ಹಕ್ಕಿಜ್ವರಕ್ಕೆ ದೇಶದಲ್ಲಿ ಮೊದಲ ಸಾವು :ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ
Team Udayavani, Jul 21, 2021, 9:32 PM IST
ನವದೆಹಲಿ: ಹಕ್ಕಿಜ್ವರದಿಂದಾಗಿ ನವದೆಹಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ವರ್ಷದ ಬಾಲಕ ಅಸುನೀಗಿದ್ದಾನೆ. ಪಕ್ಷಿಗಳಲ್ಲಿ ಕಂಡುಬರುವ ಈ ಜ್ವರದಿಂದಾಗಿ ದೇಶದಲ್ಲಿ ಅಸುನೀಗಿದ ಮೊದಲ ಬಲಿ ಈತ. ಹರ್ಯಾಣದ ಬಾಲಕನಾಗಿರುವ ಆತನನ್ನು ತೀವ್ರ ಜ್ವರದ ಹಿನ್ನೆಲೆಯಲ್ಲಿ ಜು.2ರಂದು ಏಮ್ಸ್‌ಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯ ಮೂಲಗಳು ತಿಳಿಸಿರುವ ಪ್ರಕಾರ ಬಾಲಕನಿಗೆ ಕೊರೊನಾ ಸೋಂಕು ಇರಬಹುದೆಂದು ತರ್ಕಿಸಲಾಗಿತ್ತು. ಆತನಿಗೆ ಸೋಂಕು ಪತ್ತೆ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್ ಬಂದಿತ್ತು. ಆತನನ್ನು ಇತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಹಕ್ಕಿಜ್ವರ ಇದ್ದದ್ದು ದೃಢವಾಯಿತು ಎಂದು ತಿಳಿಸಿವೆ.
15 ವರ್ಷಗಳಲ್ಲಿ ದೇಶದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದರೂ, ಕೋಳಿ ಸಾಕಣೆ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಯಾಗಿತ್ತು. ಆದರೆ, ಮಾನವರು ಅದರಿಂದಾಗಿ ಅಸುನೀಗಿರಲಿಲ್ಲ.
ಇದನ್ನೂ ಓದಿ :ತೆಲಂಗಾಣಕ್ಕೆ ಮೈಕ್ರೋಸ್ಟಾಫ್ಟ್ ಜಾಕ್‌ಪಾಟ್ :15000 ಕೋಟಿ ಮೌಲ್ಯದ ಡೇಟಾ ಸೆಂಟರ್ ಸ್ಥಾಪನೆ
ಐಸೊಲೇಷನ್‌ನಲ್ಲಿ ಕುಟುಂಬಸ್ಥರು:
ಅಸುನೀಗಿದ ಬಾಲಕನಿಂದಾಗಿ ಹಕ್ಕಿ ಜ್ವರ ಇತರರಿಗೆ ತಗಲಿದೆಯೇ ಎಂದು ದೃಢಪಡಿಸಲು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು, ದಾದಿಯರು ಮತ್ತು ಕುಟುಂಬ ಸದಸ್ಯರನ್ನು ಐಸೊಲೇಷನ್‌ನಲ್ಲಿ ಇರಿಸಲು ಸೂಚಿಸಲಾಗಿದೆ.
ಭಯ ಬೇಡ: ಡಾ. ಸುರ್ಜೆವಾಲಾ
ಮಾನವನಿಂದ ಮಾನವನಿಗೆ ಹಕ್ಕಿಜ್ವರ ಎಚ್5ಎನ್1 ಹರಡುವುದು ತೀರಾ ಅಪರೂಪ. ಹೀಗಾಗಿ, ಭೀತಿಗೆ ಒಳಗಾಗ ಬೇಕಾದ ಅಗತ್ಯವಿಲ್ಲ ಎಂದು ನವದೆಹಲಿ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ. ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ ಕೂಡ ಬಾಲಕನಿಗೆ ಹಕ್ಕಿಜ್ವರ ತಗಲಿದ್ದನ್ನು ದೃಢಪಡಿಸಿದೆ ಎಂದು ಅವರು ಹೇಳಿದ್ದಾರೆ. ಹಕ್ಕಿಗಳಿಂದ ಮಾನವನಿಗೆ ಜ್ವರ ತಗಲುತ್ತದೆ ಎಂಬ ಅಂಶವನ್ನೂ ಇನ್ನೂ ಅಧ್ಯಯನದ ಮೂಲಕ ಸಾಬೀತುಪಡಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.