![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 23, 2020, 7:49 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಣಿಪಾಲ: ಭಾರತದ ಮೊಬೈಲ್ ಫೋನ್ ಮಾರುಕಟ್ಟೆ ಸ್ಥಿರವಾಗಿ ಬೆಳೆಯುತ್ತಿದೆ. ಇತ್ತೀಚಿನ ಅಧ್ಯಯನದ ಪ್ರಕಾರ 2020ರಲ್ಲಿ ಭಾರತದ ಮೊಬೈಲ್ ಫೋನ್ ರಫ್ತು ಮೌಲ್ಯ1.5 ಬಿಲಿಯನ್ ಡಾಲರ್ (ಅಂದರೆ 1110 ಕೋಟಿ ರೂ.) ರಷ್ಟನ್ನು ದಾಖಲಿಸಿದೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಶೇ. 98ರಷ್ಟು ಸ್ಮಾರ್ಟ್‌ಫೋನ್‌ಗಳಾಗಿವೆ.
ಸಂಶೋಧನ ಸಂಸ್ಥೆ ಟೆಕ್‌ಆರ್ಕ್ ಪ್ರಕಾರ, 2020ರ ಜನವರಿಯಿಂದ ಸೆಪ್ಟಂಬರ್ ವರೆಗೆ ಒಟ್ಟು 1.28 ಕೋಟಿ ಮೊಬೈಲ್ ಫೋನ್‌ಗಳನ್ನು ಭಾರತ ರಫ್ತು ಮಾಡಿದೆ. ಇದರಲ್ಲಿ 1.09 ಕೋಟಿ ಸ್ಮಾರ್ಟ್‌ಫೋನ್‌ಗಳಾಗಿವೆ. ರಫ್ತುಗಳಲ್ಲಿ 16.6 ಮಿಲಿಯನ್ ಯುನಿಟ್‌ಗಳೂಂದಿಗೆ ಸ್ಯಾಮ್ಸಂಗ್ ಮುಂಚೂಣಿಯಲ್ಲಿದೆ. ಅದರಲ್ಲಿ 98 ಮಿಲಿಯನ್ ಸ್ಮಾರ್ಟ್‌ಫೋನ್‌ಗಳಾಗಿವೆ.
ಬಳಿಕದ ಸ್ಥಾನದಲ್ಲಿ ಶಿಯೋಮಿ 6 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದು, ಲಾವಾ 2 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ. ಟಾಪ್ -5 ರಲ್ಲಿರುವ ಇತರ ಸಂಸ್ಥೆಗಳೆಂದರೆ ವಿವೋ ಮತ್ತು ಒನ್‌ಪ್ಲಸ್.
24 ದೇಶಗಳಿಗೆ ರಫ್ತು
ಟೆಕ್‌ಆರ್ಕ್ ಪ್ರಕಾರ ಭಾರತವು 24 ದೇಶಗಳಿಗೆ ರಫ್ತು ಮಾಡುತ್ತಿದೆ. ಅವುಗಳಲ್ಲಿ ಕೆಲವು ಮರು ರಫ್ತು ಮಾಡುತ್ತಿವೆ, ಉದಾಹರಣೆಗೆ ಯುಎಇ. ಈ ರಾಷ್ಟ್ರ ಭಾರತದಲ್ಲಿ ತಯಾರಿಸಿದ ಸ್ಮಾರ್ಟ್‌ಫೋನ್‌ಗಳನ್ನು ಲಕ್ಷಾಂತರ ಬಳಕೆದಾರರಿಗೆ ಒದಗಿಸುತ್ತದೆ. ಯುಎಇ, ಅಮೆರಿಕ, ರಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಇಟಲಿ ಭಾರತದಿಂದ ಆಮದು ಮಾಡುವ ಪ್ರಮುಖ ಸಂಸ್ಥೆಯಾಗಿದೆ.
ರಫ್ತಿನ ಮೇಲೆ ತೀವ್ರ ಪರಿಣಾಮ ಬೀರಿದ ಕೋವಿಡ್
ಕೋವಿಡ್ 19 ರಫ್ತಿನ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ಜನವರಿ-ಮಾರ್ಚ್ ಅವಧಿಯಲ್ಲಿ 74 ಲಕ್ಷ ಯುನಿಟ್‌ಳಷ್ಟಿದ್ದ ಮಾರುಕಟ್ಟೆ ಎಪ್ರಿಲ…-ಜೂನ್ ತ್ತೈಮಾಸಿಕದಲ್ಲಿ 1.2 ಮಿಲಿಯನ್ ಯೂನಿಟ್‌ಗಳಿಗೆ ಇಳಿದಿದೆ. ಜುಲೈ-ಸೆಪ್ಟಂಬರ್ ತ್ತೈಮಾಸಿಕದಲ್ಲಿ 42 ಲಕ್ಷ ಯುನಿಟ್ ರಫ್ತು ಆಗಿದ್ದು, ಪೂರೈಕೆ ಸರಪಳಿ ಮತ್ತು ಜಾರಿ ವ್ಯವಸ್ಥೆಗಳ ಪುನಃಸ್ಥಾಪನೆಯಿಂದ ಚೇತರಿಕೆ ಸೂಚಿಸುತ್ತದೆ ಎಂದು ವರದಿ ತಿಳಿಸಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.