ವನಿತಾ ಏಕದಿನ: ದಕ್ಷಿಣ ಆಫ್ರಿಕಾವನ್ನು ಕೆಡವಿದ ಭಾರತ
Team Udayavani, Mar 10, 2021, 12:40 AM IST
ಲಕ್ನೋ: ಹಿರಿಯ ವೇಗಿ ಜೂಲನ್ ಗೋಸ್ವಾಮಿ ಅವರ ಘಾತಕ ಬೌಲಿಂಗ್, ಸ್ಮೃತಿ ಮಂಧನಾ-ಪೂನಂ ರಾವತ್ ಜೋಡಿಯ ಅಜೇಯ ಬ್ಯಾಟಿಂಗ್ ಪರಾಕ್ರಮದಿಂದ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಂಗಳವಾರದ ಪಂದ್ಯವನ್ನು 9 ವಿಕೆಟ್‌ಗಳಿಂದ ಭರ್ಜರಿ ಯಾಗಿ ಗೆದ್ದು ಸರಣಿಯನ್ನು 1-1 ಸಮಬಲಕ್ಕೆ ತಂದಿದೆ.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪ್ರವಾಸಿ ದಕ್ಷಿಣ ಆಫ್ರಿಕಾಕ್ಕೆ ಆತಿಥೇಯರ ಶಿಸ್ತಿನ ಹಾಗೂ ಘಾತಕ ಬೌಲಿಂಗ್ ತಲೆನೋವಾಗಿ ಪರಿಣಮಿಸಿತು. 41 ಓವರ್‌ಗಳಲ್ಲಿ 157 ರನ್ನುಗಳ ಸಣ್ಣ ಮೊತ್ತಕ್ಕೆ ಆಲೌಟ್ ಆಯಿತು. ಜವಾಬಿತ್ತ ಭಾರತ 28.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 160 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
ಮೊದಲ ಮುಖಾಮುಖೀಯಲ್ಲಿ ಭಾರತ 8 ವಿಕೆಟ್ ಸೋಲನುಭವಿಸಿತ್ತು. 3ನೇ ಪಂದ್ಯ ಶುಕ್ರವಾರ ನಡೆಯಲಿದೆ.
ಮಿಂಚಿನ ದಾಳಿ
ವೇಗಿಗಳಾದ ಜೂಲನ್ ಗೋಸ್ವಾಮಿ ಮತ್ತು ಮಾನ್ಸಿ ಜೋಶಿ ದಕ್ಷಿಣ ಆಫ್ರಿಕಾದ ಅಗ್ರ ಸರದಿಯನ್ನು ನಡುಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ತಂಡ ಚೇತರಿಕೆ ಕಂಡಿತೆನ್ನುವಷ್ಟರಲ್ಲಿ ಕರ್ನಾಟಕದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಘಾತಕ ವಾಗಿ ಪರಿಣಮಿಸಿದರು. ಹೀಗಾಗಿ ತಂಡಕ್ಕೆ ಸವಾಲಿನ ಮೊತ್ತ ಮರೀಚಿಕೆಯಾಗಿ ಪರಿಣಮಿಸಿತು.
ಜೂಲನ್ ಗೋಸ್ವಾಮಿ 4, ರಾಜೇಶ್ವರಿ ಗಾಯಕ್ವಾಡ್ 3 ಹಾಗೂ ಮಾನ್ಸಿ 2 ವಿಕೆಟ್ ಕೆಡವಿದರು. 49 ರನ್ ಮಾಡಿದ ಲಾರಾ ಗುಡಾಲ್ ಅವರದು ದಕ್ಷಿಣ ಆಫ್ರಿಕಾ ಸರದಿಯ ಗರಿಷ್ಠ ಮೊತ್ತ. ನಾಯಕಿ ಸುನೆ ಲೂಸ್ 36 ರನ್ ಮಾಡಿದರು. ಇವರಿಬ್ಬರ 3ನೇ ಜತೆಯಾಟದಲ್ಲಿ 60 ರನ್ ಹರಿದು ಬಂತು. 77 ರನ್ ಅಂತರದಲ್ಲಿ ಕೊನೆಯ 8 ವಿಕೆಟ್ ಉರುಳಿತು.
