ಹಾಕಿ: ವನಿತೆಯರಿಗೆ ಮತ್ತೊಂದು ಸೋಲು
Team Udayavani, Jan 30, 2021, 12:23 AM IST
ಬ್ಯೂನಸ್ ಐರಿಸ್ (ಆರ್ಜೆಂಟೀನಾ): ಆರ್ಜೆಂಟೀನಾ ಪ್ರವಾಸದಲ್ಲಿರುವ ಭಾರತದ ಮಹಿಳಾ ಹಾಕಿ ತಂಡ ಮತ್ತೂಂದು ಆಘಾತಕ್ಕೆ ಸಿಲುಕಿದೆ. ಶುಕ್ರವಾರದ ಪಂದ್ಯದಲ್ಲಿ ಆರ್ಜೆಂಟೀನಾ ವಿರುದ್ಧ 0-2 ಗೋಲುಗಳಿಂದ ಎಡವಿದೆ.
ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಆರ್ಜೆಂಟೀನಾ ಎರಡೇ ನಿಮಿಷದಲ್ಲಿ ಗೋಲು ಬಾರಿಸುವಲ್ಲಿ ಯಶಸ್ವಿಯಾಯಿತು. ಬಳಿಕ ಭಾರತೀಯ ಆಟಗಾರರು ಶಕ್ತಿಮೀರಿ ಪ್ರಯತ್ನಿಸಿದರೂ ಗೋಲು ಮರೀಚಿಕಯೇ ಆಗುಳಿಯಿತು.
ಅಂತಿಮ ಕ್ವಾರ್ಟರ್‌ನ 54ನೇ ನಿಮಿಷದಲ್ಲಿ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಯಶಸ್ವಿಗೊಳಿಸಿದ ಆರ್ಜೆಂಟೀನಾ ಮತ್ತೂಂದು ಗೋಲು ಬಾರಿಸಿತು. ಮೊದಲ ಪಂದ್ಯವನ್ನು ಭಾರತ 2-3ರಿಂದ ಕಳೆದುಕೊಂಡಿತ್ತು.
ಈ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ತೋರಿದರೆ ಒಲಿಪಿಂಕ್ಸ್ ಪದಕ ಗೆಲ್ಲುವ ಭರವಸೆ ಇಡಬಹುದು ಎಂದು ನಾಯಕಿ ರಾಣಿ ರಾಮ್‌ಪಾಲ್ ಹೇಳಿದ್ದರು. ಆದರೆ ಭಾರತದ ಪ್ರದರ್ಶನ ಮಾತ್ರ ಪಂದ್ಯದಿಂದ ಪಂದ್ಯಕ್ಕೆ ಕಳಪೆಯಾಗುತ್ತಲೇ ಹೋಗುತ್ತಿರುವುದು ವಿಪರ್ಯಾಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.