Archery: ಆರ್ಚರಿ ಚಿನ್ನದತ್ತ ಭಾರತದ ದೃಷ್ಟಿ
Team Udayavani, Apr 22, 2023, 6:26 AM IST
ಅಂಟಾಲ್ಯ (ಟರ್ಕಿ): “ಆರ್ಚರಿ ವಿಶ್ವಕಪ್ ಸ್ಟೇಜ್-1” ಸ್ಪರ್ಧೆಯಲ್ಲಿ ಭಾರತ ಅವಳಿ ಚಿನ್ನದ ಮೇಲೆ ಕಣ್ಣಿಟ್ಟಿದೆ. ವನಿತಾ ಕಂಪೌಂಡ್ ಮಿಕ್ಸೆಡ್ ವಿಭಾಗದಲ್ಲಿ ಜ್ಯೋತಿ ಸುರೇಖಾ ವೆನ್ನಮ್-ಓಜಸ್ ಪ್ರವೀಣ್ ದೇವತಾಲೆ ಮತ್ತು ಪುರುಷರ ರಿಕರ್ವ್ ತಂಡ ಸ್ಪರ್ಧೆಯಲ್ಲಿ ಅತನು ದಾಸ್, ಬಿ. ಧೀರಜ್ ಮತ್ತು ತರುಣ್‌ದೀಪ್ ರಾಯ್ ಅವರನ್ನೊಳಗೊಂಡ ತಂಡ ಫೈನಲ್ ಪ್ರವೇಶಿಸಿದೆ.
ಸುರೇಖಾ ವೆನ್ನಮ್ ಅವರ ನೂತನ ಜೋಡಿಯಾಗಿ ಓಜಸ್ ದೇವತಾಲೆ ಇದೇ ಮೊದಲ ಸಲ ಸ್ಪರ್ಧೆಗೆ ಇಳಿದಿದ್ದರು. ಇವರು ಮಲೇಷ್ಯಾದ ಫಾತಿನ್ ನುಫತೇಹ್ ಮತ್ ಸಲೇಹ್-ಮೊಹಮ್ಮದ್ ಜುವೈದಿ ಮಝುಕಿ ವಿರುದ್ಧ 157-154 ಅಂತರದ ರೋಚಕ ಜಯ ಸಾಧಿಸಿದರು. 12ನೇ ಶ್ರೇಯಾಂಕದ ಚೈನೀಸ್ ತೈಪೆ ಜೋಡಿ ಚೆನ್ ಇ ಸುವಾನ್-ಚೆಮ್ ಚೀ ಲುನ್ ವಿರುದ್ಧ ಶನಿವಾರ ಫೈನಲ್ ನಡೆಯಲಿದೆ.
ಅತನು ದಾಸ್, ಬಿ. ಧೀರಜ್ ಮತ್ತು ತರುಣ್‌ದೀಪ್ ರಾಯ್ ಅವರಿಗೆ ಚೀನದ ತಂಡ ಎದುರಾಗಲಿದೆ. ರಿಕರ್ವ್ ತಂಡ ಸ್ಪರ್ಧೆಯ ಫೈನಲ್ ರವಿವಾರ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.