ಇದನ್ನೂ ಓದಿ :ಭಾರತದ ಸ್ಟಾರ್ ಚೆಸ್ ಆಟಗಾರ್ತಿ ಕೊನೆರು ಹಂಪಿಗೆ ಬಿಬಿಸಿ ಪ್ರಶಸ್ತಿ
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-41 ಓವರ್‌ಗಳಲ್ಲಿ 157 (ಗುಡಾಲ್ 49, ಲೂಸ್ 36, ಜೂಲನ್ 42ಕ್ಕೆ 4, ರಾಜೇಶ್ವರಿ ಗಾಯಕ್ವಾಡ್ 37ಕ್ಕೆ 3, ಮಾನ್ಸಿ 23ಕ್ಕೆ 2). ಭಾರತ-28.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 160 (ಮಂಧನಾ ಔಟಾಗದೆ 80, ಪೂನಂ ಔಟಾಗದೆ 62, ಶಬಿ°ಮ್ 46ಕ್ಕೆ 1). ಪಂದ್ಯಶ್ರೇಷ್ಠ: ಜೂಲನ್ ಗೋಸ್ವಾಮಿ.
ಮಂಧನಾ ಮಿಂಚಿನ ಆಟ
10 ರನ್ ಆಗುವಷ್ಟರಲ್ಲಿ ಜೆಮಿಮಾ ರೋಡ್ರಿಗಸ್ (9) ವಿಕೆಟ್ ಕಳೆದು ಕೊಂಡು ಅಪಾಯಕ್ಕೆ ಸಿಲುಕಿದ ಭಾರತಕ್ಕೆ ಸ್ಮೃತಿ ಮಂಧನಾ- ಪೂನಂ ರಾವತ್ ಸೇರಿಕೊಂಡು ರಕ್ಷಣೆ ಒದಗಿಸಿದರು. ಹರಿಣಗಳ ಬೌಲಿಂಗ್ ಪಡೆಯ ಮೇಲೆ ಸವಾರಿ ಮಾಡಿದ ಈ ಜೋಡಿ ಕೊನೆಯ ತನಕವೂ ಕ್ರೀಸ್ ಬಿಟ್ಟು ಕದಲಲಿಲ್ಲ. ಮುರಿಯದ ದ್ವಿತೀಯ ವಿಕೆಟಿಗೆ ಭರ್ತಿ 150 ರನ್ ಬಾರಿಸಿ ಭಾರತಕ್ಕೆ ಮಹೋನ್ನತ ಜಯವೊಂದನ್ನು ತಂದಿತ್ತರು.
ಇದರಲ್ಲಿ ಮಂಧನಾ ಕೊಡುಗೆ ಅಜೇಯ 80 ರನ್. 64 ಎಸೆತಗಳ ಈ ಅತ್ಯಾಕರ್ಷಕ ಆಟದಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು. ಮಂಧನಾ ಹೊರತುಪಡಿಸಿ ಈ ಪಂದ್ಯದಲ್ಲಿ ಬೇರೆ ಯಾರಿಂದಲೂ ಸಿಕ್ಸರ್ ದಾಖಲಾಗಲಿಲ್ಲ. ಮಂಧನಾ ಕಳೆದ 5 ಪಂದ್ಯಗಳಲ್ಲಿ ಬಾರಿಸಿದ 4ನೇ ಅರ್ಧ ಶತಕ ಇದಾಗಿದೆ. ಪೂನಂ ರಾವತ್ ಕೊಡುಗೆ 89 ಎಸೆತಗಳಿಂದ 62 ರನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.