ಇಂಡೋನೇಷ್ಯಾ: ಪ್ರಬಲ ಭೂಕಂಪನ, ಕುಸಿದು ಬಿದ್ದ ಆಸ್ಪತ್ರೆ; ಅವಶೇಷಗಳಡಿ ರೋಗಿಗಳು
ಆಸ್ಪತ್ರೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದಾಗಿ ಮಾಮುಜು ನಗರದ ರಕ್ಷಣಾ ಏಜೆನ್ಸಿ ಏರಿಯಾನಾಟೋ ತಿಳಿಸಿದೆ.
Team Udayavani, Jan 15, 2021, 10:34 AM IST
ಜಕಾರ್ತಾ/ಇಂಡೋನೇಷ್ಯಾ: ಇಂಡೋನೇಷ್ಯಾದ ಸುಲಾವೇಸಿ ದ್ವೀಪಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಆಸ್ಪತ್ರೆಯೊಂದು ಕುಸಿದು ಬಿದ್ದಿದ್ದು ಹಲವಾರು ಮಂದಿ ರೋಗಿಗಳು ಅವಶೇಷಗಳಡಿಯಲ್ಲಿ ಸಿಲುಕಿದ್ದು, ಮೂವರು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಆಸ್ಪತ್ರೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದಾಗಿ ಮಾಮುಜು ನಗರದ ರಕ್ಷಣಾ ಏಜೆನ್ಸಿ ಏರಿಯಾನಾಟೋ ತಿಳಿಸಿದೆ.
ಆಸ್ಪತ್ರೆಯ ಅವಶೇಷಗಳಡಿ ರೋಗಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಇದನ್ನೂ ಓದಿ:ಸಂತೋಷ ಕೂಟಕ್ಕೆ ಹೊರಟವರು ಮಸಣ ಸೇರಿದರು!: ಭೀಕರ ಅಪಘಾತದಲ್ಲಿ 9 ಮಹಿಳೆಯರು ಸೇರಿ 11 ಸಾವು
ಆದರೆ ಘಟನೆಯಲ್ಲಿ ಎಷ್ಟು ಮಂದಿ ರೋಗಿಗಳು ಅವಶೇಷಗಳಡಿ ಸಿಲುಕಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಅಂಕಿ ಅಂಶ ನೀಡಿಲ್ಲ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.