತ್ತು ಸುರಂಗ ಲಕ್ಮಲ್ 1 ವಿಕೆಟ್ ಪಡೆದರು.
ಮೊದಲ ಟೆಸ್ಟ್ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 222 ರನ್ಗಳ ಜಯ ಸಾಧಿಸಿತ್ತು. ಈ ಟೆಸ್ಟ್ ಐದು ದಿನಗಳ ಕಾಲ ನಡೆಯುವುದು ಅನುಮಾನ ಎನ್ನುವ ಹಾಗೆ ಇಂದಿನ ಮೊದಲ ಇನ್ನಿಂಗ್ಸ್ ಆಟ ಕಂಡು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.